ಮತ್ತೆ ವಿವಾದ ಸೃಷ್ಟಿಸಿದ ರಾಣಿ ಚೆನ್ನಮ್ಮಳ ಜಯಂತಿ
ಬೆಳಗಾವಿ, ಅಕ್ಟೋಬರ್.07: ರಾಜ್ಯ ಸರ್ಕಾರದ ಯಡವಟ್ಟಿನಿಂದ ರಾಣಿ ಚೆನ್ನಮ್ಮಳ ಜಯಂತಿ ಮತ್ತೆ ವಿವಾದ ಸೃಷ್ಟಿಸಿದೆ.
ಕಿತ್ತೂರು ರಾಣಿ ಚೆನ್ನಮ್ಮ ಜನಿಸಿದ್ದು 1778 ನವೆಂಬರ್ 14 ರಂದು. ಉಳವಿ ಚೆನ್ನಬಸವಣ್ಣರ ಮತ್ತು ಚೆನ್ನಮ್ಮ ಜನಿಸಿದ್ದು ನವೆಂಬರ್ 14. ಆದರೂ ಸರ್ಕಾರದಿಂದ ಅಕ್ಟೋಬರ್ 23 ರಂದು ಚೆನ್ನಮ್ಮ ಜಯಂತಿ ಆಚರಿಸಲು ಆದೇಶಿಸಲಾಗಿದೆ.
ಕಳೆದ ವರ್ಷವೂ ಸರ್ಕಾರದ ಈ ಆದೇಶಕ್ಕೆ ವಿರೋಧ ವ್ಯಕ್ತವಾಗಿತ್ತು.ಅಕ್ಟೋಬರ್ 23 ಬ್ರಿಟಿಷರ ವಿರುದ್ಧ ಯುದ್ಧ ಗೆದ್ದ ದಿನವೇ ವಿಜಯೋತ್ಸವ ದಿನ. ಆದ್ರೆ ವಿಜಯೋತ್ಸವ ದಿನವೇ ಚೆನ್ನಮ್ಮ ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಂದ ಆದೇಶಿಸಲಾಗಿದೆ.

ಹಾಗೆ ನೋಡಿದರೆ ಸಾಕಷ್ಟು ಪುರಾವೆಗಳಿದ್ದರೂ ಚೆನ್ನಮ್ಮನ ಜನುಮದಿನ ಬಗೆ ಹರಿಯದೆ ಗೊಂದಲವಾಗುತ್ತಿದೆ. ಇದೇ ಅಕ್ಟೋಬರ್ 23 ರಿಂದ ಮೂರು ದಿನ ಕಿತ್ತೂರು ಉತ್ಸವಕ್ಕೆ ನಿರ್ಧರಿಸಲಾಗಿದೆ.












Click it and Unblock the Notifications