ಕರ್ನಾಟಕ: ರೈತನ ಮೇಲೆ ದಾಳಿ ಮಾಡಿ 2 ಕಿ.ಮೀ ಎಳೆದೊಯ್ದ ಕರಡಿ
ಬೆಳಗಾವಿ, ಅಕ್ಟೋಬರ್ 09: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ವ್ಯಾಪ್ತಿಯ ಗ್ರಾಮದಲ್ಲಿ ರೈತರೊಬ್ಬರ ಮೇಲೆ ಕರಡಿ ದಾಳಿ ಮಾಡಿದೆ. ಘಟನೆಯಲ್ಲಿ ದಾಳಿಗೀಡಾದ ರೈತ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಜಮೀನಿನಲ್ಲಿ ಇತರ ಕಾರ್ಮಿಕರ ಜೊತೆಗೆ ಕೆಲಸ ಮಾಡಿಕೊಂಡಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಸೋಮವಾರ ನಡೆದಿದೆ. ಜಿಲ್ಲೆಯ ಖಾನಾಪುರ ಸಮೀಪದ ಘೋಸೆಬದ್ರುಕ ಗ್ರಾಮದಲ್ಲಿ ಈ ಘಟನೆ ನಡೆದಿದೆ. 63 ವರ್ಷದ ರೈತ ಭೀಮಾಜಿ ಮಿರಾಶಿ ಅವರು ಈ ಕರಡಿ ದಾಳಿಗೆ ಬಲಿಯಾಗಿದ್ದಾರೆ.

ರೈತರ ಭೀಮಾಜಿ ಅವರು ತಮ್ಮ ಜಮೀನಿನಲ್ಲಿ ಎಂದಿನಿಂತೆ ಇತರ ಕಾರ್ಮಿಕ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಎಕಿ ಅವರ ಎರಗಿ ಬಂದ ಕರಡಿ ದಾಳಿ ನಡೆಸಿದೆ. ಪಕ್ಕದಲ್ಲಿದ್ದ ಇತರ ರೈತರು ಕಲ್ಲೆಸೆದು, ಕೂಗಾಡಿದರೂ ರೈತನನ್ನು ಬಿಡದ ಕರಡಿ ಸುಮಾರು ಎರಡು ಕಿಲೋ ಮೀಟರ್ ಎಳೆದೊಯ್ದಿದೆ. ಈ ವೇಳೆ ರೈತರು ಮೃತಪಟ್ಟಿದ್ದು, ಹತ್ತಿರದ ಕಾಡಿನೊಳಗೆ ಅವರ ದೇಹ ಬಿಟ್ಟು ಕರಡಿ ಓಡಿದೆ.
ಪರಿಹಾರ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಕರಡಿ ದಾಳಿ ಮತ್ತು ಭೀಮಾಜಿ ಅವರ ಸಾವಿನಿಂದ ಗ್ರಾಮಸ್ಥರದಲ್ಲಿ ಮತ್ತೆ ಎಲ್ಲಿ, ಯಾವಾಗ ಕರಡಿ ಬರುತ್ತಲೋ, ಯಾರ ಮೇಲೆ ದಾಳಿ ಮಾಡುವುದೋ ಎಂದು ಭಯದಿಂದ ಜೀವಿಸುತ್ತಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮೃತ ರೈತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಜೊತೆಗೆ ಕಾಡುಪ್ರಾಣಿಗಳು ಗ್ರಾಮಕ್ಕೆ ನುಗ್ಗದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರಡಿ ದಾಳಿಯ ಪ್ರಕರಣ ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ದುರಂತ ಘಟನೆಯು ರೈತರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥೈಸುತ್ತದೆ. ರೈತರು ಮತ್ತು ವನ್ಯಜೀವಿಗಳ ಮುಖಾಮುಖಿಗಳಿಂದ ಉಂಟಾಗುವ ಪ್ರಾಣ ಹಾಣ ಹಾನಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಿದೆ.












Click it and Unblock the Notifications