ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿಗೆ ಬೆಂಗಳೂರಿನಿಂದ ಒಲಿಂಪಿಕ್ ಪ್ಯಾಕೇಜ್ ಟೂರ್

By Mahesh
|
Google Oneindia Kannada News

London Olympics 2012
ಬೆಂಗಳೂರು, ಜು.23: ಲಂಡನ್ ಒಲಿಂಪಿಕ್ಸ್ 2012ಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಟ್ರಾವೆಲ್ ಏಜೆಂಟರುಗಳು ಸಕತ್ ಬ್ಯುಸಿಯಾಗಿದ್ದಾರೆ. ಜೀವನದಲ್ಲಿ ಒಮ್ಮೆ ಒಲಿಂಪಿಕ್ಸ್ ಕ್ರೀಡೆ ನೋಡುವ ತವಕದಲ್ಲಿರುವ ಬೆಂಗಳೂರಿನ ಕ್ರೀಡಾಪ್ರೇಮಿಗಳು, ಹೇಗಾದರೂ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ.

ಈ ವರ್ಷ ಪ್ರವಾಸಿಗರು ಅತ್ಯಂತ ಹೆಚ್ಚಾಗಿ ಮುಗಿ ಬೀಳುತ್ತಿರುವ ಲಂಡನ್ನಿನಲ್ಲಿ ಈಗಾಗಲೇ ಎಲ್ಲಾ ಹೋಟೆಲ್ ಗಳು ಬುಕ್ ಆಗಿಬಿಟ್ಟಿದೆ. ದಿನೇ ದಿನೇ ವಾಸ್ತವ್ಯ ವೆಚ್ಚ ಏರುತ್ತಿದೆ. ಆದರೆ, 17 ದಿನಗಳ ಕ್ರೀಡಾ ಹಬ್ಬವನ್ನು ಕಣ್ಣಾರೆ ನೋಡುವ ಅವಕಾಶ ತಪ್ಪಿಸಿಕೊಳ್ಳಲು ಕ್ರೀಡಾ ಪ್ರೇಮಿಗಳು ತಯಾರಿಲ್ಲ.

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನಗರದ ಟ್ರಾವೆಲ್ ಏಜೆಂಟರುಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಲವು ಪ್ಯಾಕೇಜ್ ಟೂರ್ ಗೆ ಮೊರೆ ಹೋಗಿದ್ದಾರೆ. ಹೆಚ್ಚಿನ ಮಂದಿ 10 ದಿನಗಳ ಪ್ಯಾಕೇಜ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಒಲಿಂಪಿಕ್ಸ್ ನಲ್ಲಿ ನೆಚ್ಚಿನ ಕ್ರೀಡಾಳುಗಳ ಆಟವನ್ನು ನೋಡುವುದರ ಜೊತೆಗೆ ಚುಟುಕಾಗಿ ಲಂಡನ್ ಪ್ರವಾಸ ಮಾಡುವ ಇರಾದೆ ಕ್ರೀಡಾಪ್ರೇಮಿಗಳಲ್ಲಿದೆ.

ಟ್ರಾವೆಲ್ ಏಜೆನ್ಸಿ ಖುಷ್: ಲಂಡನ್ ಒಲಿಂಪಿಕ್ಸ್ 2012 ದೆಸೆಯಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ಟ್ರಾವೆಲ್ ಏಜೆಂಟರುಗಳು ಕೂಡಾ ಒಂದಷ್ಟು ಹೆಚ್ಚಿಗೆ ಸಂಪಾದಿಸುತ್ತಿದ್ದಾರೆ.

'ಸಾಮಾನ್ಯವಾಗಿ ಈ ಋತುವಿನಲ್ಲಿ ಯಾರೂ ಲಂಡನ್ ಪ್ರವಾಸ ಕೈಗೊಳ್ಳುವುದಿಲ್ಲ. ಒಲಿಂಪಿಕ್ಸ್ ನೆಪದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಗೆಳೆಯರು, ಕುಟುಂಬದ ಜೊತೆಗೆ ಲಂಡನ್ ಗೆ ತೆರಳುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ನಮ್ಮ ಟ್ರಾವೆಲ್ ಉದ್ಯಮಕ್ಕೆ ಇದು ಹೊಸ ಆಶಾದಾಯಕ ಬೆಳವಣಿಗೆಯಾಗಿದೆ' ಎಂದು ಜನಪ್ರಿಯ ಆನ್ ಲೈನ್ ಟ್ರಾವೆಲ್ ಏಜೆನ್ಸಿ ಏಜೆಂಟ್ ಕೃಷ್ಣಮೂರ್ತಿ ರಾವ್ ಹೇಳಿದ್ದಾರೆ.

10 ದಿನಗಳ ಪ್ಯಾಕೇಜ್ ಸಿಗದವರು 2 ದಿನಗಳ ಟೂ ವೇ ಪ್ಯಾಕೇಜ್ ಗೆ ಮೊರೆ ಹೋಗಿದ್ದಾರೆ. 40,000 ದಿಂದ 84,000 ರು ತನಕ ವೆಚ್ಚದ ಪ್ಯಾಕೇಜ್ ಸದ್ಯಕ್ಕೆ ಚಾಲ್ತಿಯಲ್ಲಿದೆ. ಬೆಂಗಳೂರಲ್ಲಿ ಟಿಕೆಟ್ ದರ ಹೆಚ್ಚಾಗಿರುವುದರಿಂದ ಕೆಲವರು ಮುಂಬೈ ಅಥವಾ ದೆಹಲಿಯಿಂದ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಕೆಲವರಿಗೆ ಏರ್ ಟಿಕೆಟ್ ಸಿಕ್ಕರೂ ಸರಿಯಾದ ವಸತಿ ವ್ಯವಸ್ಥೆ ಸಿಗದೆ ಪರದಾಡುತ್ತಿದ್ದಾರೆ.

ಇನ್ನು ಕೆಲವರ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಏರ್ ಟಿಕೆಟ್, ವಸತಿ ವ್ಯವಸ್ಥೆ ಮಾಡಿಕೊಂಡ ಮೇಲೂ ಒಲಿಂಪಿಕ್ಸ್ ಗ್ರಾಮಕ್ಕೆ ಕಾಲಿಡಲು ಬೇಕಾದ ಟಿಕೆಟ್ ಸಿಗದೆ ಒದ್ದಾಡುತ್ತಿದ್ದಾರೆ. ಪ್ರತಿದಿನ ಒಲಿಂಪಿಕ್ಸ್ ಅಧಿಕೃತ ವೆಬ್ ತಾಣದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ರೀತಿ ಸಮಸ್ಯೆಗೆ ಸಿಲುಕಿರುವ ನಗರದ ಉದ್ಯಮಿ ಶ್ರೀಧರ್ ಗಿರಿ, ನಾವು ಲಂಡನ್ ನಲ್ಲಿ ಓಡಾಡಲು ಕ್ಯಾಬ್ ವ್ಯವಸ್ಥೆ ಕೂಡಾ ಮಾಡಿಕೊಂಡಿದ್ದೇವೆ ಆದರೆ, ಒಲಿಂಪಿಕ್ಸ್ ಆಟಗಳನ್ನು ನೋಡಲು ಎಂಟ್ರಿ ಟಿಕೆಟ್ ಸಿಗದೆ ಪರದಾಡುತ್ತಿದ್ದೇವೆ ಎಂದಿದ್ದಾರೆ.

ಜು.26ರಂದು ಬೆಂಗಳೂರಿನಿಂದ ಅತಿ ಹೆಚ್ಚು ಸುಮಾರು 20 ಮಂದಿ ಒಲಿಂಪಿಕ್ಸ್ ನೋಡಲು ಹೋಗುತ್ತಿದ್ದಾರೆ. ಎಲ್ಲಾ ಏರ್ ಲೈನ್ಸ್ ಟಿಕೆಟ್ ಗಳು ಬಿಕರಿಯಾಗಿರುವುದರಿಂದ ಉದ್ಘಾಟನಾ ಸಮಾರಂಭ ಮಿಸ್ ಆದರೂ ಓಕೆ ಯಾವುದಾದರೂ ದಿನಕ್ಕೆ ಟಿಕೆಟ್ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿ ಕ್ರೀಡಾಪ್ರೇಮಿಗಳು ಕಾದಿದ್ದಾರೆ.

ಲಂಡನ್ ಒಲಿಂಪಿಕ್ಸ್ 2012ರಲ್ಲಿ ಭಾರತದ ಸುಮಾರು 81 ಅಥ್ಲೀಟ್ ಗಳು ವಿವಿಧ ಸ್ಪರ್ಧೆಗಾಗಿ ಪ್ರದರ್ಶಿಸಲಿದ್ದಾರೆ. ಲಂಡನ್ ಒಲಿಂಪಿಕ್ಸ್ 2012ರಲ್ಲಿ ಭಾರತದ ಸುಮಾರು 81 ಅಥ್ಲೀಟ್ ಗಳು ವಿವಿಧ ಸ್ಪರ್ಧೆಗಾಗಿ ಪ್ರದರ್ಶಿಸಲಿದ್ದಾರೆ. ಜು.27 ರಿಂದ ಒಲಿಂಪಿಕ್ಸ್ ಆರಂಭವಾಗಲಿದ್ದು ಆಗಸ್ಟ್ 12 ಕ್ಕೆ ಮುಕ್ತಾಯವಾಗಲಿದೆ.

English summary
As Olympics 2012 draws closer, Travel Agents in Bangalore city are providing two-way travel options and packages begin from 40,000 and go up to 84,000. Many sports fans from Bangaloreans are booking tickets from Mumbai or Delhi. But, Cost of staying in UK is increasing day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X