5 ಜಿಲ್ಲೆಗಳಲ್ಲಿ ದೇವೇಗೌಡರ ಬಿರುಸಿನ ಪ್ರವಾಸ

JDS supremo H D Deve Gowda Hyderbad Karnataka tour itnerary
ಬೆಂಗಳೂರು, ಡಿ 21: ಸಾಮಾನ್ಯವಾಗಿ ಯಾವುದೇ ರಾಜಕೀಯ ಹೆಜ್ಜೆ ಇಡುವ ಮೊದಲು ಭವಿಷ್ಯ, ಜಾತಕ, ಪಂಚಾಗ, ಘಳಿಗೆ ಪ್ರಕಾರವೇ ಸಾಗುವ ಮಾಜಿ ಪಿಎಂ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಈಬಾರಿ 'ಧನುರ್ಮಾಸದಲ್ಲಿ' ಪಕ್ಷ ಸಂಘಟನೆ ಕಾರ್ಯನಿಮಿತ್ತ ಪ್ರವಾಸಕ್ಕೆ ತೆರಳಲಿದ್ದಾರೆ.

ಮಕರಸಂಕ್ರಾತಿಯ ನಂತರ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಪ್ರವಾಸ ಹೊರಡಲು ಮುಂದಾಗಿದ್ದ ದೇವೇಗೌಡ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇದೇ ಸೋಮವಾರ (ಡಿ 24) ದಿಂದ ಪ್ರವಾಸ ಆರಂಭಿಸಲಿದ್ದಾರೆ.

ದೇವೇಗೌಡರ ಪ್ರವಾಸದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೂ ಹೈದರಾಬಾದ್ ಕರ್ನಾಟಕ ಪ್ರವಾಸ ಹೊರಡಲಿದ್ದಾರೆ.

ಸಂಕ್ರಾಂತಿ ಹಬ್ಬದ ನಂತರ ಅಸೆಂಬ್ಲಿ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಲು ಜೆಡಿಎಸ್ ನಿರ್ಧರಿಸಿದ್ದು, ಇದಕ್ಕೂ ಮುನ್ನ ವಿಧಾನಸಭಾ ಕ್ಷೇತ್ರಾವಾರು ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಪಕ್ಷ ನಿರ್ಧರಿಸಿದೆ.

ಕುಮಾರಸ್ವಾಮಿ ಸದ್ಯ ಕರಾವಳಿ ಜಿಲ್ಲಾ ಪ್ರವಾಸದಲ್ಲಿದ್ದು, ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.

ದೇವೇಗೌಡರ ಪ್ರವಾಸದ ಕಿರು ಮಾಹಿತಿ ಇಂತಿದೆ:

ಸೋಮವಾರ (ಡಿ 24) - ಬೀದರ್
ಮಂಗಳವಾರ (ಡಿ 25) - ಗುಲ್ಬರ್ಗ ಮತ್ತು ಯಾದಗಿರಿ
ಬುಧವಾರ (ಡಿ 26) - ರಾಯಚೂರು
ಗುರುವಾರ (ಡಿ 27) - ಕೊಪ್ಪಳ
ಶುಕ್ರವಾರ (ಡಿ 28) - ಬಳ್ಳಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+