• search

ಸೊಹೈಲ್ ಖಾನ್ ಕಾರಿಗೆ ಸಿಲುಕಿ ಮಹಿಳೆ ಸಾವು

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Actor Sohail Khan's car mows 70-yr-old woman to death
  ಮುಂಬೈ, ಜು.2: ಸೋದರ ಸಲ್ಮಾನ್ ಖಾನ್ ಚಾಳಿಯನ್ನು ಮುಂದುವರೆಸಿರುವ ಸೋಹೆಲ್ ಖಾನ್ ಅವರು ಅಡ್ಡಾದಿಡ್ಡಿ ಕಾರು ಚಲಾಯಿಸಿ 70 ವರ್ಷದ ಮಹಿಳೆಯನ್ನು ಕೊಂದಿರುವ ಘಟನೆ ನಡೆದಿದೆ.

  ಬಾಲಿವುಡ್ ನಟ, ನಿರ್ಮಾಪಕ ಸೋಹೆಲ್ ಖಾನ್ ಅವರು ಕಾರು ಭಾನುವಾರ ತಡರಾತ್ರಿ ಚಂದನ್ ಬಾಲಾ ಎಂಬ ಮಹಿಳೆ ಮೇಲೆ ಕಾರು ಚಲಾಯಿಸಿದ್ದಾರೆ. ಬಾಂದ್ರಾದ ಸೈಂಟ್ ಆಂಡ್ರೂಸ್ ಚರ್ಚ್ ಬಳಿ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆ ದುರಂತ ಸಾವನ್ನಪ್ಪಿದ್ದಾರೆ.

  ಅಪಘಾತ ನಡೆದಾಗ ಕಾರಿನಲ್ಲಿ ಸೋಹೆಲ್ ಖಾನ್ ಇದ್ದಿದ್ದನ್ನು ಪ್ರತ್ಯಕ್ಷ ನೋಡಿದವರಿದ್ದಾರೆ. ಸೊಹೈಲ್ ಅವರ ಚಾಲಕ ಧನಂಜಯ್ ಪಿಂಪಲೆ ಲ್ಯಾಂಡ್ ಕ್ರೂಸರ್ ವಾಹನವನ್ನು ಚಲಾಯಿಸುತ್ತಿದ್ದರು.
  ಮಹಿಳೆಗೆ ಕಾರು ಬಡಿದ ಮೇಲೆ ಹಿಂತಿರುಗಿ ನೋಡದಂತೆ ಹೋಗಿಬಿಟ್ಟರು ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ಆದರೆ, ಇನ್ನೊಂದು ವರದಿ ಪ್ರಕಾರ ಕಾನ್ಸ್ ಟೇಬಲ್ ನೆರವಿನಿಂದ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸುವ ತನಕ ಡ್ರೈವರ್ ಧನಂಜಯ್ ಜೊತೆಯಲ್ಲಿದ್ದ ಎನ್ನಲಾಗಿದೆ.

  ಆದರೆ, ಆಸ್ಪತ್ರೆಯಲ್ಲಿ ಯಾವೊಬ್ಬ ಡಾಕ್ಟರ್ ಗತಿ ಇರಲಿಲ್ಲ. ಅರ್ಧ ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮಹಿಳೆಯನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ದಬಾಯಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

  ಡ್ರೈವರ್ ಧನಂಜಯ್ ಮೇಲೆ ಅಡ್ಡಾದಿಡ್ಡಿ ವಾಹನ ಚಲಾಯಿಸಿದ್ದಕ್ಕೆ ಪ್ರಕರಣ ದಾಖಲಾಗಿದೆ. ಧನಂಜಯ್ ಕಾರು ಚಲಾಯಿಸುತ್ತಿದ್ದ ವೇಳೆಯಲ್ಲಿ ಯಾವುದೇ ಮಾದಕ ದ್ರವ್ಯ ಅಥವಾ ಮದ್ಯಪಾನ ಮಾಡಿರಲಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿದೆ. ಘಟನೆ ನಡೆದ ಸಮಯದಲ್ಲಿ ಸೊಹೈಲ್ ಅವರ ಸೋದರ ಅರ್ಬಾಜ್ ಖಾನ್ ಅವರ ಗೆಲ್ಯಾಕ್ಸಿ ಅಪಾರ್ಟ್ ಮೆಂಟ್ ಕಡೆಗೆ ವಾಹನ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.

  ಡ್ರೈವರ್ ಧನಂಜಯ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಕೋರ್ಟಿನಲ್ಲಿ ತಪ್ಪೊಪ್ಪಿಗೆ ನೀಡಿದ ಧನಂಜಯ್ ಗೆ ಜಾಮೀನು ಸಿಕ್ಕಿದೆ. 10,000 ರು ದಂಡ ಕಟ್ಟಿಸಿಕೊಳ್ಳಲಾಗಿದೆ. ಆಚಾನಕ್ ಆಗಿ ಮಹಿಳೆ ಕಾರಿನ ಮುಂದೆ ಬಂದರು ನನಗೆ ಆ ಕ್ಷಣ ಏನು ಮಾಡಲಾಗಲಿಲ್ಲ ಎಂದು ಡ್ರೈವರ್ ಧನಂಜಯ್ ಹೇಳಿದ್ದಾನೆ.

  ಅಸಲಿಗೆ ಲ್ಯಾಂಡ್ ಕ್ರೂಸರ್ ವಾಹನ ಸೋಹೆಲ್ ಖಾನ್ ಅವರ ಸೋದರ ಅರ್ಬಾಜ್ ಖಾನ್ ಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಬಗ್ಗೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

  ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೇಲ್ ಖಾನ್ ಅವರು ಮಹಿಳೆ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ದುರದೃಷ್ಟಕರ ಸಂಗತಿ. ಮಹಿಳೆ ಕಾರಿನ ಮುಂಭಾಗದಲ್ಲಿ ಬಂದು ಬಿದ್ದಿದ್ದಾರೆ. ಚಾಲಕನ ಬ್ರೇಕ್ ಹಾಕಿ ಅಪಘಾತ ತಪ್ಪಿಸಲು ಯತ್ನಿಸಿದರೂ ನಿಯಂತ್ರಣ ತಪ್ಪಿದೆ.ನಂತರ ವಿಷಯವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಲ್ಮಾನ್ ಕುಟುಂಬ ಹೇಳಿಕೆ ನೀಡಿದೆ.

  ಸಲ್ಮಾನ್ ಖಾನ್ ಅವರ ಸೋದರನ ಕಾರು ಅಪಘಾತವಾಗಿದೆ ಎಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ ಮೇಲೆ ಘಟನಾ ಸ್ಥಳಕ್ಕೆ ಸುಮಾರು 500ಕ್ಕೂ ಅಧಿಕ ಜನ ಆಗಮಿಸಿದ್ದರು. ವೈದ್ಯರು ಸರಿಯಾಗಿ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ಮಹಿಳೆ ಬದುಕುಳಿಯುವ ಸಾಧ್ಯತೆಯಿತ್ತು ಎಂದು ದಾರಿಹೋಕ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  In yet another case of negligent driving, a hapless 70-year-old woman was mowed down by Bollywood actor and producer Sohail Khan's car. The incident happened late Sunday around 11 pm. The woman, Chandan Bala, was crushed to death due to the impact of the crash that occurred near the St Andrews church Bandra.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more