ಎಸ್ಆರ್ ಪಾಟೀಲ್‌ಗೆ ತಪ್ಪಿದ ಪರಿಷತ್ ಸಭಾಪತಿ ಹುದ್ದೆ: ಎಂಬಿ ಪಾಟೀಲ್ ಅಸಮಾಧಾನ

ಬೆಳಗಾವಿ, ಡಿಸೆಂಬರ್ 13: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ಪಕ್ಷದಲ್ಲಿನ ಅಸಮಾಧಾನ ಸ್ಫೋಟಗೊಂಡಿದ್ದು ಹಿರಿಯ ನಾಯಕ ಎಂಬಿ ಪಾಟೀಲ್ ಪಕ್ಷದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ನೋವಾಗುತ್ತಿದೆ. 41 ಕಾಂಗ್ರೆಸ್ ಶಾಸಕರು ಉತ್ತರ ಕರ್ನಾಟಕದಿಂದಲೇ ಆಯ್ಕೆಯಾಗಿದ್ದು, ಕೇವಲ 5 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ.

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಕರ್ನಾಟಕದ ಎರಡು ಕಣ್ಣುಗಳು ಇವುಗಳಲ್ಲಿ ತಾರತಮ್ಯ ತೋರುವುದು ಸರಿಯಲ್ಲ ಪಕ್ಷದ ಹಿರಿಯ ನಾಯಕ ಎಸ್‌ಆರ್ ಪಾಟೀಲ್ ಅವರು ಪರಿಷತ್‌ನ ಸಭಾಪತಿಯಾಗಿ ಆಯ್ಕೆಯಾಗದಿರುವುದು ಅವರಿಗೆ ಅವಕಾಶ ಕೈತಪ್ಪಿರುವುದು ನಮಗೆ ಬಹಳ ನೋವಾಗಿದೆ. ಸ್ವತಃ ಎಸ್ ಆರ್ ಪಾಟೀಲ್ ಅವರಿಗೆ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

M.B.Patil dissent on party decision as S.R.Patil misses chairmanship

ಪಕ್ಷದ ಕೆಲ ಮಾನದಂಡಗಳಿಂದ ಅವರಿಗೆ ಅವಕಾಶ ಕೈತಪ್ಪಿದೆ. ಪಕ್ಷದ ಪ್ರಮುಖ ಹುದ್ದೆಗಳು ಹಾಗೂ ಸರ್ಕಾರದ ಹುದ್ದೆಗಳು ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+