ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲ್ಡನ್ ಬ್ಯಾಟ್: ಮಾನವೀಯತೆಯ ಶಿಖರವೇರಿದ ಧವನ್

By Srinath
|
Google Oneindia Kannada News

ಬರ್ಮಿಂಗ್ ಹ್ಯಾಮ್, ಜೂನ್ 24: ಭಾನುವಾರ ರಾತ್ರಿ ಭಾರತೀಯ ಕ್ರಿಕೆಟ್ ತಂಡ ಚರಿತ್ರೆ ನಿರ್ಮಿಸಿದೆ. ಐಸಿಸಿ ಕಪ್ ಗೆದ್ದುಕೊಂಡಿದೆ. ಇತ್ತೀಚೆಗೆ ಒಂದೇ ಸಮನೆ ಉತ್ತಮವಾಗಿಆಡುತ್ತಿರುವ 'ಮೀಸೆ ಮಾಮ' ಶಿಖರ್ ಧವನ್ ಎಂಬ ಅಪ್ಪಟ ಪ್ರತಿಭೆ ಮೈದಾನದಾಚೆಗೂ ತಮ್ಮ ಕರಾಮತ್ತು ತೋರಿದ್ದಾರೆ.

ಉತ್ತರಾಖಂಡ ತೀರ್ಥಕ್ಷೇತ್ರಗಳಲ್ಲಿ ವರುಣನ ನೈಸರ್ಗಿಕ ವಿಕೋಪದಿಂದ ಸಾವಿರಾರು ಮಂದಿ ಅಸುನೀಗಿದ್ದು ಅಲ್ಲಿನ ಜನಜೀವನ ಏರುಪೇರಾಗಿದೆ. ಇದನ್ನು ಕೇಳಿದ ಶಿಖರ್ ಧವನ್ ದುಃಖಿತರಾಗಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ತಾವು ಗೆದ್ದ 'ಗೋಲ್ಡನ್ ಬ್ಯಾಟ್' ಅನ್ನು ಸಂತ್ರಸ್ತರಿಗೆ ಸಮರ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತನ್ಮೂಲಕ ಹಿಮಾಲಯ ಸುನಾಮಿ ಬಗ್ಗೆ ವಿಶ್ವದ ಗಮನ ಸೆಳೆದಿದ್ದಾರೆ.

Uttarakhand flood cricketer Shikhar Dhawan dedicates Golden Bat award to victims,

ಕಳ್ಳಾಟದ ಕ್ರಿಕೆಟ್ ಬಗ್ಗೆ ಎಲ್ಲೆಡೆ ಜನ ಆಕ್ರೋಶಗೊಂಡಿರುವಾಗ ಶಿಖರ್ ಧವನ್ ಅಂತಹ ಅಪ್ಪಟ gentle manಗಳೂ ಇದ್ದಾರಲ್ವಾ ಎಂಬ ಸಮಾಧಾನ ಸಿಕ್ಕಿದೆ. ಇದರಿಂದ 'ಮೀಸೆ ಮಾಮ' ಶಿಖರ್ ಧವನ್ ಖ್ಯಾತಿ ಹಿಮಾಲಯದ ಶಿಖರ ತಲುಪಿದೆ.

'ನನ್ನ ಈ ಆಟ ಮತ್ತು ಅದರಿಂದ ಗೆದ್ದುಕೊಂಡಿರುವ ಚಿನ್ನದ ಬ್ಯಾಟ್ ಅನ್ನು ನಮ್ಮ ದೇಶದಲ್ಲಿ ಜಲಪ್ರಳಕ್ಕೆ ಸಿಲುಕಿ ಪ್ರಾಣತೆತ್ತ ಜನರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರಿಗೆ ಅರ್ಪಿಸುತ್ತೇನೆ. ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುವೆ' ಎಂದು Player of the Tournament ಶಿಖರ್ ಧವನ್ ಆಶಿಸಿದ್ದಾರೆ.

ಕಳೆದ ವರ್ಷ ದೆಹಲಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್- ಹತ್ಯೆ ಪ್ರಕರಣಕ್ಕೆ ಸ್ಪಂದಿಸಿದ್ದ ಯುವರಾಜ್ ಸಿಂಗ್ ಅವರು ತಮಗೆ ಒಲಿದಿದ್ದ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು 'ನಿರ್ಭಯಾ'ಗೆ ಅರ್ಪಿಸಿದ್ದರು.

ಸ್ಪಾಟ್ ಫಿಕ್ಸಿಂಗ್ ಕಾರ್ಮೋಡದ ಮಧ್ಯೆ ಶಿಖರ್, ಯುವರಾಜ್ ಅಂತಹ ಬೆಳ್ಳಿ ಮೋಡಗಳು ಮಿಂಚುವುದರಿಂದ ಜನರನ್ನು ಮತ್ತೆ ಜೀವನ್ಮುಖಿಯಾಗಿಸುತ್ತಿದೆ. Hats off to Shikhar Dhawan, Yuvraj Singh!

English summary
Uttarakhand flood cricketer Shikhar Dhawan dedicates Golden Bat award to victims. Winner of the coveted 'Golden Bat' Shikhar Dhawan made a touching gesture as he dedicated his award to the victims who had lost their lives in the recent flood that affected the state of Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X