• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚನ್ನಮ್ಮ ದೇವೇಗೌಡರಿಂದ ಹೈಟೆಕ್ ಆಸ್ಪತ್ರೆ ಉದ್ಘಾಟನೆ

By Prasad
|
Tamara Super speciality hospital in Bangalore
ಬೆಂಗಳೂರು, ಜೂ. 9 : ನಗರದ ಹೃದಯ ಭಾಗದಂತಿರುವ ರಾಜಾಜಿನಗರದಲ್ಲಿ, ವಿಶೇಷವಾಗಿ ಮಹಿಳೆಯರಿಗಾಗಿ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದು ಸೇವೆಗೆ ಸಜ್ಜಾಗಿ ನಿಂತಿದೆ. ಸುಮಾರು 25 ಹಾಸಿಗೆಯುಳ್ಳ ಈ ತಾಮರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ, ಸ್ತ್ರಿ ಮತ್ತು ಪುರುಷರಿಬ್ಬರಿಗೂ ಚಿಕಿತ್ಸಾ ಸೌಲಭ್ಯವಿದ್ದರೂ, ಮಹಿಳೆಯರಿಗೆ ಅದರಲ್ಲೂ ಗರ್ಭಿಣಿ ಮಹಿಳೆಯರ ಆರೋಗ್ಯದ ಕಡೆ ಗಮನವಿಟ್ಟುಕೊಂಡು ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತಿದೆ.

ಇಂತಹ ಒಂದು ಸುಸಜ್ಜಿತ ತಾಮರ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯನ್ನು ದಿನಾಂಕ ಜೂನ್ 10, 2012 ಭಾನುವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ಮಾಡಲಾಗುತ್ತಿದೆ. ಈ ಒಂದು ಕಾರ್ಯಕ್ರಮದ ವಿಶೇಷತೆಯೇನೆಂದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದರೆ ಅವರ ಶ್ರೀಮತಿ ಚನ್ನಮ್ಮ ದೇವೇಗೌಡ ಅವರು ಆಸ್ಪತ್ರೆಯ ಉದ್ಘಾಟನೆ ಮಾಡಲಿದ್ದಾರೆ. ದೇವೇಗೌಡ ಅವರು ಇಳಿ ವಯಸ್ಸಿನಿಂದಾಗಿ ಸಾರ್ವಜನಿಕವಾಗಿ ಅಷ್ಟೊಂದು ಕಾಣಿಸಿಕೊಳ್ಳುತಿಲ್ಲ ಮತ್ತು ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ.

ಇನ್ನು ತಾಮರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸ್ತ್ರೀ ಬಂಜೆತನ, ಪುರುಷ ಬಂಜೆತನ ಸಮಾಲೋಚನೆಯಿಂದ ಹಿಡಿದು, ರೋಗ ಪತ್ತೆ ಹಚ್ಚುವಿಕೆ, ಗರ್ಭಧಾರಣೆ, ಗರ್ಭಿಣಿ ಆರೈಕೆ, ಹೆರಿಗೆ, ನಂತರ ಬಾಣಂತಿ ಆರೈಕೆ, ಸೇರಿಂದತೆ ಎಲ್ಲಾ ಹಂತಗಳಲ್ಲೂ ಇಲ್ಲಿ ಚಿಕಿತ್ಸೆ, ಸಲಹೆ ಮತ್ತು ಸಮಾಲೋಚನೆಯ ಸೌಲಭ್ಯವಿದೆ. ಹೃದಯ ರೋಗಗಳಿಗೆ ಚಿಕಿತ್ಸೆ, ಮನೋ ರೋಗ, ಮಕ್ಕಳಿಗೆ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತದೆ.

ಅಲ್ಲದೆ ಇತ್ತೀಚಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಿವೆಂಟಿವ್ ಮೆಡಿಸಿನ್ ಅಥವಾ ಮುಂಜಾಗೃತಾ ಚಿಕಿತ್ಸೆಯಲ್ಲಿ ಪರಿಣಿತಿಯನ್ನು ಹೊಂದಿರುವ ವೈದ್ಯರು ಇಲ್ಲಿರುವುದರಿಂದ, ಗರ್ಭಿಣಿ ಸ್ತ್ರೀಯರಿಗೆ ಮಗು ಹೊಟ್ಟೆಯಲ್ಲಿರುವಾಗಲೆ ಅದಕ್ಕೇನಾದರೂ ಸೋಂಕಿದೆಯಾ ಅಥವಾ ಜನನದ ನಂತರ ಯಾವುದಾದರೂ ಆನುವಂಶಿಕ ಕಾಯಿಲೆಗಳು ಬರುವ ಸಾಧ್ಯತೆಗಳೇನಾದರೂ ಇದೆಯಾ ಅನ್ನುವುದನ್ನು ಗುರುತಿಸಿ ಅದಕ್ಕೆ ಮುಂಜಾಗರೂಕವಾಗಿ ಚಿಕಿತ್ಸೆ ನೀಡುವ ಸೌಲಭ್ಯ ಈ ಆಸ್ಪತ್ರೆಯಲ್ಲಿ ದೊರೆಯಲಿದೆ.

ಇನ್ನು ಈ ಆಸ್ಪತ್ರೆಯಲ್ಲಿ ಬೆಂಗಳೂರಿನ ಪ್ರಖ್ಯಾತ ಪ್ರಸೂತಿ ತಜ್ಞರಲ್ಲಿ ಒಬ್ಬರಾಗಿರುವ ಡಾ. ಆರ್ ಗಾಯತ್ರಿ ದೇವಿಯವರು ಸೇರಿದಂತೆ 20 ಜನ ನುರಿತ ವೈದ್ಯರು ಸದಾ ಸೇವೆಗೆ ಲಭ್ಯರಿರುತ್ತಾರೆ. ಆರ್ ಗಾಯತ್ರಿದೇವಿಯವರು ಸುಮಾರು 35 ವರ್ಷಗಳಿಂದ ಸ್ತ್ರೀರೋಗ ತಜ್ಞರಾಗಿ ಅನೇಕ ಶಸ್ತ್ರಚಿಕಿತ್ಸೆ, ಲೆಕ್ಕವಿಲ್ಲದಷ್ಟು ಹೆರಿಗೆ ಇನ್ನಿತರ ಚಿಕಿತ್ಸೆಗಳನ್ನು ನೀಡಿ ಪ್ರಖ್ಯಾತಿ ಹೊಂದಿದ್ದಾರೆ. ಈ ಮೂಲಕ ಆರೋಗ್ಯ ಸಿಟಿ ಎಂದೇ ಕರೆಸಿಕೊಳ್ಳುತ್ತಿರುವ ಬೆಂಗಳೂರಿನ ಆಸ್ಪತ್ರೆಗಳ ಸಾಲಿಗೆ ಈ ತಾಮರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರ್ಪಡೆಯಾಗಲಿದೆ.

ಆಸ್ಪತ್ರೆ ವಿಳಾಸ : 'ತಾಮರ' ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಮಗ್ರ ಮಹಿಳಾ ಸಂಜೀವಿನಿ), ನಂ.34/3, 10ನೇ ಅಡ್ಡರಸ್ತೆ, 1ನೇ ಎನ್ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಆಸ್ಪತ್ರೆ ಸುದ್ದಿಗಳುView All

English summary
Smt Channamma Deve Gowda will be inaugurating Tamara Super Speciality hospital in Rajajinagar, Bangalore on June 10, 2012 Sunday. The hospital will be providing all kinds of treatments for all including men, especially for women.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more