ಸಿದ್ದರಾಮಯ್ಯಗೆ ವಾಂತಿಗಳು, ಆಸ್ಪತ್ರೆಗೆ ದಾಖಲು

congress-leader-siddaramaiah-health-upset-gastritis
ಬೆಂಗಳೂರು, ಏ.1: ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತರಾಗಿರುವ ಪ್ರತಿಪಕ್ಷ ನಾಯಕ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರು ತೀವ್ರ ಬಳಲಿಕೆಯಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಬೆಳಗ್ಗೆಯಿಂದ ಮನೆಯಲ್ಲೇ ಸುಧಾರಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರನ್ನು 12 ಗಂಟೆ ವೇಳೆಗೆ ವೈದ್ಯರ ಸೂಚನೆಯಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಸಿದ್ದರಾಮಯ್ಯನವರು ನಿನ್ನೆ ರಾತ್ರಿಯಷ್ಟೇ ಬೆಂಗಳೂರಿಗೆ ವಾಪಸಾಗಿದ್ದರು. ಆದರೆ ಇಂದು ಬೆಳಗ್ಗೆ ಶಿವಾನಂದ ವೃತ್ತದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿದ್ದ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದೆ.

ತೀವ್ರ ಹೊಟ್ಟೆ ನೋವು ಎಂದು ಹೇಳಿದ ಸಿದ್ದರಾಮಯ್ಯನವರಿಗೆ ಒಂದೆರಡು ಬಾರಿ ವಾಂತಿಯಾಗಿದೆ. ತಕ್ಷಣ ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಡಾ. ರವಿಕುಮಾರ್ ಅವರು ಸಿದ್ದರಾಮಯ್ಯನವರ ಮನೆಗೆ ದೌಡಾಯಿಸಿ ಬಂದು ಕೂಲಂಕಷ ಪರೀಕ್ಷೆ ನಡೆಸಿದ್ದಾರೆ.

ಸಿದ್ದರಾಮಯ್ಯನವರಿಗೆ ಗ್ಯಾಸ್ಟ್ರಿಕ್ ಆಗಿದೆ. ಸ್ವಲ್ಪ ಬಿಪಿ ಜಾಸ್ತಿಯಾಗಿದೆ ಎಂದು ವೈದ್ಯ ರವಿಕುಮಾರ್ ವರದಿ ನೀಡಿದರೂ ಸಿದ್ದರಾಮಯ್ಯನವರು ಬಳಲಿಕೆಯಿಂದ ನಿತ್ರಾಣಗೊಂಡಿದ್ದು ಸ್ಪಷ್ಟವಾಗಿತ್ತು.

ಪಿತ್ತ ಜಾಸ್ತಿಯಾಗಿದೆ-ಇಬ್ರಾಹಿಂ: 'ದೆಹಲಿ ಪ್ರೋಗ್ರಾಂ ತುಂಬಾ ಹೆಕ್ಟಿಕ್ ಆಗಿತ್ತು. ಸಿದ್ರಾಮಣ್ಣನಿಗೆ ಅಲ್ಲಿ ಸರಿಯಾದ ನಿದ್ರೆಯಿರಲಿಲ್ಲ. ಹಾಗಾಗಿ ಸುಸ್ತಾಗಿದ್ದಾರೆ. ವೈದ್ಯರು ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ' ಎಂದು ಸಿಎಂ ಇಬ್ರಾಹಿಂ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+