ರಾಜಕೀಯ ಜೇನುಗೂಡಾದ ಚಂಚಲಗೂಡ ಜೈಲು

kannada-actor-madan-patel-meets-janardhan-reddy
ಹೈದರಾಬಾದ್, ಜ.22: ಒಎಂಸಿ ಗಣಿ ಹಗರಣದಲ್ಲಿ ಒಬ್ಬೊಬ್ಬರಾಗಿ ಜಾಮೀನು ಪಡೆದು ಹೊರಬರುತ್ತಿರುವ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಲ್ಲಿಯೂ ಜಾಮೀನು ಆಸೆ ಮೂಡಿದೆ.

ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯವಾಗಿ ತಮ್ಮ ಪ್ರಾಬಲ್ಯವನ್ನು ಮರಳಿ ಪಡೆಯಲು ಹವಣಿಸುತ್ತಿರುವ ರೆಡ್ಡಿ ಬ್ರದರ್ಸ್ ರಾಜಕೀಯವಾಗಿ ಎಲ್ಲ ಸಮೀಕರಣಗಳನ್ನೂ ಎಳೆದು ನೋಡುತ್ತಿದ್ದಾರೆ. ಇದಕ್ಕೆ ಚಂಚಲಗೂಡ ಜೈಲು ಕಾರಸ್ಥಾನವಾಗಿದೆ.

ಮೊನ್ನೆಯಷ್ಟೇ ಸದ್ದಿಲ್ಲದೆ ತಮ್ಮನ್ನು ಬೆಳ್ಳುಬ್ಬಿ ಭೇಟಿ ಮಾಡಿದ್ದು ಸ್ವತಃ ರೆಡ್ಡಿಗೇ ಆಶ್ಚರ್ಯ ತಂದಿಟ್ಟಿದೆ. ಆದರೆ ಕೆಲ ಮೂಲಗಳ ಪ್ರಕಾರ
'ರೆಡ್ಡಿಯೇ ಬಿಜೆಪಿಯತ್ತ ಕೈಚಾಚಿದ್ದಾರೆ. ಶ್ರೀರಾಮುಲು ಸಾರಥ್ಯದ ಬಿಎಸ್ಆರ್ ಕಾಂಗ್ರೆಸ್ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯವಾಗುತ್ತಿದೆ. ಹಾಗಾಗಿ, ಯಡಿಯೂರಪ್ಪ ಇಲ್ಲದ ಬಿಜೆಪಿಯಲ್ಲಿ ತಮ್ಮ ಅಸ್ತಿತ್ವವನ್ನು ಮರು ಸ್ಥಾಪಿಸಲು ಖುದ್ದು ಜನಾರ್ದನ ರೆಡ್ಡಿಯೇ ಮುಂದಾಗಿದ್ದಾರೆ' ಎನ್ನಲಾಗಿದೆ.

ಚಂಚಲಗೂಡ ಜೈಲು ಕದ ತಟ್ಟಿದ ಮದನ್ ಪಟೇಲ್:
ಈ ಮಧ್ಯೆ, ಮೊನ್ನೆ ಯಡಿಯೂರಪ್ಪ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿ, KJP ತೊರೆದ ನಟ/ನಿರ್ಮಾಪಕ ಮದನ್ ಪಟೇಲ್ ಚಂಚಲಗೂಡ ಜೈಲಿನ ಕದ ತಟ್ಟಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವ ಮದನ್ ಪಟೇಲ್, ಮಳವಳ್ಳಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಬಿಎಸ್ಆರ್ ಕಾಂಗ್ರೆಸ್ ಮೂಲಕ ಕಣಕ್ಕಿಳಿಯಲು ಯತ್ನಿಸಿದ್ದಾರೆ.

ತತ್ಸಂಬಂಧ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಯಾಚಿಸಿ, ಇಂದು ಬೆಳಗ್ಗೆ ಸೀದಾ ಚಂಚಲಗೂಡ ಜೈಲಿಗೆ ಎಂಟ್ರಿ ಹಾಕಿದ್ದಾರೆ. ಆದರೆ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ಏನಿತ್ತು? ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+