35 ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆತ ನಿಷೇಧ

ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣಾ ಕಾಯ್ದೆ 2010ರ ಅನ್ವಯ ಈ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಈ ಆದೇಶದ ಜಾರಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಹಂತದ ಸಮಿತಿಗಳನ್ನು ರಚಿಸಲಾಗಿದೆ. ಕುಡಿಯುವ ನೀರು, ನೀರಾವರಿ, ವಾಣಿಜ್ಯ ಬಳಕೆ ಮುಂತಾದವುಗಳಿಗೆ ಕೊಳವೆಬಾವಿ ಕೊರೆಯುವ ಮುನ್ನ ಜಿಲ್ಲಾಧಿಕಾರಿ ನೇತೃತ್ವದ ಈ ಸಮಿತಿಗೆ ಅರ್ಜಿ ಸಲ್ಲಿಸಿ, ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಯಾವ ಜಿಲ್ಲೆಗಳಿಗೆ ಈ ಆದೇಶ ಅನ್ವಯವಾಗಲಿದೆ?
ಬೆಂಗಳೂರು ಗ್ರಾಮಾಂತರ - ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ.
ಬೆಂಗಳೂರು ನಗರ - ಆನೇಕಲ್, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ.
ಬಾಗಲಕೋಟೆ - ಬಾದಾಮಿ ಮತ್ತು ಬಾಗಲಕೋಟೆ.
ಬೆಳಗಾವಿ - ಅಥಣಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ.
ಬಳ್ಳಾರಿ - ಹಗರಿಬೊಮ್ಮನಹಳ್ಳಿ, ಹಡಗಲಿ.
ಚಿಕ್ಕಬಳ್ಳಾಪುರ - ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು,ಗುಡುಬಂಡೆ, ಶಿಡ್ಲಘಟ್ಟ.
ಚಿತ್ರದುರ್ಗ - ಹೊಳಲ್ಕೆರೆ ಮತ್ತು ಚಿತ್ರದುರ್ಗ.
ದಾವಣಗೆರೆ - ಜಗಳೂರು.
ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ.
ಕೊಪ್ಪಳ - ಯಲಬುರ್ಗ.
ರಾಮನಗರ - ಕನಕಪುರ ಮತ್ತು ರಾಮನಗರ.
ತುಮಕೂರು - ಚಿಕ್ಕನಾಯಕನ ಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ.
ಇವುಗಳ ಜೊತೆಗೆ ಆದೇಶ ಜಾರಿಯಾಗಿರುವ ತಾಲೂಕಿನಲ್ಲಿ ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳನ್ನು ಭೂ ವಿಜ್ಞಾನ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಬೋರ್ ವೆಲ್ ಉಪಯೋಗಿಸುತ್ತಿರುವ ರೈತರು 50 ರೂ.ಗಳ ಡಿಡಿಯನ್ನು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬೋರ್ ವೆಲ್ ಬಳಸುತ್ತಿರುವವರು 500 ರೂ. ಡಿಡಿಯೊಂದಿಗೆ ಅರ್ಜಿ ನಮೂನೆ 4ನ್ನು ಭರ್ತಿಮಾಡಿ, ಭೂವಿಜ್ಞಾನಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಯ ಸಹಿ ಮಾಡಿಸಿ ಇಲಾಖೆಗೆ ನೀಡಬೇಕಾಗಿದೆ.
ಹೊಸದಾಗಿ ಬೋರ್ ವೆಲ್ ಕೊರೆಯಲು ಬಯಸುವ ರೈತರು ಅರ್ಜಿ ನಮೂನೆ 1-ಎ ಅನ್ನು ಭರ್ತಿಮಾಡಿ ಜಿಲ್ಲಾ ಸಮಿತಿಗೆ ನೀಡಬೇಕು. ನಂತರ ಸಮಿತಿ ಸಭೆ ಸೇರಿ ಬೋರ್ ವೆಲ್ ಕೊರೆಯಲು ಅನುಮತಿ ನೀಡಬೇಕು, ಬೇಡವೋ ಎಂದು ನಿರ್ಧರಿಸಲಿದೆ.












Click it and Unblock the Notifications