ಬೆಂಗಳೂರಲ್ಲಿ ಸಿಕ್ಕಿಬಿದ್ರು 6 ಸರಗಳ್ಳರು
ಬೆಂಗಳೂರು, ಸೆಪ್ಟೆಂಬರ್ 29 : ಬೆಂಗಳೂರಿನಲ್ಲಿ 6 ಮಂದಿ ಸರಗಳ್ಳರನ್ನು ಪೊಲೀಸರು ಬಂಧಿಸಿದ್ದು, ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸರಗಳ್ಳರನ್ನು ಹಿಡಿಯಲು ಕೆಲವು ದಿನಗಳ ಹಿಂದೆ ಏಳು ತಂಡಗಳನ್ನು ರಚನೆ ಮಾಡಲಾಗಿದೆ.
ಕಾಡುಗೋಡಿ ಪೊಲೀಸರು ನಾಲ್ಕು ಮತ್ತು ವೈಟ್‌ಫೀಲ್ಡ್ ಠಾಣೆ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. [ಬೆಂಗಳೂರು: ಸರಗಳ್ಳರಿಗೆ ಭಾನುವಾರವೂ ರಜೆ ಇಲ್ಲ!]

ಬಂಧಿತರನ್ನು ವೆಂಕಟಪತಿ, ಪ್ರೇಮ್, ಮಂಜುನಾಥ್, ರಾಜ, ಸತೀಶ್, ಗೋಪಿ ಎಂದು ಗುರುತಿಸಲಾಗಿದೆ. ಆರು ಜನರನ್ನು ಬಂಧಿಸಿ ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭದರಣಗಳನ್ನು ವಶಡಿಸಿಕೊಳ್ಳಲಾಗಿದೆ ಎಂದು ಹರಿಶೇಖರನ್ ಹೇಳಿದರು. [ಎರಡು ದಿನದಲ್ಲಿ 10 ಕಡೆ ಸರಗಳ್ಳತನ]
ವೈಟ್‌ಫೀಲ್ಡ್ ಠಾಣೆ ವಿವರ : ವೈಟ್‌ಫೀಲ್ಡ್ ಪೊಲೀಸರು ಸರಗಳವು ಮಾಡುತ್ತಿದ್ದ ಆರೋಪದ ಮೇಲೆ ಎನ್.ಎಂ.ಸತೀಶ್ ಕುಮಾರ್ ಮತ್ತು ಗೋಪಿ ಅವರನ್ನು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ರಾಮಮೂರ್ತಿನಗರ, ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 20ಕ್ಕೂ ಹೆಚ್ಚು ಸರಗಳವು ಪ್ರಕರಣದಲ್ಲಿ ಭಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಕಾಡುಗೋಡಿ ಪೊಲೀಸ್ ಠಾಣೆ : ಒಂಟಿಯಾಗಿ ನಡೆದುಕೊಂಡು ಹೋಗುವ ಹೆಂಗಸರನ್ನು ಬೈಕ್‌ನಲ್ಲಿ ಹಿಂಬಾಲಿಸಿ ವಿಳಾಸ ಕೇಳುವ ನೆಪದಲ್ಲಿ ಸರಗಳವು ಮಾಡುತ್ತಿದ್ದ ವೆಂಕಟಪತಿ, ಪ್ರೇಮ್, ಸಾಕರಾಜ, ಮಂಜುನಾಥ್ ಅವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications