ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯರಿಗಷ್ಟೇ ಸೀಮಿತವಾ ಫ್ಯಾಷನ್ ಡಿಸೈನಿಂಗ್?

By * ಆರ್. ವಿಶ್ವನಾಥನ್, ತುಮಕೂರು
|
Google Oneindia Kannada News

Fashion designing course for boys in Tumkur
ತುಮಕೂರು, ಮೇ 26 : ತುಮಕೂರು ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಅಪ್ಯಾರೆಲ್ (ವಸ್ತ್ರವಿನ್ಯಾಸ) ಮತ್ತು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಿದ ಹೆಗ್ಗಳಿಕೆ ಹೊಂದಿರುವ ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ಇದೀಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ. ಈವರೆಗೆ ಬಾಲಕಿಯರಿಗೆ ಮಾತ್ರ ಅವಕಾಶವಿದ್ದ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಈ ವರ್ಷದಿಂದ ಬಾಲಕರಿಗೂ ಪ್ರವೇಶಾವಕಾಶ ನೀಡಲು ಮುಂದಾಗಿದೆ.

2003-04ನೇ ಸಾಲಿನಲ್ಲಿ ಆರ್ಯಭಾರತಿ ಪಾಲಿಟೆಕ್ನಿಕ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಿತು. ಅಂದಿನಿಂದ ಈವರೆಗೆ ನೂರಾರು ವಿದ್ಯಾರ್ಥಿನಿಯರು ಈ ಕೋರ್ಸ್ ಮುಗಿಸಿದ್ದು, ಅನೇಕರು ಸ್ವಾವಲಂಬಿಗಳಾಗಿದ್ದಾರೆ. ಇತರೆ ಹಲವರು ವಿವಿಧ ಹಂತಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ. ಹೀಗೆ ಅನೇಕರಿಗೆ ಈ ಕೋರ್ಸ್ ಜೀವನಾಧಾರವನ್ನು ಒದಗಿಸಿದ್ದು, ಈ ಕೋರ್ಸ್ ಪ್ರಸ್ತುತ ಅಪಾರ ಬೇಡಿಕೆಯನ್ನು ಹೊಂದಿದೆ ಎಂದು ಆರ್ಯಭಾರತಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಕೆ.ಆರ್. ಅಶೋಕ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಲಿಟೆಕ್ನಿಕ್ ಹಂತದಲ್ಲಿ ಇಂತಹ ಕೋರ್ಸ್ ಆರಂಭಿಸಿದ ಕೀರ್ತಿ ತುಮಕೂರಿನ ಸರಸ್ವತಿಪುರಂನಲ್ಲಿ ಸುಸಜ್ಜಿತ ಕಟ್ಟಡ ಹೊಂದಿರುವ ಆರ್ಯಭಾರತಿ ಪಾಲಿಟೆಕ್ನಿಕ್‌ಗೆ ಸಲ್ಲುತ್ತದೆ. ಅಂದಿನಿಂದ ಈವರೆಗೆ ಈ ಕೋರ್ಸ್ ವಿದ್ಯಾರ್ಥಿನಿಯರಗಷ್ಟೇ ಸೀಮಿತವಾಗಿತ್ತು. ಬಹುಬೇಡಿಕೆಯುಳ್ಳ ಹಾಗೂ ಉದ್ಯೋಗಾಧಾರಿತವಾದ ಈ ಕೋರ್ಸ್‌ಗೆ ಪ್ರಸ್ತುತ ಬಾಲಕರಿಗೂ ಪ್ರವೇಶಾವಕಾಶ ನೀಡುವ ಮಹತ್ವದ ತೀರ್ಮಾನವನ್ನು ಪಾಲಿಟೆಕ್ನಿಕ್ ತೆಗೆದುಕೊಂಡಿದ್ದು, ಫ್ಯಾಷನಿಂಗ್ ಡಿಸೈನಿಂಗ್‌ನಲ್ಲಿ ಬಾಲಕರು ಮಿಂಚಲು ಅವಕಾಶ ಮಾಡಿಕೊಡಲಾಗಿದೆ.

ಪ್ರವೇಶ ಹೇಗೆ? : ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದರೆ ಸಾಕು. ಇಲ್ಲಿ ಕಬ್ಬಿಣದ ಕಡಲೆಗಳಾದ ಗಣಿತ ಅಥವಾ ವಿಜ್ಞಾನ ಮೊದಲಾದ ವಿಷಯಗಳು ಇರದೆ ಕೇವಲ ಫ್ಯಾಷನ್ ಡಿಸೈನಿಂಗ್ ಬಗ್ಗೆ ಮಾತ್ರ ಪಠ್ಯಕ್ರಮವಿರುವುದು ಈ ಕೋರ್ಸ್‌ನ ವಿಶೇಷ. ಈ ವಿಭಾಗದಲ್ಲಿ 3 ವರ್ಷಗಳ ಅವಧಿಯಲ್ಲಿ 6 ಸೆಮಿಸ್ಟರ್ ಗಳಿರುತ್ತವೆ. ಈ ಕೋರ್ಸ್ ಮುಗಿಸಿದ ನಂತರ ಉದ್ಯೋಗಸ್ಥರಾಗಲೂಬಹುದು ಅಥವಾ ಮುಂದಿನ ವ್ಯಾಸಂಗದ ಇಚ್ಛೆಯಿದ್ದರೆ ಆ ನಿಟ್ಟಿನಲ್ಲೂ ಮುಂದುವರೆಯಬಹುದು.

ಹೆಚ್ಚಿನ ಮಾಹಿತಿಗೆ ಟಿ.ಪಿ. ಮಂಜುಳಾ, ಫ್ಯಾಷನ್ ಡಿಸೈನಿಂಗ್ ವಿಭಾಗ ಮುಖ್ಯಸ್ಥರು, ಆರ್ಯಭಾರತಿ ಪಾಲಿಟೆಕ್ನಿಕ್, ಸರಸ್ವತಿಪುರಂ, ತುಮಕೂರು ಮೊಬೈಲ್: 99807 77993 ಅವರನ್ನು ಸಂಪರ್ಕಿಸಬಹುದು. ಆರ್ಯಭಾರತಿ ಪಾಲಿಟೆಕ್ನಿಕ್‌ನ ವಸ್ತ್ರವಿನ್ಯಾಸ ವಿಭಾಗದ ವತಿಯಿಂದ ಪ್ರತಿ ವರ್ಷ ಏರ್ಪಡಿಸುವ 'ಫ್ಯಾಷನ್ ಗೀಕ್ ಕಾರ್ಯಕ್ರಮವು ಅಪಾರ ಜನಮನ್ನಣೆ ಗಳಿಸಿದ್ದು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ವೈವಿಧ್ಯಮಯ ಉಡುಪುಗಳನ್ನು ಧರಿಸಿ ನೀಡುವ ಫ್ಯಾಷನ್ ಶೋ ಜನಪ್ರಿಯವಾಗಿದೆ.

English summary
Aryabharathi Polytechnic has opened doors for boys to do fashion designing in Tumkur. Only girls were allowed to do this 3 years course, which started in the year 2003. Many students who passed through this institution have found jobs in the field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X