ಟೆಕ್ಕಿ ಪತಿ ಜೊತೆ ಕಿರಿಕ್, ಪತ್ನಿ ಆತ್ಮಹತ್ಯೆ

Techie's wife hangs herself Bangalore
ಬೆಂಗಳೂರು, ಜ.6: ಕೌಟುಂಬಿಕ ಕಲಹಕ್ಕೆ ಬೇಸತ್ತು ಯುವ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ಮನನೊಂದಿದ್ದ 29 ವರ್ಷದ ಚೆನ್ನೈ ಮೂಲದ ಪೂಜಾ ರುಚಿತ್ ಅವರು ಕುಂದಲಹಳ್ಳಿ ಬಳಿಯ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ಆಕೆ ಪತಿ ರುಚಿತ್ ಅವರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಈ ದಂಪತಿಗೆ 5 ವರ್ಷದ ಮಗಳಿದ್ದಾಳೆ. ರುಚಿತ್ ಐಟಿಪಿಎಲ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂಜಾ ಕೂಡಾ ಟೆಕ್ಕಿಯಾಗಿದ್ದು ಕೆಲಕಾಲ ಸಮೀಪದ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಚೆನ್ನೈನಿಂದ ಪೂಜಾ ಮನೆ ಕಡೆಯವರು ಬೆಂಗಳೂರಿಗೆ ಬಂದಿದ್ದು, ವೈಟ್ ಫೀಲ್ಡ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೇಲ್ನೋಟಕ್ಕೆ ಕೌಟುಂಬಿಕ ಕಲಹದ ಕೇಸ್ ನಂತೆ ಕಂಡು ಬಂದಿದೆ. ದಂಪತಿಗಳು ವಿವಾಹ ವಿಚ್ಛೇದನ ಬಯಸಿದ್ದರು. ಆದರೆ, ಕೆಲ ಸಾಕ್ಷಿಗಳ ಪ್ರಕಾರ ಪೂಜಾ ಸಾಯುವ ಎರಡು ದಿನ ಮೊದಲು ಗಂಡ ಹೆಂಡತಿ ಜೊತೆ ಜೊತೆಯಾಗೇ ಇದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ವೈಟ್ ಫೀಲ್ಡ್ ಪೊಲೀಸರು ಹೇಳಿದ್ದಾರೆ.

2012ರ ಅಕ್ಟೋಬರ್ ನಲ್ಲೇ ದಂಪತಿಗಳು ಬೇರೆ ಬೇರೆ ವಾಸಿಸಲು ನಿರ್ಧರಿಸಿದ್ದರು. ಸುಮಾರು 7 ವರ್ಷಗಳ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಆದರೆ, ಇಬ್ಬರ ನಡುವೆ ಭಾಷೆ, ಸಂಸ್ಕೃತಿ, ಹಣಕಾಸು ಸೇರಿದಂತೆ ಹಲವಾರು ವಿಷಯಗಳಲ್ಲಿ ಹೊಂದಾಣಿಕೆ ಅಸಾಧ್ಯವಾಗಿತ್ತು. ಈ ನಡುವೆ ಮಗಳನ್ನು ಹೆತ್ತ ಪೂಜಾ ಕೊನೆಗೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು.

ರುಚಿತ್ ಇದ್ದ ಲೇಔಟ್ ನಲ್ಲೇ ಪೂಜಾ ಬೇರೆ ಅಪಾರ್ಟ್ಮೆಂಟ್ ಮಾಡಿಕೊಂಡು ಇದ್ದರು. ಮಗಳು ರುಚಿತ್ ಜೊತೆಯಲ್ಲೇ ಇದ್ದಳು ಎಂದು ತಿಳಿದು ಬಂದಿದೆ.

ಪೂಜಾ ಸಾಯುವುದಕ್ಕೂ ಎರಡು ದಿನಗಳ ಹಿಂದೆ ರುಚಿತ್ ಹಾಗೂ ಪೂಜಾ ಒಟ್ಟಿಗೆ ಮಗಳೊಂದಿಗೆ ಶಾಂಪಿಂಗ್ ಮಾಡಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಹಾಕಿದ ಮೇಲೆ ಇಬ್ಬರು ಚೆನ್ನಾಗಿ ಮಾತನಾಡುತ್ತಿದ್ದರು. ಪರಸ್ಪರ ಮನೆಗೆ ಹೋಗಿ ಬಂದು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆದರೆ, ಪೂಜಾ ಇದ್ದಕ್ಕಿದ್ದಂತೆ ಈ ರೀತಿ ನಿರ್ಣಯ ಕೈಗೊಂಡಿರುವುದು ನಮಗೆಲ್ಲ ಶಾಕ್ ಆಗಿದೆ. ನನಗೆ ರುಚಿತ್ ಕಾಲ್ ಮಾಡಿ ಪೂಜಾ ಯಾಕೋ ಫೋನ್ ಕಾಲ್ ರಿಸೀವ್ ಮಾಡ್ತಾ ಇಲ್ಲ ಮನೆಗೆ ಹೋಗಿ ನೋಡು ನಾನು ಬರ್ತಾದ್ದೀನಿ ಎಂದರು.

ಕೆಲ ಸಮಯದ ನಂತರ ನೆರೆ ಮನೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೊಕ್ಕು ನೋಡಿದರೆ, ಬೆಡ್ ರೂಮ್ ನಲ್ಲಿ ಪೂಜಾ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಳು ಎಂದು ಪೂಜಾ ತಂಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+