• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಂತೇಶ್ ಕೊಲೆ, ಮತ್ತೊಬ್ಬ ಕಾಲ್ ಗರ್ಲ್ ಬಲೆಗೆ

By Mahesh
|
SP Mahantesh murder
ಬೆಂಗಳೂರು, ಮೇ.26: ಕೆಎಎಸ್ ಅಧಿಕಾರಿ ಎಸ್ ಪಿ ಮಹಾಂತೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಕಾಲ್ ಗರ್ಲ್ ಹಾಗೂ ಚೆನ್ನೈ ಮೂಲದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತನಿಖಾಧಿಕಾರಿ ಡಿಸಿಪಿ ರವಿಕಾಂತೇ ಗೌಡರು ಅವರು ಕುಶಾಲನಗರದ ಯುವತಿಯನ್ನು ವಿಚಾರಣೆ ನಡೆಸಿದ ಮೇಲೆ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಾಗಿದೆ.

ಮಹಾಂತೇಶ್ ಅವರ ಸಾವಿಗೆ ಪ್ರಾಮಾಣಿಕತೆಗಿಂತ ಪರಸ್ತ್ರೀ ಸಹವಾಸವೇ ಕಾರಣ ಎಂದು ಸದ್ಯಕ್ಕೆ ಅನುಮಾನ ಹುಟ್ಟಿಕೊಂಡಿದೆ. ಮಹಾಂತೇಶ್ ಅವರ ಮೊಬೈಲ್ ಹಾಗೂ ಈಗ ಸೆರೆ ಸಿಕ್ಕಿರುವ ಕಾಲ್ ಗರ್ಲ್ 2 ಮೊಬೈಲ್ ಫೋನ್ ಪರಿಶೀಲಿಸಿದಾಗ ಇಬ್ಬರ ನಡುವೆ ಆಪ್ತ ಸಂಬಂಧ ಇರುವುದು ಸ್ಪಷ್ಟವಾಗಿದೆ. 4 ತಿಂಗಳಿನಿಂದ 154 ನಿಮಿಷಗಳ ಮಾತುಕತೆ ನಡೆದಿರುವುದು ತಿಳಿದು ಬಂದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮಹಾಂತೇಶ್ ಮೊಬೈಲ್ ನಲ್ಲಿ ನೀಲಿಚಿತ್ರಗಳು, ಅಶ್ಲೀಲ ಚಿತ್ರಗಳು ಹೇರಳವಾಗಿ ಸಿಕ್ಕಿದೆ. ಜೊತೆಗೆ ಹಲವು ಕಾಲ್ ಗರ್ಲ್(ಬೆಲೆವೆಣ್ಣು)ಗಳ ನಂಬರ್ ಗಳು ಕಾಣಿಸಿದೆ. ಮಹಾಂತೇಶ್ ಅವರ ಸಂಪರ್ಕ ಚೆನ್ನೈ, ಕೇರಳ, ಕುಶಾಲನಗರ ಅಲ್ಲದೆ ಇನ್ನೂ ಅನೇಕ ಕಡೆ ಇರುವ ಶಂಕೆ ಮೂಡಿದೆ.

ಯಾರು ಆ ಎಸಿಪಿ?: ಮಹಾಂತೇಶ್ ಅವರ ಕೊಲೆ ಪ್ರಕರಣದ ತನಿಖಾ ತಂಡದಲ್ಲೇ ಇರುವ ಎಸಿಪಿಯೊಬ್ಬರ ಮೊಬೈಲ್ ಫೋನ್ ನಂಬರ್ ಕಾಲ್ ಗರ್ಲ್ ಮೊಬೈಲಿನಲ್ಲಿರುವುದು ಪತ್ತೆಯಾಗಿದೆ.

ಮಹಾಂತೇಶ್ ಸತ್ತಿದ್ದು ಅಪಘಾತದಿಂದ, ಕೊಲೆ ನಡೆದಿಲ್ಲ ಎಂದು ಇದೇ ಅಧಿಕಾರಿ ಮತ್ತೆ ಮತ್ತೆ ಹೇಳುತ್ತಿದ್ದರು ಎಂದು ಮಹಾಂತೇಶ್ ಕುಟುಂಬ ವರ್ಗ ದೂರಿದೆ. ಆದರೆ, ಎಸಿಪಿ ಯಾರು ಎಂದು ಈವರೆಗೂ ಯಾರಿಗೂ ತಿಳಿಯುತ್ತಿಲ್ಲ.

ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮಾತ್ರ ಎಸಿಪಿ ಹೆಸರು ಹೇಳದೆ ನುಣಚಿಕೊಂಡಿದ್ದಾರೆ. 100ಕ್ಕೂ ಅಧಿಕ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಸತ್ಯ ಸದ್ಯದಲ್ಲೇ ಹೊರಬೀಳಲಿದೆ ಎಂದು ಹೇಳಿದ್ದಾರೆ. ಕೋರ್ಟ್ ನೀಡಿರುವ ನೋಟಿಸ್ ಬಗ್ಗೆ ಕೂಡಾ ಮಿರ್ಜಿ ಅವರು ಪ್ರತಿಕ್ರಿಯಿಸಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕೆಎಎಸ್ ಸುದ್ದಿಗಳುView All

English summary
KAS officer Mahantesh Murder case: Bangalore City police commissioner BG Jyothi Prakash Mirji said special team held two call girls and a suspect from Chennai. Police yet reveal the ACP who figures in the call records of a woman suspect.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more