ಏರೋ ಇಂಡಿಯಾ ಬೆಂಕಿ ಅನಾಹುತ: ಕಾರು ಮಾಲೀಕರಿಗೆ ಸಹಾಯವಾಣಿ
ಬೆಂಗಳೂರು, ಫೆಬ್ರವರಿ 24: ಏರೋ ಇಂಡಿಯಾ ಪಾರ್ಕಿಂಗ್ ಸ್ಥಳ ಬಳಿ ನಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಸಹಾಯವಾಣಿಯನ್ನು ಸಾರಿಗೆ ಇಲಾಖೆ ಆರಂಭಿಸಿದ್ದಾರೆ.
ಇದರ ಜೊತೆಗೆ ವಾಹನಗಳ ವಿಮಾ ಹಕ್ಕುಗಳನ್ನು ಸಹಾನುಭೂತಿ ದೃಷ್ಟಿಕೋನದಿಂದ ಶೀಘ್ರ ಪರಿಹರಿಸಿಕೊಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ.
People who lost their 🚘 documents and #DrivingLicenses at #AeroIndia2019 fire accident can approach the RTO. The dept has opened a helpline & will be active on Sunday.
— BCP MAN (@HMLokesh) February 23, 2019
📞 080-29729908, 9449864050 pic.twitter.com/sIq7Y6tRcu
ಹಾನಿಗೊಳಗಾದ ವಾಹನಗಳಿಗೆ ನಕಲು ಆರ್.ಸಿ. ಮತ್ತು ಚಾಲನಾ ಪರವಾನಗಿ ನೀಡಲು ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಅನುಕೂಲ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುವುದು. ವಾಹನಗಳಿಗೆ ಸಂಬಂಧಪಟ್ಟ ವಿಮಾ ಹಕ್ಕುಗಳನ್ನು ಪರಿಶೀಲಿಸಲು ಒಂದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 12ರ ಸುಮಾರಿಗೆ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ 277ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದ್ದು, ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ.
People who lost their 🚘 documents and #DrivingLicenses at #AeroIndia2019 fire accident can approach the RTO. The dept has opened a helpline & will be active on Sunday.
— BCP MAN (@HMLokesh) February 23, 2019
📞 080-29729908, 9449864050 pic.twitter.com/sIq7Y6tRcu
ಸಹಾಯವಾಣಿ ಆರಂಭ
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿರುವ ಕಾರುಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸಹಾಯವಾಣಿ ಆರಂಭಿಸಿರುವುದಾಗಿ ಹೇಳಿದರು.
ಸಹಾಯವಾಣಿ : 080-2972 9908/ 9448 64050
ಕಾರು ಕಳೆದುಕೊಂಡವರಿಗೆ ವಿಮಾ ಪರಿಹಾರ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ವಿಮಾ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದ್ದು, ವಾಹನಗಳ ವಿವರ ಪಡೆಯಲು ಕಾರು ಮಾಲೀಕರಿಗೆ ಪೊಲೀಸ್ ಇಲಾಖೆ ಆರಂಭಿಸಿರುವ ಸಹಾಯವಾಣಿ ನೆರವಾಗಲಿದೆ ಎಂದರು.












Click it and Unblock the Notifications