ಬೆಳಗಾವಿ : ಪತ್ನಿಯ ಮುಂದೆಯೇ ಪತಿ ಕೊಲೆ

ಬುಧವಾರ ಮುಂಜಾನೆ ಅಥಣಿ ತಾಲೂಕಿನ, ಸುತ್ತಟ್ಟಿ ಗ್ರಾಮದಲ್ಲಿನ ಪಾಂಡು ಅವರ ತೋಟದ ಮನೆಗೆ ಆಗಮಿಸಿದ ಇಬ್ಬರು ಯುವಕರು, ಪಾಂಡು ಪತ್ನಿ ದೀಪಾಳನ್ನು ಕಂಬಕ್ಕೆ ಕಟ್ಟಿಹಾಕಿದ್ದಾರೆ. ನಂತರ ಅವಳ ಎದುರೇ ಸುತ್ತಿಗೆಯಿಂದ ಬಡಿದು ಪಾಂಡುವನ್ನು ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ತೋಟದ ಮನೆಗೆ ಯಾರು ಹೋಗದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳಗ್ಗೆ 11.30ರ ಸುಮಾರಿಗೆ ತೋಟಕ್ಕೆ ಹೋದ ಕಾರ್ಮಿಕರು ಕೊಲೆಯಾದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪಾಂಡು ಮತ್ತು ದೀಪಾ ವಿವಾಹವಾಗಿದ್ದರು.
ಕೊಲೆಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂತಾದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications