ವಿಷ ಆಹಾರ ಸೇವನೆ: ಹಿರೇಹಡಗಲಿ ಗ್ರಾಮದಲ್ಲಿ 40 ಜನರಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು

ವಿಜಯನಗರ, ಏಪ್ರಿಲ್‌, 14: ಖಾಸಗಿ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ್ದ 40 ಜನರಿಗೆ ವಾಂತಿ, ಭೇದಿಯಾಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಗುರುವಾರ ರಾತ್ರಿ (ಏಪ್ರಿಲ್‌ 13) ನಡೆದಿದೆ.

ಗ್ರಾಮದ ಕುಟುಂಬವೊಂದರ ಖಾಸಗಿ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ್ದ ಹಿರೇಹಡಗಲಿಯ 27 ಜನ, ಹ್ಯಾರಡ ಗ್ರಾಮದ 13 ಜನರಿಗೆ ಹೊಟ್ಟೆ ನೋವು ಆರಂಭವಾಗಿ ವಾಂತಿ ಭೇದಿ ಕಾಣಿಸಿಕೊಂಡಿದೆ. ನಂತರ ಅಸ್ವಸ್ಥಗೊಂಡಿದ್ದ ಎಲ್ಲರನ್ನೂ ಹಿರೇಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Vomiting and diarrhea to 40 people due to food poisoning in Hirehadagali village

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಲೀಂ ಹಾಗೂ ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅವರೆಲ್ಲ ದೋಷಪೂರಿತ ಆಹಾರ ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ ಎನ್ನು ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ಸೇರಿದ್ದ 30ಕ್ಕೂ ಹೆಚ್ಚು ಜನ

ಹಾಗೆಯೇ ಚರಂಡಿ ನೀರು ಬೆರೆತ ನೀರನ್ನು ಕುಡಿದು ಆಸ್ಪತ್ರೆಗೆ ಸೇರಿದ್ದ ಸುಮಾರು 30ಕ್ಕೂ ಅಧಿಕ ಮಂದಿ ಪೈಕಿ ಓರ್ವ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಕಲುಷಿತ ನೀರು ಸೇವಿಸಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ವ್ತಾಪ್ತಿಯ ಅನಪುರ ಗ್ರಾಮೀಣ ನಿವಾಸಿಯಾಗಿರುವ ಸಾವಿತ್ರಮ್ಮ (34) ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಜೀವ ಧಾರುಣ ಘಟನೆ ನಡೆದಿತ್ತು.

ಅನಪುರ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಕುಡಿಯುವ ನಿರೀನ ಪೈಪ್‌ಗೆ ಚರಂಡಿ ನೀರು ಕೂಡಿಕೊಂಡು ಶುದ್ಧ ನೀರು ಕಲುಷಿತಗೊಂಡಿದೆ. ಆ ನೀರು ಕುಡಿದ ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಆಗಿದೆ. ಪ್ರಕರಣ ಗೊತ್ತಾಗುತ್ತಿದ್ದಂತೆ ಅವರೆಲ್ಲರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನೀರು ಕಲುಷಿತಗೊಂಡಿದ್ದೇ ಜನರು ಅಸ್ವಸ್ಥರಾಗಲು ಪ್ರಮುಖ ಕಾರಣ ಎಂದು ಹೇಳಲಾಗಿತ್ತು.

ಕಲುಷಿತ ನೀರು ಕುಡಿದಿದ್ದರಿಂದ ಒಟ್ಟು 24 ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಮತ್ತೆ 06 ಮಂದಿಗೆ ಅದೇ ರೀತಿ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು ಅವರೆಲ್ಲ ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆದಿದ್ದರು. ಈ ಪೈಕಿ ಸಾವಿತ್ರಮ್ಮ ಎಂಬ ಮಹಿಳೆ ಅಸುನೀಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಗುರುಮಠಕಲ್ ತಾಲೂಕಿನ ಆ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು.

ಅಲ್ಲದೇ ಜಿಲ್ಲಾಸ್ಪತ್ರೆಗೂ ಸಹ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದರು. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಹಾಗೆಯೇ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಅಭಯ ನೀಡಿದ್ದರು.

ಕಲುಷಿತ ನೀರು ಸೇವಿಸಿ 80 ವರ್ಷದ ವೃದ್ಧೆ ಸಾವು

ಕಲುಷಿತನ ನೀರಿನ ಸಮಸ್ಯೆ ಇದೇನು ಮೊದಲ ಬಾರಿ ಸಂಭವಿಸಿದ್ದಲ್ಲ. ಇದೇ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ್ ಗ್ರಾಮದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಲುಷಿತ ನೀರು ಸೇವಿಸಿದ್ದರಿಂದ ವೃದ್ಧೆ ಈರಮ್ಮ (80) ಸಾವಿಗೀಡಾಗಿದ್ದರು. ಅದೇ ವೇಳೆ ನೀರು ಕುಡಿದಿದ್ದ 40ಕ್ಕೂ ಅಧಿಕ ಮಂದಿ ಆನಾರೋಗ್ಯ ತುತ್ತಾಗಿದ್ದರು. ಅವರೆಲ್ಲರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+