ಫೇಸ್ ಬುಕ್ ನಲ್ಲಿ ನಾರಾಯಣ ಗೌಡಗೆ ಅವಮಾನ: ಸಿಡಿದೆದ್ದ ಕಾರ್ಯಕರ್ತರು ಮಾಡಿದ್ದೇನು?
ಬೆಳಗಾವಿ, ಸೆಪ್ಟೆಂಬರ್.11: ಫೇಸ್ ಬುಕ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರಿಗೆ ಅವಮಾನ ಮಾಡಲಾಗಿದ್ದು, ಅವಮಾನ ಮಾಡಿದ ವ್ಯಕ್ತಿಯನ್ನು ಕರವೇ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ಫೇಸ್ ಬುಕ್ ನಲ್ಲಿ ನಾರಾಯಣ ಗೌಡ ಭಾವಚಿತ್ರಕ್ಕೆ ಚಪ್ಪಲಿ ಹಾಕಿದ ಪೋಟೋ ನಿನ್ನೆ ಸೋಮವಾರದಿಂದ (ಸೆ.1೦) ವೈರಲ್ ಆಗಿತ್ತು. ಹೀಗೆ ನಾರಾಯಣ ಗೌಡ ಅವರನ್ನು ಅವಮಾನಿಸಿ ಪೋಟೋ ಶೇರ್ ಮಾಡಿದ ವ್ಯಕ್ತಿಯ ಹೆಸರು ಗೋಪಾಲ್ ಪಾಟೀಲ್. ಮೂಲತಃ ಬೆಳಗಾವಿಯವನು. ಅಷ್ಟೇ ಅಲ್ಲ ಈತ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತ ಎಂದು ತಿಳಿದುಬಂದಿದೆ.
ಇದೀಗ ಕರವೇ ಕಾರ್ಯಕರ್ತರು ತಮ್ಮ ನಾಯಕನಿಗೆ ಅವಮಾನ ಮಾಡಿದ್ದಕ್ಕೆ ಗೋಪಾಲ್ ಪಾಟೀಲ್ ನನ್ನು ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಖಂಡರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಗೋಪಾಲ್ ಪಾಟೀಲ್ ನನ್ನು ಒಪ್ಪಿಸಿದ್ದಾರೆ.

ಗೋಪಾಲ್ ಪಾಟೀಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ನಾರಾಯಣ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ, 'ಕಚಡ ನಾರಾಯಣ ಕರ್ನಾಟಕದ ಹೆಸರು ಹೇಳಿ ಕನ್ನಡದ ಜನರನ್ನು ಹಾಳು ಮಾಡಿದ್ದಾರೆ' ಎಂದು ಬರೆದಿದ್ದನು.












Click it and Unblock the Notifications