ಅತ್ಯಾಚಾರಿಗಳೇ ಹುಷಾರ್, ಮಹಿಳೆಯಿಂದ ದೂರವಿರಿ

ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಯುವತಿಯರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಗಾಗಿ ಕರಾಟೆ ಸೇರಿದಂತೆ ವಿವಿಧ ಸಮರ ಕಲೆಗಳನ್ನು ತಜ್ಞರು ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಮಹಿಳೆಯರು ತಮ್ಮ ಪರ್ಸಿನಲ್ಲಿ ಕಾರದ ಪುಡಿ ಇಟ್ಟುಕೊಂಡು ತಿರುಗಾಡಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
ಎಲ್ಲಾ ಮಹಿಳೆಯರು ಕರಾಟೆ ಕಲಿಯಲು ಸಾಧ್ಯವಿಲ್ಲ ಮತ್ತು ಕಾರದ ಪುಡಿ ಎಲ್ಲಾ ಸಮಯದಲ್ಲಿ ಇಟ್ಟುಕೊಂಡು ತಿರುಗಾಡುವುದೂ ಸಾಧ್ಯವಿಲ್ಲ. ಹೀಗಿದ್ದರೆ ಮಹಿಳೆಯರು ಏನು ಮಾಡಬೇಕು? ಇಂಥದೊಂದು ಯೋಚನೆ ಬಂದಿದ್ದೇ ತಡ ಕಾರದ ಮಿರ್ಚಿಗೆ ಹೆಸರುವಾಸಿಯಾಗಿರುವ ದಾವಣಗೆರೆಯ ಯುವಕನೊಬ್ಬ ವಿಶಿಷ್ಟ ಬಗೆಯ ಆತ್ಮರಕ್ಷಣಾ ಸಾಧನವನ್ನು ಕಂಡುಹಿಡಿದಿದ್ದಾರೆ. ಇದನ್ನು ಎಲ್ಲಾ ಯುವತಿಯರೂ ಸುಲಭವಾಗಿ ಬಳಸಬಹುದು.
ಅದೇನೆಂದರೆ, ವಿಶೇಷವಾಗಿ ತಯಾರಿಸಲಾಗಿರುವ ಒಂದು ಉಂಗುರ. ವಿಶಿಷ್ಟ ರಾಸಾಯನಿಕ ತುಂಬಿರುವ ಈ ಉಂಗುರದ ಸಹಾಯದಿಂದ, ಆಕ್ರಮಣವಾದಾಗಲೆಲ್ಲ ತಮ್ಮ ಮಾನರಕ್ಷಣೆಗಾಗಿ ಮಹಿಳೆಯರು ಇದನ್ನು ಬಳಸಬಹುದಾಗಿದೆ. ಈ ಉಂಗುರ ಸಾಮಾನ್ಯ ಉಂಗುರ ಅಲ್ಲ. ಇದರ ಹೆಸರು ಎಲೆಕ್ಟ್ರಾನಿಕ್ ಪ್ರೊಟೆಕ್ಷನ್ ರಿಂಗ್. ಇದನ್ನು ಕಂಡುಹಿಡಿದಿರುವುದು ಇಮ್ರಾನ್ ಖಾನ್ ಎಂಬ ಬಿ.ಫಾರಂ. ಪದವೀಧರ.
ಉಂಗುರದಲ್ಲಿ ಏನಿದೆ? : ದೆಹಲಿ ಗ್ಯಾಂಗ್ ರೇಪ್ ಆದ ಬಳಿಕ ಮಹಿಳೆಯರ ರಕ್ಷಣೆ ಹಿತದೃಷ್ಟಿಯಿಂದ ಈ ಉಂಗುರವನ್ನು ಇಮ್ರಾನ್ ಖಾನ್ ಸಿದ್ಧಪಡಿಸಿದ್ದಾರೆ. ಈ ಉಂಗುರ ಹಲವು ವಿಶೇಷತೆಯಿಂದ ಕೂಡಿದೆ. ಈ ಉಂಗುರದಲ್ಲಿ ಹನಿ ಬೀ ವೆನಮ್ ಎಂಬ ರಾಸಾಯನಿಕ ದ್ರವ್ಯವನ್ನು ಸಂಗ್ರಹಿಸಿಡುವ ವ್ಯವಸ್ಥೆಯಿದೆ. ಉಂಗುರದ ಎರಡೂ ಬದಿಯಿರುವ ಸೂಜಿಯ ಮುಖಾಂತರ ರಾಸಾಯನಿಕ ಆಕ್ರಮಣಕಾರನ ದೇಹದ ಒಳಹೋಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ? : ಇದನ್ನ ಇಂಜೆಕ್ಟ್ ಮಾಡಲು ಒಂದು ಬಟನ್ ವ್ಯವಸ್ಥೆ ಕೂಡ ಇದೆ. ಯಾರಾದರೂ ಅಟ್ಯಾಕ್ ಮಾಡಲು ಬಂದಾಗ ಬಟನ್ ಒತ್ತಿದರೆ ಸಾಕು ರಾಸಾಯನಿಕ ದ್ರವ್ಯ ಮನುಷ್ಯನ ದೇಹಕ್ಕೆ ಸೇರುತ್ತದೆ. ಆಗ ವ್ಯಕ್ತಿ ತೀವ್ರ ಉರಿಯಿಂದ ಒದ್ದಾಡಲು ಪ್ರಾರಂಭಿಸುತ್ತಾನೆ. ಹತ್ತು ಹೆಜ್ಜೇನು ಕಡಿದಷ್ಟು ಉರಿ ಅನುಭವವಾಗುತ್ತದೆ ಅಂತಾರೆ ಇಮ್ರಾನ್. ಆದರೆ ಮಹಿಳೆಯರು ಇದನ್ನು ಹುಷಾರಾಗಿ ಬಳಸಬೇಕಷ್ಟೆ. ಎಂಟು ವರ್ಷಕ್ಕಿಂತ ಕೆಳಗಿರುವ ಮಕ್ಕಳಿಗೆ ಇದನ್ನು ಬಳಸುವುದು ಹಿತವಲ್ಲ.
ರೈಲು, ಬಸ್ಸುಗಳಲ್ಲಿ ಒಂಟಿಯಾಗಿ ಅಡ್ಡಾಡುವ ಶಾಲಾ ಕಾಲೇಜು ಹುಡುಗಿಯರು, ನಿರ್ಜನ ಪ್ರದೇಶದಲ್ಲಿ ವಾಸವಿರುವ ಮಹಿಳೆಯರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಯುವತಿಯರು, ಅಥವಾ ಇದರ ಅಗತ್ಯ ತಮಗೆ ಇದೆ ಎಂದು ಆತಂಕಕ್ಕೀಡಾದವರು ಈ ಉಂಗುರವನ್ನು ರಕ್ಷಣೆಗಾಗಿ ಇಟ್ಟುಕೊಳ್ಳಬಹುದು. ಇದರ ಬೆಲೆ ಕೂಡ ಕಡಿಮೆ ಅಂತಾರೆ ಇಮ್ರಾನ್. ಸದ್ಯಕ್ಕೆ ಪ್ರಾಯೋಗಿಕವಾಗಿ ಉಂಗುರವನ್ನು ಸಿದ್ಧಪಡಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುತ್ತಾರಂತೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications