• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್‌ ಉಲ್ಲಂಘಿಸಿ ನಮಾಜ್ ಮಾಡ್ತಿದ್ದವರ ಮೇಲೆ ಲಾಠಿ ಚಾರ್ಜ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಮಾರ್ಚ್ 26: ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಜೊತೆಗೆ ಸೆಕ್ಷನ್ 144 ಚಾಲ್ತಿಯಲ್ಲಿರುವುದರಿಂದ ಜನರು ಗುಂಪಾಗಿ ಸೇರಬಾರದು ಎಂದು ಸರ್ಕಾರ ಆದೇಶಿಸಿದೆ. ಮಸೀದಿಗಳಲ್ಲಿ ನಮಾಜ್‌ ಮಾಡಬಾರದು ಎಂದು ಸೂಚಿಸಲಾಗಿದೆ. ಆದರೂ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಮಸೀದಿಯಲ್ಲಿ ನಮಾಜ್‌ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಎರಡು ಮಸೀದಿಯಲ್ಲಿ ಹೆಚ್ಚು ಜನರು ಸೇರಿ ನಮಾಜ್‌ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು, ಮಸೀದಿಗೆ ದಾಳಿ ನಡೆಸಿ ಲಾಠಿ ಚಾರ್ಜ್ ಮಾಡಿದ್ದಾರೆ.

ಎಚ್ಚರ; ಕೊರೊನಾ ಸುಳ್ಳು ಸುದ್ದಿ ಹರಿಬಿಟ್ಟವರನ್ನು ಹಿಡಿದ ಪೊಲೀಸರು!

ಗೋಕಾಕನ ಮೋಮಿನ್ ಗಲ್ಲಿಯ ಹುರೇರಾ ಮಸೀದಿ ಹಾಗೂ ಕುಂಬಾರ ಗಲ್ಲಿಯ ಮಸೀದಿ ಮೇಲೆ ಪೊಲೀಸರ ದಾಳಿ ನಡೆಸಿ, ನಮಾಜ್‌ಗೆ ಸೇರಿದ್ದ ಸುಮಾರು 60ಕ್ಕೂ ಹೆಚ್ಚು ಜನರನ್ನು ಲಾಠಿ ಬಿಸಿ ಚದುರಿಸಿದ್ದಾರೆ.

ದೇಶದಲ್ಲಿ ಕೊರೊನಾ ಭೀತಿ ಇರುವ ಕಾರಣ, ಸದ್ಯಕ್ಕೆ ಮಸೀದಿಯಲ್ಲಿ ನಮಾಜ್ ಮಾಡಿಬೇಡಿ ಎಂದು ಹಲವು ಬಾರಿ ಸಭೆ ನಡೆಸಿ ಮನವಿ ಮಾಡಲಾಗಿತ್ತು. ಪೊಲೀಸರು ಮನವಿ ಮಾಡಿದ್ದರೂ ಅವರ ಮಾತಿಗೆ ಬೆಲೆ ನೀಡದೆ ನಮಾಜ್ ಮಾಡಲು ಜನ ಸೇರಿದ್ದರು.

ಕೋವಿಡ್-19 ಎದುರಿಸಲು 2 ಕೋಟಿ ರು ಕೊಟ್ಟ ಸಂಸದ ಮೋಹನ್

ಏಪ್ರಿಲ್ 15ರವರೆಗೂ ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ಜನರು ಸಹಕರಿಸಬೇಕು, ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ವಿನಂತಿಸಿಕೊಂಡಿದ್ದರು. ಆಯಾ ರಾಜ್ಯದ ಸರ್ಕಾರಗಳು ಈ ಬಗ್ಗೆ ಮನವಿ ಮಾಡಿದ್ದವು. ರಾಜ್ಯದ ಎಲ್ಲ ಕಡೆಯೂ ಪೊಲೀಸರು ಕಟ್ಟೆಚ್ಚರ ವಹಿಸಿ ಯಾರೂ ಮನೆಯಿಂದ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

English summary
Belagavi Police have Lathi charged in masjid for violating the lockdown rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X