ವರ್ತೂರಿಗೆ ಎಚ್ ಡಿ ಕುಮಾರಸ್ವಾಮಿ 'ವಿಶೇಷ ಪ್ರವಚನ'

ಈ ಮಧ್ಯೆ, 'ಕೋಲಾರ ಬೇಲಿ ಗಿಡದ ಊಸರವಳ್ಳಿ' ಎಂದು ರಾಜಕೀಯ ವಲಯದಲ್ಲಿ ಹೆಸರಾಗಿರುವ ವರ್ತೂರು ಪ್ರಕಾಶ್ ಬಗ್ಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ 'ವಿಶೇಷ ಪ್ರವಚನ' ನಡೆಸಿದ್ದಾರೆ. ವರ್ತೂರು ಪ್ರಕಾಶ್ ಈ ಹಿಂದೆ ಜೆಡಿಎಸ್ ಸೇರಲು ಶತಪ್ರಯತ್ನ ನಡೆಸಿದ್ದರು ಎಂಬುದು ಗಮನಾರ್ಹ.
ಕೋಲಾರ ತಾಲೂಕಿನ ವಕ್ಕಲೇರಿ, ನರಸಾಪುರ, ಕ್ಯಾಲನೂರು ಗ್ರಾಮಗಳಲ್ಲಿ ಜೆಡಿಎಸ್ ಪಕ್ಷ ಗುರುವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ 'ವರ್ತೂರು ಪ್ರಕಾಶ್ ಒಬ್ಬ ಅಸಮರ್ಥ ರಾಜಕಾರಣಿ' ಎಂದು ಲೇವಡಿಯಾಡಿದ್ದಾರೆ.
'ಸಚಿವ ವರ್ತೂರು ಪ್ರಕಾಶ್ ಮಾದರಿ ಕಾಲಕಾಲಕ್ಕೆ ಬೇರೆಯವರ ತಲೆ ಹಿಡಿಯುತ್ತಿಲ್ಲ. ತಮ್ಮದು ಸ್ವಚ್ಛ ರಾಜಕಾರಣ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ. 'ರೈತರ ಬಗ್ಗೆ ಹಾಗೂ ಅಧಿಕಾರಿಗಳ ಬಗ್ಗೆ ಲಘುವಾಗಿ ಮಾತನಾಡುವ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತ ಪಡಬೇಕಾಗುತ್ತದೆ' ಎಂದೂ ಎಚ್ಚರಿಸಿದರು.
'ರೈತ ಕುಟುಂಬದಿಂದ ಬಂದು ಮಾನ ಮರ್ಯಾದೆಯಿಂದ ಬದುಕುವ ಜನ ಆಲೂಗಡ್ಡೆ, ಹಾಲು, ಕೊತ್ತಂಬರಿ ಸೊಪ್ಪು ಮಾರಿ ಜೀವನ ನಡೆಸುವವರೇ ಹೊರತು ನೀತಿಗೆಟ್ಟ ರಾಜಕಾರಣ ಮಾಡುವವರಲ್ಲ' ಎಂದು ವರ್ತೂರು ಪ್ರಕಾಶ್‌ಗೆ ಪರೋಕ್ಷವಾಗಿ ಕುಟುಕಿದರು.












Click it and Unblock the Notifications