ಬೇಸಿಗೆ ರಜೆ: ಪ್ರಯಾಣಿಕರ ಸಂದಣಿ ನೀಗಿಸಲು 62 ವಿಶೇಷ ರೈಲು

ಬೆಂಗಳೂರು, ಮಾರ್ಚ್ 28: ಬೇಸಿಗೆ ಕಾಲದ ರಜೆ. ಹಬ್ಬ ಮತ್ತಿತರ ಕಾರಣದಿಂದ ಪ್ರಯಾಣಿಕರ ಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಯಶವಂತಪುರ- ವಿಶಾಖಪಟ್ಟಣಂ ನಡುವೆ 62 ವಿಶೇಷ ರೈಲುಗಳ ಸಂಚಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.

ಯಶವಂತಪುರ-ವಿಶಾಖಪಟ್ಟಣಂ-ಯಶವಂತಪುರ ವೀಕ್ಲಿ ತತ್ಕಾಲ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಪ್ರತಿ ಶುಕ್ರವಾರ ಸಂಜೆ 6.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.35ಕ್ಕೆ ವಿಶಾಖಪಟ್ಟಣಂ ತಲುಪಲಿದೆ. ಇದೇ ರೈಲು ಪ್ರತಿ ಭಾನುವಾರ ಮಧ್ಯಾಹ್ನ 1.45ಕ್ಕೆ ವಿಶಾಖಪಟ್ಟಣಂನಿಂದ ಹೊರಟು ಮರುದಿನ ಬೆಳಗ್ಗೆ 9.05ಕ್ಕೆ ಯಶವಂತಪುರ ತಲುಪಲಿದೆ. ಬರುವ ಮೇ 27ರವರೆಗೆ ಒಟ್ಟು 26 ಬಾರಿ ಈ ರೈಲು ಸಂಚರಿಸಲಿದೆ.

62 special trains to meet summer rush

ಇನ್ನು ಕಾಕಿನಾಡ ಟೌನ್-ರಾಯಚೂರು ವಿಶೇಷ ರೈಲು ಪ್ರತಿ ಶನಿವಾರ ಕಾಕಿನಾಡದಿಂದ ಮಧ್ಯಾಹ್ನ 1.40ಕ್ಕೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ರಾಯಚೂರು ತಲುಪುವುದು. ಇದೇ ರೈಲು ಪ್ರತಿ ಭಾನುವಾರ ಸಂಜೆ 5.30ಕ್ಕೆ ರಾಯಚೂರಿನಿಂದ ಹೊರಟು ಮರುದಿನ ಬೆಳಗ್ಗೆ 11.25ಕ್ಕೆ ಕಾಕಿನಾಡ ತಲುಪುವುದು.

ಅಲ್ಲದೇ ವಿಜಯವಾಡ-ರಾಯಚೂರು ವಿಶೇಷ ರೈಲು ಪ್ರತಿ ಗುರುವಾರ ರಾತ್ರಿ 11.10ಕ್ಕೆ ವಿಜಯವಾಡದಿಂದ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ರಾಯಚೂರು ತಲುಪುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+