ಬೆಳಗಾವಿ ರಾಣಿ ಚೆನ್ನಮ್ಮ ವಿವಿಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಪುಂಡಾಟ

Recommended Video

      ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಪುಂಡಾಟ | Oneindia Kannada

      ಬೆಳಗಾವಿ, ಅಕ್ಟೋಬರ್ 01: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನುಗ್ಗಿರುವ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿಗರು ಗಲಾಟೆ ನಡೆಸಿದ್ದಾರೆ.

      ವಿವಿಯಲ್ಲಿ ರಾಷ್ಟ್ರೀಯ ಸೇವಾ ದಳದ ಸದಸ್ಯರು ರಕ್ತದಾನ ಶಿಬಿರ ಆಯೋಜಿಸಿದ್ದರು. ಆದರೆ ಇದಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಆಹ್ವಾನ ನೀಡಿಲ್ಲವೆಂದು ಸತೀಶ್ ಜಾರಕಿಹೊಳಿ ಬೆಂಬಲಿಗರು ವಿವಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.

      ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ರಾಜಕೀಯ ಕಿತ್ತಾಟವನ್ನು ಗೆದ್ದು ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸತೀಶ್‌ ಜಾರಕಿಹೊಳಿ ಅವರು ಯತ್ನಿಸುತ್ತಿದ್ದಾರೆ. ಇಂತಹಾ ಸಮಯದಲ್ಲಿ ಕಾರ್ಯಕ್ರಮಗಳಿಗೆ ಕರೆಯದೇ ಇರುವುದು ಅವರಿಗೆ ಬೇಸರಮೂಡಿಸಿರಲಿಕ್ಕೂ ಸಾಕು.

      Satish Jarkiholi supporters rowdyism in Chennamma university

      ಸತೀಶ್ ಜಾರಕಿಹೊಳಿ ಅವರ ಕಟ್ಟಾ ಬೆಂಬಲಿಗರಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದು ಸುಣಗಾರ ಅವರು ಬೆಂಬಲಿಗರೊಂದಿಗೆ ವಿವಿಗೆ ನುಗ್ಗಿ ತಮ್ಮ ನಾಯಕರನ್ನು ಕಾರ್ಯಕ್ರಮಕ್ಕೆ ಕರೆಯದೇ ಇದ್ದದ್ದಕ್ಕೆ ಆಯೋಜನರೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೆ ಕಿಟಕಿ ಗಾಜು, ಬೆಂಚುಗಳನ್ನು ಒಡೆದು ಹಾಕಿದ್ದಾರೆ.

      ಕೆಲವು ದಿನಗಳ ಹಿಂದೆಯಷ್ಟೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಜಗಳವಾಗಿ ಹೆಬ್ಬಾಳ್ಕರ್ ಬೆಂಬಲಿಗ ಜಾರಕಿಹೊಳಿ ಬೆಂಬಲಿಗನಿಗೆ ಚಾಕುವಿನಿಂದ ಇರಿದಿದ್ದ. ರಾಜಕೀಯ ಮುಖಂಡರಿಬ್ಬರ ಪ್ರತಿಷ್ಠೆ ಕಾರ್ಯಕರ್ತರ ಹಾಗೂ ಬೆಂಬಲಿಗರ ನಡುವೆ ಹಾದಿ-ಜಗಳ, ಬೀದಿ ಜಗಳವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+