Darshan Thoogudeepa case: 14ನೇ ಆರೋಪಿ ಹಿಂಡಲಗಾ ಜೈಲಿಗೆ ಶಿಫ್ಟ್, ಏನೆಲ್ಲ ಪ್ರಕ್ರಿಯೆ ನಡೆಯಲಿವೆ?
ಬೆಳಗಾವಿ, ಆಗಸ್ಟ್ 28: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳಿಗೆ ವಿಶೇಷ ಆತಿಥ್ಯ ಸಿಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವರು ವಿಚಾರಣಾಧೀನ ಖೈದಿಗಳನ್ನು ಬೇರೆ ಬೇರೆ ಜೈಲಿಗೆ ಕಳುಹಿಸಲು ಆದೇಶಿಸಿದೆ. ಅದರಂತೆ 14ನೇ ಆರೋಪಿ ಪ್ರದೂಷ್ ಅನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆತರಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೂಷ್ ಸಹ ಪ್ರಮುಖ ಆರೋಪಿಯಾಗಿದ್ದಾನೆ. ಈತನನ್ನು ಹಿಂಡಲಗಾ ಜೈಲಿನ ಸಾಮಾನ್ಯ ಬಾರಕ್ ನಲ್ಲಿ ಇರಿಸಲು ಜೈಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಇಂದು ಮಧ್ಯಾಹ್ನ ಪ್ರದೂಷ್ ಜೈಲಿಗೆ ಸ್ಥಳಾಂತಗೊಳ್ಳಲಿದ್ದಾನೆ.

ಹಿಂಡಲಗಾ ಜೈಲಿನ ಹೊರಗಡೆ ಸಿಐಎಸ್ಎಫ್ ಸಿಬ್ಬಂದಿಗಳಿಂದ ಈಗಾಗಲೇ ತಪಾಸಣೆ ನಡೆಸಿದ್ದಾರೆ. ಹಿಂಡಲಗಾ ಜೈಲಿನ ಮುಂಭಾಗದಲ್ಲಿ ಪ್ರದೂಷ ಬಂದ ಬಳಿಕ ಆತನನ್ನು ತಪಾಸಣೆಗೆ ಒಳಪಡಿಸಿ ಪ್ರತ್ಯೇಕ ಬ್ಯಾರೆಕ್‌ಗೆ ಕಳುಹಿಸಲಿದ್ದಾರೆ.
ಜೈಲಿನ ಒಳಗೆ ಬರುತ್ತಿದ್ದಂತೆ ಇಬ್ಬರು ವೈದ್ಯರಿಂದ ಪ್ರದೂಷ್ ಆರೋಗ್ಯವನ್ನು ಪರೀಕ್ಷಿಸಲಿದ್ದಾರೆ. ಅಗತ್ಯ ಆರೋಗ್ಯ ತಪಾಸಣೆ ಮಾಡಿ, ಜೈಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಮುಗಿದನಂತರ ಸಾಮಾನ್ಯ ಸೆಲ್ ನಲ್ಲಿ ಇಡಲು ಹಿಂಡಲಗಾ ಜೈಲು ಅಧಿಕಾರಿಗಳ ನಿರ್ಧರಿಸಿದ್ದಾರೆ.












Click it and Unblock the Notifications