ತಮಿಳು ಹುಡ್ಗಿ ಪ್ರೇಮಕ್ಕೆ ಬಿದ್ದು ಪ್ರಾಣ ಕಳಕೊಂಡ

ಬುಧವಾರ(ಮೇ.30) ರಾತ್ರಿಯ ವೇಳೆ ಮನೆಗೆ ಹೋಗುತ್ತಿದ್ದ ವಿಜಯ್ ಕತ್ತು ಕೊಯ್ದು,ಹೊಟ್ಟೆಗೆ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಎಳೇನಹಳ್ಳಿಯಲ್ಲಿ ಈ ಕೊಲೆ ನಡೆದಿದೆ.
ಗದಗ ಮೂಲದ ವಿಜಯ್‌ಕುಮಾರ್ (28) ಕೊಲೆಯಾದ ದುರ್ದೈವಿ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಈತ, ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿ ಬಳಿಯ ಎಳೇನಹಳ್ಳಿಯಲ್ಲಿ ವಾಸಿಸುತ್ತಿದ್ದ. ವಿಜಯ್‌ಕುಮಾರ್ ತನ್ನ ಸಹಚರರೊಂದಿಗೆ ಬಾಡಿಗೆ ರೂಮಿನಲ್ಲಿಯೇ ವಾಸವಿದ್ದ ಮನೆಗೆ ಕೂಗಳತೆಯ ದೂರದಲ್ಲಿಯೇ ಇರುವ ಬಯಲಿನಲ್ಲಿ ನಡೆದು ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಈತನ ಮನೆಯವರು ಹುಡುಗಿಯನ್ನು ನೋಡಿ ನಿಶ್ಚಿತಾರ್ಥ ಮಾಡಲಾಗಿದ್ದು, ಇದಕ್ಕೆ ವಿಜಯ್‌ನ ಸಮ್ಮತಿಯಿರಲಿಲ್ಲ ಎನ್ನಲಾಗಿದೆ. ಮೊಬೈಲ್‌ನಲ್ಲಿ ಪರಿಚಿತ ತಮಿಳು ಹುಡುಗಿಯೊಂದಿಗೆ ಹರಟುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈತನೊಂದಿಗೆ ವಾಸಿಸುತ್ತಿದ್ದ ಸಹಚರರಿಗೂ ಹುಡುಗಿಯ ಬಗ್ಗೆ ಸುಳಿವು ನೀಡದಿದ್ದುದೇ ಕೊಲೆಯ ಗೌಪ್ಯತೆಗೆ ಕಾರಣ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಬೇಕರಿಗೆಂದು ಹೋದ ವೇಳೆಯಲ್ಲಿ ದುಷ್ಕರ್ಮಿಗಳು ವಿಜಯ್‌ನ ಕತ್ತು ಕೊಯ್ದು ಎಡ ಹೊಟ್ಟೆಗೆ ಇರಿದು ಕೊಲೆಗೈದಿದ್ದಾರೆ.
ಬೆಳಗ್ಗೆ ದಾರಿಯಲ್ಲಿ ನಡೆದು ಬರುತ್ತಿದ್ದ ಸಾರ್ವಜನಿಕರಿಗೆ ಶವ ಗೋಚರಿಸಿದ್ದು, ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಗೆ ದೂರಾಯಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications