ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷ ನಾಯಕನಾಗಿ ಸವಲತ್ತು ನೀಡಿಲ್ಲ ಯಾಕೆ- ಎಚ್ ಡಿಕೆ

By Srinath
|
Google Oneindia Kannada News

ಬೆಂಗಳೂರು, ಜೂನ್ 22- ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಕಾಯಾವಾಚಾಮನಸಾ ದುಡಿಯುತ್ತಿರುವ ತಮ್ಮನ್ನು ಕಾಂಗ್ರೆಸ್ ಸರಕಾರ ಕಡೆಗಣಿಸಿದೆ. ಸಾಂವಿಧಾನಿಕವಾಗಿ ತಮಗೆ ಸಲ್ಲಬೇಕಾದ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

ತಾವು ರಾಮನಗರದ ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮ ಪಕ್ಷ ವಿಧಾನಸಭೆಯಲ್ಲಿ ಎರಡನೆಯ ಅತಿಹೆಚ್ಚು ಮತ ಗಳಿಸಕೆ ಪಕ್ಷವಾಗಿದೆ. ಹಾಗಾಗತಿ ತಮಗೆ ಪ್ರತಿಪಕ್ಷದ ನಾಯಕನ ಸ್ಥಾನ ಪ್ರಾಪ್ತಿಯಾಗಿದೆ. ಅದು ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಸಮವಾಗಿರುತ್ತದೆ. ಆದರೆ ಸರ್ಕಾರ ತಮಗೆ ಕಾರು, ಮನೆಯನ್ನು ಇನ್ನೂ ಹಂಚಿಕೆ ಮಾಡಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.

ಸಿದ್ದರಾಮಯ್ಯನಂತೆ ಕೆಲಸ ಮಾಡಿಸಿಕೊಳ್ಳುವುದಿಲ್ಲ

ಸಿದ್ದರಾಮಯ್ಯನಂತೆ ಕೆಲಸ ಮಾಡಿಸಿಕೊಳ್ಳುವುದಿಲ್ಲ

ಹಿಂದೆ ಪ್ರತಿ ಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಖುದ್ದಾಗಿ ಅವರೇ ಕೇಳಿ ಏನೆಲ್ಲ ಸೌಲಭ್ಯಗಳನ್ನು ಪಡೆದುಕೊಂಡಿದ್ದರು ಎನ್ನುವುದು ಗೊತ್ತಿದೆ ಎಂದು ಅವರು ಸಿಎಂ ಸಿದ್ದು ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅಂದಿನ ಸರ್ಕಾರದಿಂದ ಹಲವು ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. ಆದರೆ ನಾನು ಅವರಂತೆ ಯಾವುದೇ ಕೆಲಸ ಮಾಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರು ವಿಳಂಬಕ್ಕೆ ಎಚ್ಡಿಕೆಯೇ ಕಾರಣ:

ಕಾರು ವಿಳಂಬಕ್ಕೆ ಎಚ್ಡಿಕೆಯೇ ಕಾರಣ:

ಈ ಮಧ್ಯೆ, ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಬಳಸುತ್ತಿದ್ದ ಹೊಂಡಾ ಸಿಆರ್‌ವಿ ಕಾರನ್ನು ಬಳಸುವುದಕ್ಕೆ ಕುಮಾರಸ್ವಾಮಿ ಅವರಿಗೆ ಮನಸ್ಸಿಲ್ಲ. ಹೀಗಾಗಿ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಹಣಕಾಸಿನ ಇತಿಮಿತಿಯಲ್ಲಿ ಬೇರೊಂದು ಹೊಸ ಕಾರು ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿಗೆ 2 ಮನೆಗಳ ಬಗ್ಗೆ ಆಸಕ್ತಿ

ಕುಮಾರಸ್ವಾಮಿಗೆ 2 ಮನೆಗಳ ಬಗ್ಗೆ ಆಸಕ್ತಿ

ಇನ್ನು ಸರ್ಕಾರಿ ಮನೆ ವಿಷಯ. ಸದ್ಯಕ್ಕೆ ಕುಮಾರಸ್ವಾಮಿ ಅವರು ಎರಡು ಮನೆಗಳ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಒಂದು ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಸವಾಗಿದ್ದ ರೇಸ್‌ಕೋರ್ಸ್‌ ರಸ್ತೆಯ ನಿವಾಸ. ಮತ್ತೂಂದು ಈಗ ಸಿದ್ದರಾಮಯ್ಯ ವಾಸಿಸುತ್ತಿರುವ ಕುಮಾರಕೃಪ ಬಳಿಯ ನಿವಾಸ.

ಬೇರೆ ನಿವಾಸಗಳು ಬೇಡವಂತೆ

ಬೇರೆ ನಿವಾಸಗಳು ಬೇಡವಂತೆ

ಆದರೆ, ಕುಮಾರಸ್ವಾಮಿ ಅವರು ಈ ಎರಡೂ ನಿವಾಸಗಳಿಗೆ ಬೇಡಿಕೆ ಸಲ್ಲಿಸುವ ಮೊದಲೇ ಇಬ್ಬರು ಸಚಿವರಿಗೆ ಹಂಚಿಕೆಯಾಗಿದ್ದವು. ಯಡಿಯೂರಪ್ಪ ವಾಸವಾಗಿದ್ದ ನಿವಾಸ ಇದೀಗ ಅರಣ್ಯ ಸಚಿವ ರಮಾನಾಥ್‌ ರೈ ಅವರಿಗೆ ಮತ್ತು ಸಿದ್ದರಾಮಯ್ಯ ವಾಸಿಸುತ್ತಿರುವ ಮನೆ ಲೋಕೋಪಯೋಗಿ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರಿಗೆ ಹಂಚಿಕೆಯಾಗಿವೆ. ಇವೆರಡನ್ನು ಬಿಟ್ಟು ಬೇರೆಯದನ್ನು ಕೇಳುವುದಕ್ಕೆ ಕುಮಾರಸ್ವಾಮಿ ತಯಾರಿಲ್ಲವಂತೆ.

 ಜನರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುತ್ತೇನೆ

ಜನರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುತ್ತೇನೆ

ಇದರ ಹೊರತಾಗಿಯೂ, ಸರ್ಕಾರಕ್ಕೇನಾದರೂ ಹೃದಯ ವೈಶಾಲ್ಯತೆ ಇದ್ದರೆ ಪ್ರತಿಪಕ್ಷ ನಾಯಕನಿಗೆ ಯಾವ ರೀತಿ ಗೌರವ ನೀಡಬೇಕು ಎಂಬುದನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳಬೇಕು. ಆದರೆ, ನಾನು ಮಾತ್ರ ಸರ್ಕಾರದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಾಜ್ಯದ ಜನರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ಆದಷ್ಟು ಬೇಗ ಕುಮಾರಸ್ವಾಮಿ ಬೇಡಿಕೆ ಈಡೇರಲಿ

ಆದಷ್ಟು ಬೇಗ ಕುಮಾರಸ್ವಾಮಿ ಬೇಡಿಕೆ ಈಡೇರಲಿ

ಭಾನುವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರತಿಪಕ್ಷ ನಾಯಕನಾದ ಬಳಿಕ ಇದು ಸಾಂಪ್ರದಾಯಿಕ ಭೇಟಿ ಅಷ್ಟೆ ಎಂದರು.

ಏನೇ ಆಗಲಿ ಪ್ರತಿಪಕ್ಷ ನಾಯಕನ ಕಾಯಕಕ್ಕೆ ಚ್ಯುತಿ ಬಾರದ ಹಾಗೆ ಕೆಲಸ ನಿರ್ವಹಿಸಲು ಪಣತೊಟ್ಟಿರುವ ಕುಮಾರಸ್ವಾಮಿ ಅವರ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಶೀಘ್ರ ಸ್ಪಂದಿಸಲಿ ಎಂದು ಆಶಿಸೋಣ.

English summary
JDS leadeer and Ramnagar MLA HD Kumaraswamy demands car, house and other perks as he has been named Leader of Opposition in the present Karnataka Assembly. Leader of Opposition holds Cabinet Minister rank statutus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X