ಯಡಿಯೂರಪ್ಪ 'ಏಕ್ ದಿನ್ಕಾ ಸುಲ್ತಾನ್', ಸದಾನಂದ ಲೇವಡಿ

Yeddyurappa power has come down after Haveri convention
ಹಾಸನ, ಡಿ 21: ಮಾಜಿ ಸಿಎಂ ಯಡಿಯೂರಪ್ಪ ಅವರ ಬಂಡವಾಳ ಒಂದೇ ದಿನದಲ್ಲಿ ಬಯಲಾಗಿದೆ. ಡಿಸೆಂಬರ್ 9ರಂದು ಹಾವೇರಿಯಲ್ಲಿ ನಡೆದ ಸಮಾವೇಶದ ನಂತರ ಬಿಎಸ್ವೈ ಶಕ್ತಿ ಬಟ್ಟಾ ಬಯಲಾಗಿದ್ದು ಅವರು 'ಏಕ್ ದಿನ್ಕಾ ಸುಲ್ತಾನ್' ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಲೇವಡಿ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸದಾನಂದ ಗೌಡ, ನನ್ನ ಬಳಿ 74 ಶಾಸಕರು, 12 ಸಂಸದರು ಮತ್ತು 24 ವಿಧಾನಪರಿಷತ್ ಸದಸ್ಯರು ಇದ್ದಾರೆಂದು ಬಡಾಯಿ ಕೊಚ್ಚುಕೊಳ್ಳುತ್ತಿದ್ದ ಯಡಿಯೂರಪ್ಪನವರ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದವರು ಎಷ್ಟು ? ಬೆರಳಣಿಕೆಯಷ್ಟು ಸಾಶಕರು ಮತ್ತು ಸಂಸದರು ಹಾಜರಿದ್ದರು ಎಂದು ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಮೊದಲ ನಾಲ್ಕು ತಿಂಗಳು ಯಡಿಯೂರಪ್ಪ ಹೇಳಿದ್ದನ್ನೆಲ್ಲಾ ಕಾನೂನು ಚೌಕಟ್ಟಿನಲ್ಲಿ ಮಾಡಿದೆ. ಕಾನೂನು ಮೀರಿದ ಕೆಲಸ ನನ್ನಿಂದ ಮಾಡಿಸಲು ಆರಂಭಿಸಿದರು. ಯಾವಾಗ ನಾನು ಅದನ್ನು ಮಾಡಲು ಒಪ್ಪಲಿಲ್ಲವೋ ಅಂದಿನಿಂದಲೇ ನನ್ನ ವಿರುದ್ದ ತಿರುಗಿ ಬಿದ್ದರು.

ಅವರು ಹೇಳಿದ ಕಡತಕ್ಕೆಲ್ಲಾ ಸಹಿ ಹಾಕಿದ್ದರೆ ಇಷ್ಟು ಹೊತ್ತಿಗೆ ನಾನು ಜೈಲಿನಲ್ಲಿ ಇರುತ್ತಿದ್ದೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ಜಾತಿ ಹೆಸರಿನಲ್ಲಿ ಯಡಿಯೂರಪ್ಪ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿ ತೊರೆದು ಗುಜರಾತಿನಲ್ಲಿ ಹೊಸ ಪಕ್ಷ ಸ್ಥಾಪಿಸಿ ಮಣ್ಣು ಮುಕ್ಕಿದ ಕೇಶುಭಾಯಿ ಪಟೇಲ್ ಪರಿಸ್ಥಿತಿ ಏನಾಯಿತು? ಅವರಿಗೆ ಅಲ್ಲಿ ಆದ ಪರಿಸ್ಥಿತಿ ಇಲ್ಲಿ ಕೆಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಆಗಲಿದೆ ಎಂದು ಸದಾನಂದ ಗೌಡ ಭವಿಷ್ಯ ನುಡಿದ್ದಾರೆ.

ನಮ್ಮ ರಾಜ್ಯಾಧ್ಯಕ್ಷ ಈಶ್ವರಪ್ಪನವರ ಮೇಲೆ ಬಂದ ಆರೋಪ ರಾಜಕೀಯ ಪ್ರೇರಿತ. ರಾಜಕೀಯ ತಂತ್ರಗಾರಿಕೆ ಅನ್ನುವುದು ನಮಗೂ ತಿಳಿದಿದೆ. ಈಶ್ವರಪ್ಪ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ ಎಂದು ಸದಾನದ ಗೌಡ ಸಮಜಾಯಿಷಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+