ಬೆಳಗಾವಿ: ನಟ ಕಿಚ್ಚ ಸುದೀಪ್‌ ಬರ್ತಡೇ ಅಂಗವಾಗಿ ಇಡೀ ಗ್ರಾಮಕ್ಕೆ ನೀರುಣಿಸಿ ಸೈ ಎನಿಸಿಕೊಂಡ ಅಭಿಮಾನಿ

ಬೆಳಗಾವಿ, ಸೆಪ್ಟೆಂಬರ್‌, 02: ಇಂದು (ಸೆಪ್ಟೆಂಬರ್‌ 2) ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ‌ ನಡೆದಿದೆ. ಇನ್ನು ಇದರಿಂದ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಜನರು ಸಂತಸಗೊಂಡಿದ್ದಾರೆ.

ಕೆಲವರು ತಮ್ಮ ನೆಚ್ಚಿನ ನಟ ಹುಟ್ಟುಹಬ್ಬದಂದು ಕಟೌಟ್‌ ಹಾಕಿಸಿ ಅದಕ್ಕೆ ನೂರಾರು ಲೀಟರ್‌ಗಟ್ಟಲೇ ಸುರಿದು ಅಂಧಾಭಿಮಾನ ಮೆರೆದ ಘಟನೆಗಳು ನಡೆದಿವೆ. ಇದರ ನಡುವೆಯೇ ಇದೀಗ ಕಿಚ್ಚ ಸುದೀಪ್‌ ಹುಟ್ಟುಹಬ್ಬ ಹಿನ್ನೆಲೆ ಇಂದು ಅವರ ಅಭಿಮಾನಿ ಆದಿ ಎಂಬುವವರು ಬೆಳಗಾವಿ ತಾಲ್ಲೂಕಿನ ವಾಗ್ವಾಡೆ ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

Actor Sudeep Birthday A fan arranged drinking water for entire Waghawade village

ಇಷ್ಟು ದಿನ ಈ ಗ್ರಾಮದಲ್ಲಿ ‌ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಕಂಗಲಾಗಿ ಹೋಗಿದ್ದರು. ಇದೀಗ ಕಿಚ್ಚ ಸುದೀಪ್‌ ಅಭಿಮಾನಿ ಆದಿ ಒಂದು ಲಕ್ಷ ರೂಪಾಯಿ ‌ಸ್ವಂತ ಹಣ‌ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಗಮನ ಸೆಳೆದಿದ್ದಾರೆ.

ಇನ್ನು ಬೋರ್‌ವೆಲ್ ಕೊರೆಸುವ ಆರಂಭಕ್ಕೂ ಮುನ್ನವೇ ಕೇಕ್ ಕತ್ತರಿಸಿ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಕಿಚ್ಚನ ಅಭಿಮಾನಿ ಆದಿ ನಾಯಕನ ಈ ಮಹತ್ವದ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಇಂದು (ಸೆಪ್ಟೆಂಬರ್‌ 02) ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಇದ್ದಾರೆ. ಇನ್ನು ಅವರು ಇಂದೇ ತಮ್ಮ ಟ್ವೀಟ್‌ ಖಾತೆ ಮೂಲಕ ಪೋಸ್ಟ್‌ರ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ತಮ್ಮ ಹುಟ್ಟು ಹಬ್ಬದ ದಿನವೇ ನಟ ಕಿಚ್ಚ ಸುದೀಪ್ "ಬಿಲ್ಲಾ ರಂಗಾ ಭಾಷಾ" ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ಇನ್ನು ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ನಟ ಸುದೀಪ್ ಹಂಚಿಕೊಂಡಿದ್ದು, ಇದು ಸಖತ್‌ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ ನಿರ್ದೇಶನದಲ್ಲಿ ಈ ಬಿಲ್ಲಾ ರಂಗ ಭಾಷಾ ಸಿನಿಮಾ ತಯಾರಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+