ವಂದೇ ಭಾರತ್‌ನಲ್ಲಿ ಕಳೆದುಕೊಂಡಿದ್ದ 4 ಲಕ್ಷ ರೂ. ವಸ್ತುಗಳನ್ನು ಹಿಂದುರುಗಿಸಿದ ರೈಲ್ವೇ ಸಂರಕ್ಷಣಾ ಪಡೆ

ಬೆಂಗಳೂರು, ಸೆಪ್ಟೆಂಬರ್‌ 11: ಮೈಸೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲಿ ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ರೈಲ್ವೆ ರಕ್ಷಣಾ ಪಡೆ ಹಿಂದುರುಗಿಸಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕಟಪಾಡಿ ರೈಲು ನಿಲ್ದಾಣದಲ್ಲಿ ಇಳಿದು ರೈಲು ಹತ್ತುವುದನ್ನು ತಪ್ಪಿಸಿಕೊಂಡಿದ್ದರು. ರೈಲಿನಲ್ಲಿ ಅವರು 4 ಲಕ್ಷ ಮೌಲ್ಯದ ವಸ್ತುಗಳನ್ನು ಇಟ್ಟಿದ್ದರಿಂದ ಕಳೆದುಕೊಂಡಿದ್ದರು. ಇದರಿಂದ ಅವರು ಆತಂಕಕ್ಕೆ ಒಳಗಾಗಿದ್ದರು. ಆದರೆ ಅವರ ವಸ್ತುಗಳನ್ನು ರೈಲ್ವೆ ರಕ್ಷಣಾ ಪಡೆ ಅವರಿಗೆ ಈ ಎಲ್ಲ ವಸ್ತುಗಳನ್ನು ಮರಳಿಸಿದೆ.

4 lakhs lost in Vande Bharat. Railway Protection Force who returned the goods

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟಿದ್ದ ರಾಹುಲ್ ಎಂಬ ಪ್ರಯಾಣಿಕರು ಭಾನುವಾರ ಬೆಳಗ್ಗೆ ತಿಂಡಿ ಖರೀದಿಸಲು ಕಟಪಾಡಿಯಲ್ಲಿ ಇಳಿದಿದ್ದರು. ಈ ವೇಳೆ ರೈಲನ್ನು ಅವರು ತಪ್ಪಿಸಿಕೊಂಡರು. ಆಗ ರೈಲ್ವೆ ಅಧಿಕಾರಿ ಮತ್ತು ರೈಲ್ವೇ ರಕ್ಷಣಾ ಪಡೆ ಪೊಲೀಸರು ರಾಹುಲ್ ಅವರ ಲಗೇಜ್ ಅನ್ನು ಸ್ವಾಧೀನಪಡಿಸಿಕೊಂಡರು ಮತ್ತು ನಂತರ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಅವರಿಗೆ ಹಸ್ತಾಂತರಿಸಿದರು.

ಅಧಿಕೃತ ಪ್ರಕಟಣೆಯ ಪ್ರಕಾರ, ಭಾನುವಾರ ಬೆಳಿಗ್ಗೆ 7.40 ಕ್ಕೆ ಪ್ರಯಾಣಿಕರಿಂದ 'ರೈಲ್ಮಡಾಡ್' ಸಹಾಯವಾಣಿಗೆ ದೂರು ಬಂದಿದ್ದು, MGR ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (ಟ್ರೇನ್ ಸಂಖ್ಯೆ 20607) ತನ್ನ ಲಗೇಜ್ ಬಿಟ್ಟುಹೋಗಿರುವ ಬಗ್ಗೆ ದೂರು ಸ್ವೀಕರಿಸಲಾಗಿತ್ತು.

ಘಟನೆಯ ಬಗ್ಗೆ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಜಯಕುಮಾರ್ ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಸಬ್ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ಅವರಿಗೆ ಮಾಹಿತಿ ನೀಡಲಾಯಿತು. ಅವರು ಲಗೇಜ್ ಅನ್ನು ವಶಕ್ಕೆ ಪಡೆದರು. ಬಳಿಕ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ತಲುಪಿದ ನಂತರ ಅದನ್ನು ಬೆಂಗಳೂರು ಆರ್‌ಪಿಎಫ್ ಪೋರ್ಸ್‌ಗೆ ತರಲಾಯಿತು. ಪಿರ್ಯಾದಿದಾರರ ಸಮ್ಮುಖದಲ್ಲಿ ಬ್ಯಾಗನ್ನು ತೆರೆದು ದಿನದ ನಂತರ ಆತನಿಗೆ ಹಸ್ತಾಂತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+