ಸಂಸದ ಎಚ್ ಡಿ ಕುಮಾರಸ್ವಾಮಿ ಸಾಧನೆ ಶೂನ್ಯ
ಕುಣಿಗಲ್,
ಡಿ.4: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಸಂಸತ್ ಸದಸ್ಯರಾಗಿ ಸಾಧಿಸಿರುವುದು ಏನೂ ಇಲ್ಲ ಕುಣಿಗಲ್ ಕಾಂಗ್ರೆಸ್ ಶಾಸಕ ಬಿಬಿ ರಾಮಸ್ವಾಮಿ ಗೌಡ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ. id="toptextpromo">ಶಾಸಕ
ರಾಮಸ್ವಾಮಿ ಗೌಡ ಅವರ ಆರೋಪಗಳು ಹೀಗಿವೆ:*ಚುನಾವಣೆಯಲ್ಲಿ ಗೆದ್ದ ಬಳಿಕ ಒಮ್ಮೆಯೂ ತಾಲೂಕಿನತ್ತ ಮುಖ ಹಾಕಿಲ್ಲ. ಈ ಭಾಗದ ಸಂಸದರಾಗಿ ತಾಲೂಕಿಗೆ ಇವರ ಕೊಡುಗೆಯೇನು. ಅನೇಕ ಸಭೆ ಸಮಾರಂಭಗಳು ನಡೆದರೂ ಸಭೆಗಳಿಗೆ ಗೈರು ಹಾಜರಾಗುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಯಾವುದೇ ಸಹಕಾರ ನೀಡಿಲ್ಲ.
* ರೈತರ ಹೆಸರು ಹೇಳಿಕೊಂಡು ಆರಿಸಿಹೋದ ಕುಮಾರಸ್ವಾಮಿ ಅವರು, ತಾಲೂಕಿನ ಅಭಿವೃದ್ಧಿಯತ್ತ ಕಿಂಚಿತ್ತೂ ಗಮನ ಹರಿಸಿಲ್ಲ. ಒಂದು ನಯಾ ಪೈಸೆ ಅನುದಾನವನ್ನೂ ತಾಲೂಕಿಗೆ ಒದಗಿಸಿಲ್ಲ. id='are-slot-1' class='oiad oi-axt oiadv'> id='top-searched-articles'>
ರಾಮಸ್ವಾಮಿ
ಗೌಡ ಇನ್ನೂ ಹೇಳಿದರು:ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಜಾತ್ಯತೀತ ಹೆಸರಿನಲ್ಲಿ ಪಕ್ಷವನ್ನು ಸ್ಥಾಪಿಸಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡ ಇವರ ಹಾದಿಯನ್ನೇ ತುಳಿದಿದ್ದಾರೆ. ಇದರಿಂದ ರಾಜ್ಯದಲ್ಲಿ ಜಾತಿಯ ರಾಜಕಾರಣ ಉಲ್ಬಣಿಸುತ್ತಿದೆ.












Click it and Unblock the Notifications