ಡಿಸಿಎಂ ಹುದ್ದೆ ಬದಲಿಗೆ ರಾಮುಲು ಮುಂದಿಟ್ಟರು ಪ್ರಮುಖ ಬೇಡಿಕೆ

ಬಳ್ಳಾರಿ, ಆಗಸ್ಟ್ 28: ಉಪಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದದ್ದಕ್ಕೆ ಬೇಸರವಿಲ್ಲ, ವಾಲ್ಮಿಕಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿ ಸಾಕು, ಅದಾದರೆ ಎಲ್ಲವೂ ದೊರೆತಂತೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಆ ಹುದ್ದೆ ಕೈತಪ್ಪಿದೆ. ರಾಮುಲು ಅವರ ಬೆಂಬಲಗಿರು ಈ ಕಾರಣದಿಂದಾಗಿ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ರಾಮುಲು ಅವರು ನನಗೆ ಡಿಸಿಎಂ ಹುದ್ದೆ ಬೇಡ ಎಂದಿದ್ದಾರೆ.

ನನಗೆ ಯಾವ ಹುದ್ದೆಯೂ ಬೇಡ, ನಾನು ಪ್ರತಿನಿಧಿಸುವ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7.5% ಕ್ಕೆ ಹೆಚ್ಚಿಸಿದರೆ ಎಲ್ಲವೂ ಸಿಕ್ಕಂತೆ ಎಂದು ರಾಮುಲು ಇಂದು ಹೇಳಿದ್ದಾರೆ.

I did not want any post, please give reservation to ST: Sriramulu

ಮೀಸಲಾತಿ ಹೆಚ್ಚಳ ಕುರಿತು ಈಗಾಗಲೇ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಈ ವಿಚಾರದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಶಿವನಗೌಡ ಪಾಟೀಲ್, ರಾಜೂಗೌಡ ಎಲ್ಲರೂ ಒಂದಾಗಿದ್ದೇವೆ ಎಂದರು.

ಶ್ರೀರಾಮುಲು ಅವರಿಗೆ ಆರೋಗ್ಯ ಸಚಿವ ಸ್ಥಾನ ನೀಡಲಾಗಿದೆ. ಆದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಶ್ವಥ್‌ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+