ಪ್ರವಾಸಿ ತಾಣ ಮುತ್ತತ್ತಿಯಲ್ಲಿ ಮದ್ಯಪಾನ ನಿಷೇಧ

Liquor Ban in Muthathi Forest
ಮಂಡ್ಯ, ಅ.23: ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಮದ್ಯ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎಂದು ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿ ಆನಂದ್ ಹೇಳಿದ್ದಾರೆ.

ಮತ್ತತ್ತಿ ಅರಣ್ಯಪ್ರದೇಶವನ್ನು ಕಾವೇರಿ ವನ್ಯ ಜೀವಿ ಪ್ರದೇಶವೆಂದು ಘೋಷಿಸಿದ ಹಿನ್ನೆಲೆಯಲ್ಲಿ ವನ್ಯಜಿವಿಗಳಿಗೆ ಹಾನಿಯಾಗುವ ಯಾವುದೇ ಕೆಲಸಗಳಿಗೆ ಇಲ್ಲಿ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ರೀತಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆನಂದ್ ಹೇಳಿದರು.

ಅರಣ್ಯ ಪ್ರದೇಶಗಳಿಗೆ ಅನೈತಿಕ ಚಟುವಟಿಕೆಗಳನ್ನು ಹೆಚ್ಚುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ. ಮದ್ಯ ಹಾಗೂ ಧೂಮಪಾನ ಸೇವಿಸಿ ಸ್ವೇಚ್ಛಾಚಾರಿಗಳಾಗಿ ಓಡಾಡಲು ಪ್ರವಾಸಿಗರಿಗೆ ಇನ್ಮುಂದೆ ಅವಕಾಶ ಇರುವುದಿಲ್ಲ.

ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬರುವ ಎಲ್ಲಾ ಪ್ರವಾಸಿಗರನ್ನು ತಪಾಸಣೆ ನಡೆಸಿ ನಂತರ ಒಳಗೆ ಬಿಡಲಾಗುವುದು. ಅರಣ್ಯ ಪ್ರದೇಶದ ಸುತ್ತಮುತ್ತ ವಾಹನಗಳನ್ನು ನಿಲ್ಲಿಸಿ ಮದ್ಯಪಾನ ಮಾಡಿ, ಬಾಟಲಿಗಳನ್ನು ಎಸೆಯುತ್ತಿರುವುದು ಕಂಡು ಬಂದಿದೆ.

ಇದರಿಂದ ವನ್ಯಜೀವಿಗಳಿಗೆ ಅನಗತ್ಯ ತೊಂದರೆಯಾಗುತ್ತಿದೆ. ಹೀಗಾಗಿ ವನ್ಯಜೀವಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಆನಂದ್ ತಿಳಿಸಿದರು.

ಈ ಹಿಂದೆ ಪ್ರವಾಸಿಗರು ತಂದು ಹಾಕುವ ಪ್ಲಾಸ್ಟಿಕ್ ಕವರ್ ಇತ್ಯಾದಿಗಳನ್ನು ಕಾಡು ಪ್ರಾಣಿಗಳು ತಿಂದು ಸಾವನ್ನಪ್ಪಿರುವ ಘಟನೆಗಳು ನಡೆದಿದೆ. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳೆಕೆಗೂ ಸಂಪೂರ್ಣ ನಿಷೇಧ ಹೇರಲಾಗಿದೆ. ಯಾವುದೇ ಅಕ್ರಮ ಚಟುವಟಿಕೆಗಳ ಸೂಕ್ಷ್ಮತೆಗಳು ಕಂಡು ಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಅಭಯಾರಣ್ಯಗಳಲ್ಲಿರುವ ಸರ್ಕಾರಿ ಅತಿಥಿಗೃಹಗಳನ್ನು ಮುಚ್ಚಲು ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರು ಸೋಮವಾರ(ಅ.22) ಆದೇಶಿಸಿದ್ದಾರೆ. ಅತಿಥಿಗೃಹಗಳಿದ್ದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಯೋಗೇಶ್ವರ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ರಕ್ಷಿತಾರಣ್ಯಗಳಲ್ಲಿ ಯಾವುದೇ ಖಾಸಗಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲ. ಅರಣ್ಯ ಪ್ರದೇಶದ ಸುತ್ತಮುತ್ತ ಕೂಡಾ ಅನಧಿಕೃತ ರೆಸಾರ್ಟ್ ಗಳು ತಲೆ ಎತ್ತಿದೆ. ಇದರಿಂದ ವನ್ಯಜೀವಿಗಳ ಸ್ವತಂತ್ರ ಬದುಕಿಗೆ ಅಡ್ಡಿಯಾಗುತ್ತಿದೆ. ಎಲ್ಲಾ ರೆಸಾರ್ಟ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯೋಗೇಶ್ವರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.ಹೇಳಿದ್ದಾರೆ.

ಮುತ್ತತ್ತಿ ಎಲ್ಲಿದೆ: ಬೆಂಗಳೂರಿನಿಂದ ಮೈಸೂರು ಕಡೆಗೆ ಸುಮಾರು 90 ನಿಮಿಷಗಳ ಪಯಣ. ಕಾವೇರಿ ನದಿ ತಟದಲ್ಲಿರುವ ಮುತ್ತತ್ತಿಗೂ ರಾಮಾಯಣಕ್ಕೂ ನಂಟಿದೆ. ಮುತ್ತತ್ತಿಯಲ್ಲಿರುವ ಹನುಮಂತರಾಯ ದೇಗುಲ ಪ್ರಸಿದ್ಧಿ ಪಡೆದಿದೆ.

ದಟ್ಟ ಅರಣ್ಯದ ನಡುವೆ ಇರುವ ಮುತ್ತತ್ತಿ ಬಳಿ ಜಲಕ್ರೀಡೆ, ಟ್ರೆಕ್ಕಿಂಗ್ ಮುಂತಾದ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ, ಇಲ್ಲಿನ ನದಿಯಲ್ಲಿ ಈಜಾಡುವುದು ಅಪಾಯ ಕೂಡಾ. ಅನೇಕ ಜನ ನೀರಿನ ಸೆಳೆತಕ್ಕೆ ಸಿಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿಗೆ Native Planet ವೆಬ್ ತಾಣ ವೀಕ್ಷಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+