ಬೆಂ. ಸರಕಾರಿ ನೌಕರರಿಗೆ ಬಾಡಿಗೆ ಭತ್ಯೆ ಹೆಚ್ಚಳ

ಮುಖ್ಯವಾಗಿ ರಾಜಧಾನಿಯಲ್ಲಿ ಸರಕಾರಿ ನೌಕರಿ ಮಾಡುತ್ತಿರುವವರಿಗೆ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ಮೂಲ ವೇತನದಲ್ಲಿ ಶೇ. 30ರಷ್ಟು ಬಾಡಿಗೆ ಭತ್ಯೆಯನ್ನು ಹೆಚ್ಚಿಸಿದ್ದಾರೆ.
ರಾಜ್ಯದ ಉಳಿದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರತ್ತಲೂ ಗಮನಹರಿಸಿರುವ ಮುಖ್ಯಮಂತ್ರಿ ಶೆಟ್ಟರ್ ಅವರು ಒಟ್ಟಾರೆಯಾಗಿ 6.45 ಲಕ್ಷ ನೌಕರರಿಗೆ ಅನ್ವಯವಾಗುವಂತೆ 2011ರ ಜನಗಣತಿ ಆಧಾರದ ಮೇಲೆ ಮರುವರ್ಗೀಕರಣ ಮಾಡಿ, ಮನೆ ಬಾಡಿಗೆ ಭತ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ:
ಸಾಮಾಜಿಕ ಭದ್ರತೆ ಪಿಂಚಣಿಯನ್ನು 500 ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಬಜೆಟ್ಟಿನಲ್ಲಿ ಮಾಡಲಾಗಿದೆ. ನಿರಾಶ್ರಿತ ವಿಧವೆಯರು, ವಿಕಲಚೇತನರಿಗೆ ಮಾಸಿಕ ಪಿಂಚಣಿಯಲ್ಲಿ 500 ರೂ. ಹೆಚ್ಚಳ ಮಾಡಲಾಗಿದೆ.
80 ವರ್ಷ ಮೇಲ್ಪಟ್ಟ ಎಲ್ಲ ಪಿಂಚಣಿದಾರರಿಗೆ 500 ರೂ. ನಿಂದ 750 ರೂ. ಗೆ ಹೆಚ್ಚಳ, ಶೇ. 75ಕ್ಕೂ ಹೆಚ್ಚು ವಿಕಲಚೇತನರಿಗೆ ಮಾಸಿಕ 1200 ರೂ. ಪಿಂಚಣಿ ನೀಡಲಾಗುತ್ತದೆ.
ನಿವೃತ್ತ ಶಾನುಭೋಗರು, 2517 ಮಾಜಿ ಪಟೇಲರುಗಳಿಗೆ ಮಾಸಿಕ 200 ರೂ. ಹೆಚ್ಚಳ ಪ್ರಸ್ತಾವನೆಯೂ ಬಜೆಟಿನಲ್ಲಿ ಅಡಗಿದೆ.
125 ಸಿವಿಲ್- ಕ್ರಿಮಿನಲ್ ಕೋರ್ಟುಗಳ ಸ್ಥಾಪನೆ:
ಕಾನೂನು ಇಲಾಖೆಗೆ 574 ಕೋಟಿ ರೂ. ನೀಡಲಾಗಿದೆ. ಬೆಂಗಳೂರಿನಲ್ಲಿ ವಕೀಲರ ಭನವಕ್ಕೆ 1 ಕೋಟಿ ರೂ. ನೀಡಲಾಗಿದೆ. 19 ಖಾಸಗಿ ಕಾನೂನು ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲಾಗಿದೆ. ಹೊಸದಾಗಿ 125 ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇನ್ನು ಎಲ್ಲ ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ಧಿಗೆ 300 ಕೋಟಿ ರೂ ತೆಗೆದಿರಿಸಲಾಗಿದೆ.












Click it and Unblock the Notifications