ಬೆಳಗಾವಿಯಲ್ಲಿ ಸಿಕ್ಕಿಬಿದ್ದವರ ಬಳಿ 36 ವಿಡಿಯೋಗಳು ಇವೆ
ಬೆಳಗಾವಿ, ಡಿಸೆಂಬರ್ 08 : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಹಾಗೂ ರಾಜ್ಯದ ನಿರ್ಬಂಧಿತ ಸ್ಥಳಗಳ ಫೋಟೋ ತೆಗೆದ ಆರೋಪದ ಮೇಲೆ ಬಂಧಿತರಾಗಿರುವ ಮಹಮ್ಮದ್ ಎಜಾಜ್ ಬಿಹಾರಿ ಮತ್ತು ಆತನ ಸಹಚರ ಹಲವು ವಿಡಿಯೋಗಳನ್ನು ತೆಗೆದಿರುವುದು ತನಿಖೆ ವೇಳೆ ಬಯಲಾಗಿದೆ.
ಬೆಂಗಳೂರು, ಮೈಸೂರು, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಸ್ಥಳಗಳ ವಿಡಿಯೋಗಳು ಬಂಧಿತರ ಬಳಿ ಪತ್ತೆಯಾಗಿವೆ. ಬಂಧಿತರಿಂದ ಸುಮಾರು 36 ವಿಡಿಯೋ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]

ಉರ್ದು ನಿಯತಕಾಲಿಕೆ ಸಂಪಾದಕ ಮಹಮ್ಮದ್ ಎಜಾಜ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಪತ್ರಿಕೆಯ ಸಂಗ್ರಹಕ್ಕಾಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯಲಾಗಿದೆ ಎಂದು ಹೇಳಿದ್ದಾನೆ. ಬಿಹಾರಿ ಮತ್ತು ಮಹ್ಮದ್ ಹುಸೇನ್ ಅಲಿ ಖುರೇಷಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಳಗಾವಿ 3ನೇ ಜೆಎಂಎಫ್‌ಸಿ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. [ಉಗ್ರಗಾಮಿ ಸಂಘಟನೆ ಸೇರೋದ್ರಲ್ಲಿ ಕರ್ನಾಟಕವೇ ಫಸ್ಟ್!]
ಅಂತಿಮ ನಿರ್ಧಾರಕ್ಕೆ ಬಂದಿಲ್ಲ : ಫೋಟೋ ತೆಗೆದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒನ್ ಇಂಡಿಯಾಕ್ಕೆ ಜೊತೆ ಮಾತನಾಡಿದ್ದು, 'ಇಲ್ಲಿಯ ತನಕ ಯಾವುದೇ ಅಂತಿಮ ತೀರ್ಮಾನಕ್ಕೆ ನಾವು ಬಂದಿಲ್ಲ. ಫೋಟೋ ಮತ್ತು ವಿಡಿಯೋಗಳನ್ನು ಏಕೆ ತೆಗೆಯಲಾಗಿದೆ? ಎಂಬ ಬಗ್ಗೆ ವಿವರವಾದ ತನಿಖೆಯ ಅಗತ್ಯವಿದೆ' ಎಂದು ಹೇಳಿದ್ದಾರೆ.
ಬಿಹಾರಿ ನೇಮಕ ಮಾಡಿಕೊಂಡಿದ್ದ : ಇದುವರೆಗಿನ ತನಿಖೆಯಿಂದ ಮಹ್ಮದ್ ಹುಸೇನ್ ಅಲಿ ಖುರೇಷಿಯನ್ನು
ಬಿಹಾರಿ ಫೋಟೋ ಮತ್ತು ವಿಡಿಯೋ ತೆಗೆಯಲು ನೇಮಕ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದನೆ ಕೃತ್ಯ ನಡೆಸಲು ವಿಡಿಯೋ ಮತ್ತು ಫೋಟೋ ತೆಗೆದಿದ್ದಾರೆ ಎಂಬ ಖಚಿತವಾದ ತೀರ್ಮಾನಕ್ಕೆ ಪೊಲೀಸರು ಇನ್ನೂ ಬಂದಿಲ್ಲ.
ಮಹಮ್ಮದ್ ಎಜಾಜ್ ಬಿಹಾರಿ ಮೂಲತಃ ಬಿಹಾರದವನಾಗಿದ್ದು ಹಲವು ವರ್ಷಗಳ ಹಿಂದೆಯೇ ಕಲಬುರಗಿಗೆ ಬಂದು ವಾಸ್ತವ್ಯ ಹೂಡಿದ್ದ. ಉರ್ದು ಪತ್ರಿಕೆಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪತ್ರಿಕೆಗಾಗಿ ಮಾತ್ರವಾದರೆ ನಿಷೇಧಿತ ಸ್ಥಳಗಳ ಚಿತ್ರಗಳನ್ನು ಮಾತ್ರ ಏಕೆ ಸಂಗ್ರಹಿಸುತ್ತಿದ್ದರು? ಎಂದು ಕಲಬುರಗಿ ಮತ್ತು ಬೆಳಗಾವಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications