ಎಚ್ಎಂಟಿ ಸಮಾಧಿ ಮೇಲೆ ಕಾಂಗ್ರೆಸ್ಸಿಗರ ದುಡ್ಡಿನ ಸೌಧ
ಬೆಂಗಳೂರು,ಜ.30: ಕೇಂದ್ರ ಸರ್ಕಾರ ಇಬ್ಬರು ಸಚಿವರು ಸೇರಿದಂತೆ ರಾಜ್ಯ ಕಾಂಗ್ರೆಸ್ಸಿನ ಪ್ರಮುಖ ನಾಯಕರ ವಿರುದ್ಧ ಸಾವಿರಾರು ಕೋಟಿ ರೂ. ಮೌಲ್ಯದ ಭೂಮಿ ಪರಭಾರೆ ಮಾಡಿದ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ಮತ್ತು ಯಡಿಯೂರು ವಾರ್ಡ್ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಅವರು ಇಡೀ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಗೆ ಒಳಪಡುವ ಮೂರು ಸಾವಿರ ಕೋಟಿ ರೂ. ಮೌಲ್ಯದ 202 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಕಾಂಗ್ರೆಸ್ ನಾಯಕರ ಪಟ್ಟಿಯನ್ನು ದಾಖಲೆ ಸಮೇತ ಎನ್.ಆರ್ ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
ಎಸ್.ಎಂ.ಕೃಷ್ಣ ಹಾಗೂ ಅವರ ಅಳಿಯ ಸಿದ್ದಾರ್ಥ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ಕೇಂದ್ರ ಸಚಿವ ಜಯಪಾಲ ರೆಡ್ಡಿ, ಕೇಂದ್ರ ಸಚಿವ ದಿವಂಗತ ವಿಲಾಸ್‌ರಾವ್ ದೇಶಮುಖ್ ಅವರ ಸೇಲ್ ಡೀಡ್ ದಾಖಲೆಗಳನ್ನು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್ ಮತ್ತು ಯಡಿಯೂರು ವಾರ್ಡ್ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಪ್ರಕಟಿಸಿ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕಾಂಗ್ರೆಸ್ಸಿಗರ ಹಗರಣದ ಬಗ್ಗೆ ಸ್ಥೂಲವಾದ ವಿವರಣೆ ಮುಂದಿನ ಸರಣಿ ಚಿತ್ರಗಳಲ್ಲಿ ನೋಡುತ್ತಾ ಹೋಗಿ...

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಬೆಂಗಳೂರು ನಗರದ ಜಾಲಹಳ್ಳಿ ಸಮೀಪ 630 ಎಕರೆ ಎಚ್‌ಎಂಟಿ ಕಾರ್ಖಾನೆಗೆ ಸೇರಿದ ಜಮೀನಿದೆ.ಅದರಲ್ಲಿ 202 ಎಕರೆ ಭೂಮಿಯನ್ನು ಅಕ್ರಮವಾಗಿ ಸೇಲ್‌ಡೀಡ್ ಮಾಡಲಾಗಿದೆ

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
1998-99ರಲ್ಲಿ ದೇವನಹಳ್ಳಿ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತಿದೆ ಎಂಬುದು ಗೊತ್ತಾದ ಕೂಡಲೇ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿತ್ತು. ಬಿಲ್ಡರ್‌ಗಳ ಕಣ್ಣು ಇದರ ಮೇಲೆ ಬಿದ್ದಿತು. ಕಾಂಗ್ರೆಸ್ ಮುಖಂಡರು 202 ಎಕರೆ ಎಚ್‌ಎಂಟಿ ಭೂಮಿಯನ್ನು ಬಿಲ್ಡರ್‌ಗಳಿಗೆ ಪರಭಾರೆ ಮಾಡಿದ್ದಾರೆ.

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಪರಭಾರೆ ಮಾಡುವ ಅಧಿಕಾರ ಇರುವುದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾತ್ರ. ಆದರೆ ಎಚ್‌ಎಂಟಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಎಸ್.ಎಂ.ಕೃಷ್ಣ, ಅವರ ಅಳಿಯ ಸಿದ್ಧಾರ್ಥ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ಕೇಂದ್ರ ಸಚಿವ ಜಯಪಾಲರೆಡ್ಡಿ, ದಿ.ವಿಲಾಸ್‌ರಾವ್ ದೇಶ್‌ಮುಖ್ ಭೂಮಿ ಪರಭಾರೆ ಮಾಡಿದ್ದಾರೆ

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಪರಭಾರೆ ಮಾಡಿರುವ 202 ಎಕರೆಯಲ್ಲಿ 32 ಎಕರೆ ಭೂಮಿಯಲ್ಲಿ ಐಬಿಸಿ ಸಂಸ್ಥೆ ಪ್ಲಾಟಿನಂ ಸಿಟಿ ಮಾಡುತ್ತಿದೆ. ಈ ಜಾಗ ಸುಮಾರು 480 ಕೋಟಿ ರೂ. ಬೆಲೆ ಬಾಳುತ್ತದೆ. ಮೊದಲು ಈ ಜಾಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದಾಗಿತ್ತು. ನಂತರ ಅವರಿಂದ ಮೋಟಮ್ಮಗೆ ಹಸ್ತಾಂತರ ಆಗಿ ಅವರಿಂದ ಐಬಿಸಿ ಸಂಸ್ಥೆಗೆ ಮಾರಾಟವಾಗಿದೆ

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಇದರ ಸಮೀಪದಲ್ಲಿ ಟಾಟಾ ಹೌಸಿಂಗ್ ಸಂಸ್ಥೆಯವರು ಅಕ್ವಿಲ್ ಐಸ್ ಎಂಬ 34 ಅಂತಸ್ತುಗಳುಳ್ಳ ಬೃಹತ್ ವಸತಿ ಸಮುಚ್ಚಯ ನಿರ್ಮಿಸಿದ್ದಾರೆ. ಇದರ ಒಂದೊಂದು ಫ್ಲಾಟ್ 3 ರಿಂದ 4 ಕೋಟಿ ಬೆಲೆ ಬಾಳುತ್ತದೆ. ಇಂತಹ ಸಂಸ್ಥೆಗೆ ಎಸ್.ಎಂ.ಕೃಷ್ಣ ಅವರ ಅಳಿಯ ಸಿದಾರ್ಥ ಪಾಲುದಾರರಾಗಿದ್ದಾರೆ.

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಪ್ರೆಸ್ಟೀಜ್ ಸಂಸ್ಥೆಯವರು ವೆಲ್ಲಿಂಗ್‌ಟನ್ ಪಾರ್ಕ್ ಎಂಬ ವಸತಿ ಸಮುಚ್ಚಯವನ್ನು ನಿರ್ಮಿಸುತ್ತಿದ್ದಾರೆ. ವಿಲಾಸ್‌ರಾವ್ ದೇಶ್‌ಮುಖ್ ಅಧಿಕಾರದಲ್ಲಿದ್ದ ವೇಳೆ ಇಲ್ಲಿಗೆ ಭೇಟಿ ನೀಡಿ ಹೋಗಿದ್ದರು. ಈ ವೇಳೆ ವಿಲಾಸ್‌ರಾವ್ ಹಾಗೂ ಜಯಪಾಲ್ ರೆಡ್ಡಿಗೆ ತಲಾ ಎರಡು ಫ್ಲಾಟ್‌ಗಳನ್ನು ಈ ಸಮುಚ್ಚಯದಲ್ಲಿ ನೋಂದಣಿ ಮಾಡಿಕೊಡಲಾಗಿದೆ

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಒಟ್ಟಾರೆ ಇಲ್ಲಿ 63 ವಸತಿ ಹಾಗೂ ವಾಣಿಜ್ಯ ಸಮುಚ್ಚಯಗಳು, 12 ಖಾಸಗಿ ಬಡಾವಣೆಗಳು ತಲೆ ಎತ್ತಿದ್ದು, 2012ರ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಹಗರಣದ ಬಗ್ಗೆ ತನಿಖೆ ನಡೆಸಲು ಕೇಂದ್ರ ಎಂಪವರ್ ಕಮಿಟಿ ರಚಿಸಿತು. ಈ ಸಮಿತಿ ಹಗರಣ ನಡೆದಿರುವುದನ್ನು ಸಾಬೀತುಪಡಿಸಿದೆ.

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
ಎಚ್‌ಎಂಟಿ ಅಧ್ಯಕ್ಷರಾಗಿದ್ದ ಎಂ.ಎಸ್.ಜಾಹಿದ್ ಎಂಬುವರು 50 ಎಕರೆ ಭೂಮಿಯನ್ನು ಯುಕೋ ಬ್ಯಾಂಕಿನಲ್ಲಿ 300 ಕೋಟಿಗೆ ಅಡಮಾನ ಇಟ್ಟಿದ್ದರು. ಹೀಗೆ ಅಕ್ರಮವಾಗಿ ಭೂಮಿಯನ್ನು ಅಡಮಾನ ಇಟ್ಟಿದ್ದರೂ ಕೂಡ ಕೇಂದ್ರ ಸರ್ಕಾರ ಒಂದು ಲಕ್ಷ ರೂ. ದಂಡ ವಿಧಿಸಿ ಅವರನ್ನು ದೋಷಮುಕ್ತ ಎಂದು ಬಿಡುಗಡೆ ಮಾಡಿದೆ.

ಭಾರಿ ಭೂ ಹಗರಣದಲ್ಲಿ ಕಾಂಗ್ರೆಸ್ಸಿಗರು
9 ಎಚ್‌ಎಂಟಿ ಕಾರ್ಖಾನೆ ಬಿಬಿಎಂಪಿಗೆ 14 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಎಚ್‌ಎಂಟಿಗೆ ಸೇರಿದ ಈ ಭೂಮಿಯಲ್ಲಿ ಖಾತೆ ಮಾಡಬಾರದು. ನಕ್ಷೆ ಮಂಜೂರಾತಿ ಮಾಡಬಾರದು ಎಂದು ಸಾರ್ವಜನಿಕ ತಿಳುವಳಿಕೆ ಪತ್ರ ಬಿಡುಗಡೆ ಮಾಡಲಾಗಿತ್ತು. ಆದರೂ ಬಿಬಿಎಂಪಿ ಅಧಿಕಾರಿಗಳು ಈ ವಸತಿ ಸಮುಚ್ಚಯಗಳಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications