KSRTC: ನಿಪ್ಪಾಣಿ ಬಳಿ ಕಾಲುವೆಗೆ ಉರುಳಿದ ಸಾರಿಗೆ ಬಸ್, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಬೆಳಗಾವಿ, ಡಿಸೆಂಬರ್, 27: ಸಾರಿಗೆ (NWKSRTC) ಬಸ್‌ವೊಂದು ರಸ್ತೆಯ ಬದಿಯ ಕಾಲುವೆಗೆ ಉರುಳಿದ್ದು, ಪರಿಣಾಮ 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆದಿದೆ.
ಎದುರಿನಿಂದ ವೇಗವಾಗಿ ಬಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಬಸ್‌ಅನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಬಸ್ ಕಾಲುವೆಗೆ ಉರುಳಿದೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ಇಂಚಲಕರಂಜಿಯಿಂದ ನಿಪ್ಪಾಣಿಗೆ ಬರುತ್ತಿದ್ದ ಬಸ್ ಕಾಲುವೆಗೆ ಬಿದ್ದಿದೆ. ಬಸ್‌ನಲ್ಲಿ ಸುಮಾರು 75 ಜನ ಪ್ರಯಾಣಿಕರಿದ್ದರು. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ
ಇನ್ನು ಇತ್ತೀಚೆಗಷ್ಟೇ ಕಾರು ಹಾಗೂ ಟಿಟಿ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮಹಿಳೆ ಸೇರಿದಂತೆ 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೌದಳ್ಳಿ ಗ್ರಾಮದ ಸಮೀಪ ನಡೆದಿತ್ತು.
ಇನ್ನು ಆನೇಕಲ್ ತಾಲೂಕಿನ ನಿವಾಸಿ ಮಾಲಾ ತೀವ್ರ ಗಾಯಗೊಂಡು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆನೇಕಲ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಟಿಟಿ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಟಿಟಿಯಲಿದ್ದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ತೀವ್ರ ಗಾಯಗೊಂಡಿದ್ದ ಆನೇಕಲ್ ಗ್ರಾಮದ ನಿವಾಸಿ ಹರೀಶ್ ಅವರ ಪತ್ನಿ ಮಾಲಾ ಅವರನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇನ್ನು ಇವರ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಉಳಿದಂತೆ ಟಿಟಿ ವಾಹನದಲ್ಲಿದ್ದ ಹತ್ತಕ್ಕೂ ಹೆಚ್ಚು ಜನರು ಸಹ ಗಾಯಗೊಂಡಿದ್ದು, ಸಮೀಪದ ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ತೆರಳಿದ್ದರು.












Click it and Unblock the Notifications