ಪ್ರಶ್ನೆ ಪತ್ರಿಕೆ ಸೋರಿಕೆ: 5 ವರ್ಷ ಜೈಲು,5 ಲಕ್ಷ ದಂಡ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 10: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಬಲಿಷ್ಠ ಕಾನೂನು ರೂಪಿಸಲು ಸರಕಾರ ಮುಂದಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ವಿದೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಕರ್ನಾಟಕ ಶಿಕ್ಷಣ ವಿಧೇಯಕಕ್ಕೆ ತಿದ್ದುಪಡಿಯನ್ನು ಮಾಡಿ 2017ರಿಂದ ಅನ್ವಯವಾಗುವಂತೆ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ 5 ವರ್ಷ ಸೆರೆವಾಸ ಅಥವಾ ರು.5 ಲಕ್ಷ ದಂಡ ಅಥವಾ ಎರಡೂ ಶಿಕ್ಷೆ ವಿಧಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

question paper leak: 5 years jail and 5 lakh fine

ಪರೀಕ್ಷೆಯಲ್ಲಿ ಅಕ್ರಮ ಎಂದರೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಮತ್ತು ಮೌಲ್ಯ ಮಾಪನ ವೇಳೆ ವಿದ್ಯಾರ್ಥಿಗಳು ಹಾಗೂ ಇತರರು ಮಾಡುವ ತೊಂದರೆಗಳ ವಿರುದ್ಧ ವಿಧೇಯಕ ಕ್ರಮ ಕೈಗೊಳ್ಳಲಿದೆ. ಅಲ್ಲದೆ ಈ ತಿದ್ದುಪಡಿಯಲ್ಲಿ ಅಕ್ರಮ ತಡೆಯಲು ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಪ್ರಸ್ತಾಪಿಸಲಾಗಿದೆ.

ಇದರ ಅನ್ವಯ ಬೆರಳಚ್ಚು ಮಾಡಿದ, ಧ್ವನಿಮುದ್ರಿತ, ಛಾಯಾಚಿತ್ರ ಅಥವಾ ಜೆರಾಕ್ಸ್ ಮಾಡಿದ ಬೇರೆ ಯಾವುದೇ ಸಾಮಗ್ರಿಯನ್ನು ಯಾವುದೇ ವ್ಯಕ್ತಿ ರವಾನೆ ಮಾಡುವುದು ಅಥವಾ ವ್ಯಕ್ತಿಯಿಂದ ಸಹಾಯ ಪಡೆಯಲು ಯತ್ನಿಸುವುದು. ಅರ್ಹತೆಯಿಲ್ಲ ಅಂಕ ಅಥವಾ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಅವಕಾಶ ಕಲ್ಪಿಸುವುದು, ಪರೀಕ್ಷಾ ಅವಧಿಯಲ್ಲಿ ಮತ್ತು ಅವಧಿಗಿಂತ ಮುಂಚೆ ಯಾರೇ ಕಾನೂನು ಮೀರಿದರೂ ಅಕ್ರಮ ಎಂದು ಪರಿಗಣಿಸಲಾಗುವುದು.

ಇನ್ನು ಪ್ರಶ್ನೆಪತ್ರಿಕೆಯನ್ನು ಕೊಳ್ಳುವುದು, ಮಾರುವುದು,ಛಾಯಾಚಿತ್ರ ಮುಂತಾದ ಚಟುವಟಿಕೆಗಳೂ ಅಕ್ರಮವೆಂದು ಪರಿಗಣಿಸಿ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಸಭೆಯಲ್ಲಿ ವಿಧೇಯಕವನ್ನು ಮಂಡಿಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Attempting to leak, buying, possessing, or selling a ‘leaked’ question paper or part of the question paper will henceforth leave the culprit in jail for five years along with a whopping fine of Rs 5 lakh. the state government on Thursday tabled a bill in the assembly.
Please Wait while comments are loading...