ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ಶನಿವಾರದಿಂದ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭ

|
Google Oneindia Kannada News

ಬೆಳಗಾವಿ, ಏಪ್ರಿಲ್ 17 : ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ - 19 ಪರೀಕ್ಷಾ ಲ್ಯಾಬ್ ಆರಂಭವಾಗಲಿದೆ. ಕರ್ನಾಟಕದಲ್ಲಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಲ್ಲಿ ಬೆಳಗಾವಿಯೂ ಸೇರಿದೆ. ಶುಕ್ರವಾರದ ತನಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 41.

ಬೆಳಗಾವಿ ಬಿಜೆಪಿ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ಶನಿವಾರದಿಂದ ಕೋವಿಡ್ - 19 ಪರೀಕ್ಷೆ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವುದು ತಪ್ಪಲಿದೆ ಎಂದು ಹೇಳಿದ್ದಾರೆ.

ಬೆಳಗಾವಿ; ಒಂದೇ ದಿನ 17 ಕೊರೊನಾ ಪ್ರಕರಣಗಳು ದಾಖಲು ಬೆಳಗಾವಿ; ಒಂದೇ ದಿನ 17 ಕೊರೊನಾ ಪ್ರಕರಣಗಳು ದಾಖಲು

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಬೆಳಗಾವಿಯಲ್ಲಿ ಲ್ಯಾಬ್ ಆರಂಭಿಸಲು ಒಪ್ಪಿಗೆ ನೀಡಿದೆ. ಲ್ಯಾಬ್ ಇಲ್ಲದ ಕಾರಣ ಇಷ್ಟು ದಿನ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳಿಸಲಾಗುತ್ತಿತ್ತು.

 ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

ಬೆಳಗಾವಿಯಲ್ಲಿ ಇದುವರೆಗೂ 41 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಘೋಷಣೆ ಮಾಡಿರುವ ಕೊರೊನಾ ಹಾಟ್ ಸ್ಟಾಟ್ ಜಿಲ್ಲೆಗಳಲ್ಲಿ ಬೆಳಗಾವಿಯೂ ಸೇರಿದೆ. ಈಗ ಲ್ಯಾಬ್ ಸಿಕ್ಕಿರುವುದು ಪರೀಕ್ಷೆಗೆ ಹೆಚ್ಚಿನ ಅನುಕೂಲವಾಗಿದೆ.

ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ? ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?

ಕೋವಿಡ್ 19 ಪರೀಕ್ಷೆ ಲ್ಯಾಬ್

ಕೋವಿಡ್ 19 ಪರೀಕ್ಷೆ ಲ್ಯಾಬ್

ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಲ್ಯಾಬ್ ಆರಂಭಿಸಲು ಅನುಮತಿ ನೀಡಲು ಸುರೇಶ್ ಅಂಗಡಿಗೆ ಮನವಿ ಮಾಡಿದ್ದರು. ಸಂಸದರ ಪ್ರಯತ್ನದ ಫಲವಾಗಿ ಲ್ಯಾಬ್ ಆರಂಭಕ್ಕೆ ಒಪ್ಪಿಗೆ ಸಿಕ್ಕಿದೆ. ಶನಿವಾರ ಲ್ಯಾಬ್ ಕಾರ್ಯಾರಂಭ ಮಾಡಲಿದೆ.

ಜಿಲ್ಲೆಗೆ ಸಹಕಾರಿಯಾಗಿದೆ

ಜಿಲ್ಲೆಗೆ ಸಹಕಾರಿಯಾಗಿದೆ

ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ಶನಿವಾರ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು ಜೊತೆಗೆ ಮನೆಯಿಂದ ಆಗಾಗ ಹೊರೆಗೆ ಬರದೆ ಮನೆಯಲ್ಲಿಯೇ ಇರುವ ಮೂಲಕ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸಂಸದ ಸುರೇಶ್ ಅಂಗಡಿ ಕರೆ ನೀಡಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 41

ಒಟ್ಟು ಸೋಂಕಿತರ ಸಂಖ್ಯೆ 41

ಕೇಂದ್ರ ಆರೋಗ್ಯ ಸಚಿವಾಲಯ ಬೆಳಗಾವಿಯನ್ನು ಕೊರೊನಾ ಹಾಟ್ ಸ್ಪಾಟ್ ಎಂದು ಘೋಷಣೆ ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ 5 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಈ ಹೊಸ ಐದು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 41.

ಸೋಂಕಿತರ ಜೊತೆ ಸಂಪರ್ಕ

ಸೋಂಕಿತರ ಜೊತೆ ಸಂಪರ್ಕ

ಗುರುವಾರ ಬೆಳಗಾವಿಯಲ್ಲಿ 17 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಶುಕ್ರವಾರ 5 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇಂದು ಪತ್ತೆಯಾದ 34 ವರ್ಷದ (ಪಿ-355), 17 ವರ್ಷದ (ಪಿ-356), 46 ವರ್ಷದ (ಪಿ-357), 37 ವರ್ಷದ (ಪಿ-358) ಹಾಗೂ 38 ವರ್ಷದ (ಪಿ-359) ಪಿ-127 ರ ಜತೆ ಸಂಪರ್ಕ ಹೊಂದಿದ್ದರು.

English summary
ICMR approved to open COVID-19 testing lab at Belagavi, Karnataka. Belagavi reported 41 COVID - 19 cases till April 17, 2020. District announced as hot spot for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X