ಬೆಳಗಾವಿ ಕುರಿತು ರಾಜದೀಪ್ ಟ್ವಿಟ್ಟರ್ ನುಡಿಮುತ್ತು!

ಹೀಗೆ ರಾಷ್ಟ್ರ ಭಾವೈಕ್ಯದ ಪ್ರಶ್ನೆಗಳನ್ನು ಎತ್ತಿದವರು ಸಿಎನ್ಎನ್-ಐಬಿಎನ್ ಸುದ್ದಿ ವಾಹಿನಿ ಸಂಸ್ಥೆಯ ಪ್ರಧಾನ ಸಂಪಾದಕ ರಾಜದೀಪ್ ಸರ್ದೇಸಾಯಿ. ಬೆಳಗಾವಿಯಲ್ಲಿ ನಡೆಯುತ್ತಿರುವ ಸುವರ್ಣ ವಿಧಾನಸೌಧದ ಉದ್ಘಾಟನೆಯ ಸಂದರ್ಭದಲ್ಲಿ, ಮರಾಠಿ ಜನರನ್ನು ಸಂದರ್ಶಿಸುತ್ತಿದ್ದ ಕೆಲ ವರದಿಗಾರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎತ್ತಿದ್ದಾರೆ.
ಬೆಳಗಾವಿ ಗಡಿ ವಿವಾದವನ್ನು ಎಲ್ಲರೂ ಮರೆತು ಸುವರ್ಣ ವಿಧಾನಸೌಧದ ಉದ್ಘಾಟನೆಯ ಸಂಭ್ರಮದಲ್ಲಿ ಎಲ್ಲರೂ ಮುಳುಗಿರುವಾಗ, ಗಡಿ ವಿವಾದವನ್ನು ಕೆಣಕಿ ಸ್ಥಳೀಯ ಮರಾಠಿ ಭಾಷಿಗರನ್ನು ಸಂದರ್ಶಿಸುತ್ತಿದ್ದ ಐಬಿಎನ್ ಲೋಕಮಾತ್ ಪತ್ರಿಕೆಯ ವರದಿಗಾರ ದಿನೇಶ್ ಕೇಲೂಸ್ಕರ್ ಸೇರಿದಂತೆ ಮೂವರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಅವರು ಎರಡೂ ಭಾಷಿಗರ ನಡುವೆ ಇರುವ ಭಾಷಾ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಬದಲು, ಬೆಳಗಾವಿ ಗಡಿ ವಿವಾದವನ್ನು ಕೆಣಕಿ ಮರಾಠಿಗರಲ್ಲಿ ಭಾಷಾ ದ್ವೇಷದ ಕಿಡಿಯನ್ನು ಈ ಸಂದರ್ಭದಲ್ಲಿ ಹೊತ್ತಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇವರ ಬಂಧನವನ್ನು ಪ್ರಶ್ನಿಸಿ ರಾಜದೀಪ್ ಸರ್ದೇಸಾಯಿಯವರು ಮೇಲಿನ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮುಂಬೈ ಮಹಾರಾಷ್ಟ್ರಕ್ಕೆ ಸೇರಿಲ್ಲ, ಬೆಳಗಾವಿ ಕನ್ನಡಿಗರದೂ ಅಲ್ಲ. ಇವೆರಡೂ ಭಾರತಕ್ಕೆ ಸೇರಿದ್ದು. ಎಲ್ಲವನ್ನೂ ಭಾರತದ ಭಾಗವಾಗಿ ನೋಡಬೇಕೆ ವಿನಃ ನಮ್ಮದು ತಮ್ಮದು ಎಂದು ಹೊಡೆದಾಡುತ್ತಿದ್ದರೆ ಏನು ಪ್ರಯೋಜನ ಎಂಬ ವಾದವನ್ನು ಮಂಡಿಸಿದ್ದಾರೆ. ರಾಷ್ಟ್ರಪತಿಗಳು ಇಲ್ಲಿ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪತ್ರಕರ್ತರು ವರದಿ ಮಾಡಬಾರದೆ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ರಾಜದೀಪ್ ಸರ್ದೇಸಾಯಿ ಅವರಿಗೆ ಒಂದು ಪ್ರಶ್ನೆ. ಭಾಷಾ ಸೌಹಾರ್ದತೆಯನ್ನು ಬಿತ್ತುವ ಬದಲು ಮರಾಠಿಗರನ್ನು ಐಬಿಎನ್ ಲೋಕಮಾತ್ ಪತ್ರಕರ್ತರು ಕೆಣಕುತ್ತಿರುವುದೇಕೆ?












Click it and Unblock the Notifications