ದ್ರೋಹಿಗಳನ್ನು ಅಸೆಂಬ್ಲಿಗೆ ಕಾಲಿಡೋಕೆ ಬಿಡೋಲ್ಲ, ಬಿಎಸ್ವೈ

Yeddyurappa statement against BJP leaders and Eswarappa
ಶಿವಮೊಗ್ಗ, ನ 29: ಶಿವಮೂಗ ಜಿಲ್ಲೆಯ ಅಭಿವೃದ್ದಿಗೆ ಈ ಯಡಿಯೂರಪ್ಪ ಎಲ್ಲವನ್ನೂ ಮಾಡಿದ್ದಾನೆ. ನಮ್ಮ ಪಕ್ಷದ ಕೆಲವರು ದ್ರೋಹಿಗಳು, ನಿಮ್ಮಂತಹ ವಿಶ್ವಾಸಘಾತಕರನ್ನು ಮುಂದಿನ ಚುನಾವಣೆಯಲ್ಲಿ ವಿಧಾನಸೌಧಕ್ಕೆ ಕಾಲಿಡದಂತೆ ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.

ಸರಕಾರ ನೀಡುವ ಗೂಟದ ಕಾರು ಇನ್ನು ನಿಮಗೆ ಬರೀ ಮೂರು ತಿಂಗಳು. ಈ ದುರಹಂಕಾರದಿಂದ ನನ್ನನ್ನು ದೂರ ಮಾಡಿದ್ದಲ್ಲದೇ ಬೆನ್ನಿಗೆ ಚೂರಿ ಹಾಕಿದ್ದೀರಿ. ಆ ದೇವರು ನಿಮ್ಮನ್ನು ಕ್ಷಮಿಸಿದರೂ ನಾನು ಮತ್ತು ರಾಜ್ಯದ ಜನತೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಯಡಿಯೂರಪ್ಪ ಯಾರೂ ಹೆಸರೂ ಬಳಸದೆ ಗುಡುಗಿದ್ದಾರೆ.

ನಗರದಲ್ಲಿ ಯಡಿಯೂರಪ್ಪ ಅಭಿಮಾನಿ ಬಳಗ ಆಯೋಜಿಸಿದ್ದ 'ನೀವೆಲ್ಲೋ ನಾವಲ್ಲಿ' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯಡಿಯೂರಪ್ಪ, ನನಗೆ ದ್ರೋಹ ಬಗೆದ ಪಕ್ಷದ ಕೆಲವರನ್ನು ಮುಂದಿನ ಚುನಾವಣೆಯಲ್ಲಿ ಅಸೆಂಬ್ಲಿಗೆ ಕಾಲಿಡಲು ಬಿಡುವುದಿಲ್ಲ. ರಾಜ್ಯದ ಮೂಲೆ ಮೂಲೆಗೆ ತೆರಳಿ ನೀವು ಮಾಡಿದ ದ್ರೋಹವನ್ನು ಜನತೆಯ ಮುಂದಿಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ನೆಲೆಯಿಲ್ಲದ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವನು ನಾನು. ಬಹುಮತಕ್ಕೆ ಆಪರೇಶನ್ ಕಮಲ ನಡೆಸಬೇಕಾಯಿತು. ಈಗ ಅದನ್ನು ದೂರುತ್ತಿರುವ ಅಂದಿನ ಇಂಧನ ಸಚಿವ, ಗೂಟದ ಕಾರನ್ನು ಪಡೆಯಲು ಮೊದಲ ಸಾಲಿನಲ್ಲಿ ನಿಂತಿದ್ದರು ಎಂದು ಈಶ್ವರಪ್ಪ ಅವರನ್ನು ಬಿಎಸ್ವೈ ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ಪರಿಶ್ರಮದಿಂದ ಈಗ ಈಶ್ವರಪ್ಪ ಉಪ ಮುಖ್ಯಮಂತ್ರಿ ಆಗಿರುವುದನ್ನು ಮರೆಯದಿರಲಿ. ಆಪರೇಶನ್ ಕಮಲ ಮಾಡಿದ್ದು ತಪ್ಪು ಎಂದಾದಲ್ಲಿ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಲಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+