ಐಟಿ: ಜೆಡಿಎಸ್ ಕೃಷ್ಣಪ್ಪ ಮನೆಯಲ್ಲಿ ಸಿಕ್ತು 2.6 ಕೋಟಿ ರೂ

ಪ್ರಸಕ್ತ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣಪ್ಪ ಅವರ ಬೆಂಗಳೂರಿನ ಕೆಆರ್ ಪುರಂ ನಿವಾಸದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮನೆಯಲ್ಲಿ ದಾಖಲೆ ಇಲ್ಲದ 2 ಕೋಟಿ 20 ಲಕ್ಷ ರುಪಾಯಿ ಪತ್ತೆಯಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ಕ್ಯಾ. ಪ್ರದೀಪ್ ಆರ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸೂಕ್ತ ದಾಖಲೆಗಳಿಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದ 2 ಕೋಟಿ 20 ಲಕ್ಷ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೃಷ್ಣಪ್ಪ ಅವರ ವಿರುದ್ಧ ತೆರಿಗೆ ವಂಚನೆ ಆರೋಪ ಪ್ರಕರಣ ದಾಖಲಿಸಿಕೊಂಡಿದ್ದು, ಕೃಷ್ಣಪ್ಪ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.












Click it and Unblock the Notifications