ತುರನೂರ ಗ್ರಾಮದಲ್ಲಿ ಆ ದೇವಿ ಶಾಪದಿಂದ ಒಂದೇ ತಿಂಗಳಲ್ಲಿ 30 ಜನರ ಬಲಿ..!?

ಬೆಳಗಾವಿ, ನವೆಂಬರ್‌, 06: ಬೆಳಗಾವಿ ಜಿಲ್ಲೆಯ ತುರನೂರ ಗ್ರಾಮದಲ್ಲಿ ಮಹಾಮಾರಿ ಕರೋನಾದಂತಹ ಕ್ಲಿಷ್ಟ ಸಮಯದಲ್ಲಿ ಕೇವಲ 3 ಜನ ಕರೋನದಿಂದ ಸಾವನ್ನಪ್ಪಿದರು. ಆದರೆ ಈಗ ದೇವಿಯ ಶಾಪಕ್ಕೆ ಒಂದೇ ತಿಂಗಳಿನಲ್ಲಿ 30 ಜನ ಬಲಿ ಆಗಿದ್ದಾರೆ. 10 ವರ್ಷದ ಮಕ್ಕಳಿಂದ ಹಿಡಿದು 60 ವರ್ಷದ ವಯಸ್ಕರು ಸಹ ಸಾವನ್ನಪ್ಪುತ್ತಿದ್ದು, ದೇವಿಯ ಶಾಪ ಇಡೀ ಊರಿಗೆ ತಗುಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಹ ಸಾವು ಸಂಭವಿಸುತ್ತಲೇ ಇವೆ. ಚಿಕ್ಕ ವಯಸ್ಸಿನ ಮಕ್ಕಳೂ ಸೇರಿದಂತೆ ದೊಡ್ಡವರವರೆಗೂ ಸಹ ಬೇರೆ ಬೇರೆ ಕಾರಣಗಳಿಂದ ತೀರಿ ಹೋಗುತ್ತಿದ್ದಾರೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ಎಡೆ ಮಾಡಿದ್ದು, ಸಾವಿಗೆ ನಿಖರ ಕಾರಣ ತಿಳಿಯದೆ ಗ್ರಾಮಸ್ಥರು ಇದು ದೇವಿ ಶಾಪ ಎಂದು ಹೇಳುತ್ತಿದ್ದಾರೆ.

30-people-death-in-one-month-due

ಇನ್ನು ಗ್ರಾಮದಲ್ಲಿ ಸಾವುಗಳು ನಡೆಯುತ್ತಿದ್ದಂತೆ ಗ್ರಾಮದ ಹಲವರ ಮೈಯಲ್ಲಿ ದುರ್ಗಾ ದೇವಿ ಬಂದು ನೀವು ನನ್ನ ವಿಗ್ರಹವನ್ನು ವಿರೂಪ ಮಾಡಿದ್ದಿರಿ. ಹೀಗಾಗಿ ಊರಿಗೆ ನನ್ನ ಶಾಪ ಹತ್ತಿದೆ ಎಂದು ದೇವಿ ಹೇಳುತ್ತಿದ್ದಾಳಂತೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದಾರೆ. ಅರ್ಚಕರ ಸಲಹೆಯಂತೆ ಹೊಮ ಹವನ ಹಾಗೂ ಅಭಿಷೇಕ ಮಾಡಿ ದೇವಿಯನ್ನು ಶಾಂತಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಇದು ಶಾಪವೋ.. ಕಾಕತಾಳಿಯವೋ ದೇವರೇ ಬಲ್ಲ. ಆದರೆ ಸರಣಿ ಸಾವುಗಳು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಸಾವುಗಳ ಬಗ್ಗೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚಬೇಕಿದೆ.

8ನೇ ತರಗತಿ ವಿದ್ಯಾರ್ಥಿನಿ ಸಾವು

ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೋರ್ವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಉಷಾ (13) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು 108 ಆಂಬುಲೆನ್ಸ್‌ ಮೂಲಕ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಮೃತ ಉಷಾ ಹಲವು ವರ್ಷಗಳಿಂದ ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದಳು ಎಂದು ವಸತಿ ಶಾಲೆಯ ಪ್ರಾಂಶುಪಾಲ ಶಿವರಾಜ್ ಶಿವರಾಜ್ ಸ್ಪಷ್ಟಪಡಿಸಿದ್ದು, ಹಲವು ಬಾರಿ ಆಕೆಯ ಪೊಷಕರಿಗೆ ತಿಳಿಸಿ ಮನೆಗೆ ಕಳುಹಿಸಿ ಅಲ್ಲಿಯೇ ವ್ಯಾಸಂಗ ಮಾಡುವಂತೆ ಹೇಳಿದರು. ಆದರೆ, ಪೋಷಕರು ಇದೊಂದು ವರ್ಷ ವ್ಯಾಸಂಗ ಮಾಡಲಿ, ಮುಂದಿನ ವರ್ಷ ಬದಲಾಯಿಸುವುದಾಗಿ ಹೇಳಿ ವಸತಿ ಶಾಲೆಯಲ್ಲಿ ಬಿಟ್ಟಿದ್ದರು.

ಆದರೆ, ಇತ್ತೀಚೆಗೆ ಉಷಾ ತುಂಬಾ ಡಿಪ್ರೆಷನ್‍ಗೆ ಒಳಗಾಗಿದ್ದಳು. ಪೋಷಕರು ಚಿಕಿತ್ಸೆ ಕೊಡಿಸಿದ್ದು, ಪ್ರತಿ ದಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಇಂದು ಏಕಾಏಕಿ ಕುಸಿದ್ದು ಬಿದ್ದಳು. ಪ್ರಥಮ ಚಿಕಿತ್ಸೆಗೆಂದು ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕಿ ತೀರಿಕೊಂಡಿದ್ದಳು.

ವಿದ್ಯಾರ್ಥಿನಿ ಅಗಲಿಕೆ ತುಂಬಾ ನೋವು ತಂದಿದೆ ಎಂದು ವಸತಿ ಶಾಲೆಯ ಪ್ರಾಂಶುಪಾಲ ತಿಳಿಸಿದ್ದಾರೆ. ಸಾವಿನ ಬಗ್ಗೆ ಅನುಮಾನ ಬಾರದಿರಲು ಪೋಸ್ಟ್ ಮಾರ್ಟಂಗಾಗಿ ಮೃತದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸರ್ಕಾರದ ಪರಿಹಾರ 4 ಲಕ್ಷ ರೂಗಳ ಚೆಕ್ಕನ್ನು ಪ್ರಭಾರ ಉಪ ನಿರ್ದೇಶಕರಾದ ಸೋಮಶೇಖರ್ ಮೃತಳ ತಾಯಿಗೆ ನೀಡಿದರು.

ಸ್ಥಳಕ್ಕೆ ಡಿ.ಸಿ.ಓ ನಾಗೇಶ್, ತರೀಕೆರೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ವಸತಿ ಶಾಲೆಗಳ ಪ್ರಿನ್ಸಿಪಾಲ್, ವಾರ್ಡನ್, ಶಿಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಅಜ್ಜಂಪುರ ಪೊಲೀಸರು ಯಾವುದೇ ಗೊಂದಲವಾಗದಂತೆ ನೋಡಿಕೊಂಡು ಮೃತದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+