ನಕಲಿ ಕಾಂಗ್ರೆಸ್ ಎಂದವರು ಗೊಡ್ಸೆ ವಾದಿಗಳು: ವಿನಯ್ ಕುಲಕರ್ಣಿ
ಬೆಂಗಳೂರು, ಡಿಸೆಂಬರ್ 26: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಾತ್ಮ ಗಾಂಧೀಜಿ ಸ್ಮರಣಾರ್ಥ ಕಾಂಗ್ರೆಸ್ ಅಧೀವೇಶನ ನಡೆಸುತ್ತಿದೆ. ಇದಕ್ಕು ಮೊದಲು ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಮುನಿರತ್ನ ಅವರ ಮೇಲಿನ ಹಲ್ಲೇ ಪ್ರಕರಣಗಳು ನಡೆದಿವೆ. ಈ ಸಂಬಂಧ ಬಿಜೆಪಿಯು ನಕಲಿ ಪ್ರಕರಣ ದಾಖಲು, ನಕಲಿ ಸರ್ಕಾರ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆ ಶಾಸಕ ವಿನಯ್ ಕುಲಕರ್ಣಿ ಅವರು ಪ್ರತಿಕ್ರಿಯಿಸಿದ್ದಾರೆ. ಸಿಟಿ ರವಿ ಅವರೇ ಫೇಕ್ ಎಂದು ಕೌಂಟರ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಫೇಕ್ ಎನ್ ಕೌಂಟರ್ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಹುಚ್ಚರ ಕೈಯಲ್ಲಿ ಕಲ್ಲು ಕೊಟ್ಟಂತೆ ಬಿಜೆಪಿಯವರು ಮಾತನಾಡುತ್ತಾರೆ. ಇವರು ಯಾರಿಕೆ ಕಲ್ಲು ಹೊಡೆಯುತ್ತಾರೋ ಯಾರಿಗೆ ಗೊತ್ತು. ಬಿಜೆಪಿ ನಾಯಕರಿಗೆ ಅವರಿಗೆ ಮಾತೇ ಬಂಡವಾಳ. ಅವರು ಸಂಘಟನೆ ಮೂಲಕ ಬಂದವರಲ್ಲಾ ಎಂದು ಕಿಡಿ ಕಾರಿದರು.

ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಅದರ ಮೇಲೆ ಬೆಂಕಿ ಹಚ್ಚೊದು ಬಿಜೆಪಿ ನಾಯಕರ ಕೆಲಸ. ನಮ್ಮ ಕಾಂಗ್ರೆಸ್ ದೊಡ್ಡ ಇತಿಹಾಸ ಇದೆ. ಸುಳ್ಳು ಆರೋಪ ಮಾಡೋದು ಸುಳ್ಳು ಪ್ರಕರಣ ದಾಖಲಾಗುವುದು ಬಿಜೆಪಿ ಕೆಲಸ. ನಕಲಿ ಅಂದರೆ ಏನು?
ನಕಲಿ ಕಾಂಗ್ರೆಸ್ ಎನ್ನುವವರು ಗೊಡ್ಸೆ ವಾದಿಗಳು. ನಾವು ಗಾಂಧಿ ವಾದಿಗಳು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಬಾಯಿಂದ ಇಂತಹ ಮಾತುಗಳೇ ಬರೋದು. ಅವರ ಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿಸಿಕೊಂಡು ಮತ್ತೊಂದು ಕಿವಿಯಲ್ಲಿ ಬಿಡಬೇಕು ಅಷ್ಟೇ ಎಂದು ಲೇವಡಿ ಮಾಡಿದರು.
ಸರ್ಕಾರದಿಂದ ಪರಿಹಾರ ವಿತರಣೆ ಕಾರ್ಯ
ಅಯ್ಯಪ್ಪ ಮಾಲಾಧಾರಿಗಳ ಸಾವು ಪ್ರಕರಣಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ಈ ಪ್ರಕರಣ ಬಹಳಷ್ಟು ದೊಡ್ಡ ಕೇಸ್.
ನಾನು ನಿನ್ನೆ ಕಿಮ್ಸ್ ವೈದ್ಯರ ಜೊತೆಗೆ ಮಾತನಾಡಿದ್ದೆ. ಬೆಂಗಳೂರಿನಿಂದ ವಿಶೇಷ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಯಿತು.
ವಿಶೇಷ ವೈದ್ಯರ ತಂಡದಿಂದ ನಿರಂತರ ಚಿಕಿತ್ಸೆ ನೀಡಿತಾದರೂ ಸಹ ಪರಿಸ್ಥಿತಿ ಕೈ ಮೀರಿ ಹೋಯಿತು.
ಚಿಕಿತ್ಸೆ ಫಲಿಸದೇ ಮಾಲಾಧಾರಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ಮಾಡಲಿದೆ. ನಮ್ಮ ಕಡೆಯಿಂದ ಶಕ್ತಿ ಮೀರಿ ಸಹಾಯ ಮಾಡುತ್ತೇವೆ.












Click it and Unblock the Notifications