ಜಗನ್ ಸಿಬಿಐ ಪಾಲಾಗುವ ಲಕ್ಷಣಗಳು ದಟ್ಟ

ಖುದ್ದು ವೈ.ಎಸ್. ಜಗನ್ ಮೋಹನ್ ರೆಡ್ಡಿಯೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಿಬಿಐ ನನ್ನನ್ನು ಬಂಧಿಸಲು 'ಪಿತೂರಿ' ನಡೆಸಿದೆ. ಯಾವುದೇ ಕ್ಷಣ ಸಿಬಿಐ ಅಧಿಕಾರಿಗಳು ನನ್ನನ್ನು ಬಂಧಿಸಬಹುದು. ಆದ್ದರಿಂದ ತಾವು ಮಧ್ಯಪ್ರವೇಶಿಸಬೇಕೆಂದು ಕೋರಿ ಜಗನ್ ಪ್ರಧಾನಿ ಮನಮೋಹನ್ ಸಿಂಗ್ ಗೆ ಜಗನ್ ನಿನ್ನೆ ಪತ್ರ ಬರೆದಿದ್ದಾರೆ.
ಆಂಧ್ರದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಮತ್ತು ಪ್ರತಿಪಕ್ಷವಾದ ತೆಲುಗು ದೇಶಂ ಪಕ್ಷ ನನ್ನ ಬಂಧನಕ್ಕೆ ಹುನ್ನಾರ ನಡೆಸಿದೆ. ನನ್ನ ಬಂಧನದ ಬಳಿಕ ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರ ತಲೆದೋರುವ ಸಾಧ್ಯತೆಯಿದೆ. ಮತ್ತು ಆ ಹಿಂಸಾಚಾರವನ್ನು ನನ್ನ ತಲೆಗೆ ಕಟ್ಟುವ ಉದ್ದೇಶ ಈ ಪಕ್ಷದ ನೇತಾರರಿಗೆ ಇದೆ.
ಅಷ್ಟೇ ಅಲ್ಲ. ಆ ಹಿಂಸಾಚಾರವನ್ನು ನೆಪವಾಗಿಸಿಕೊಂಡು ಜೂನ್ 12ರ ಉಪ ಚುನಾವಣೆಯನ್ನು (ಒಂದು ಲೋಕಸಭೆ ಸ್ಥಾನ ಮತ್ತು 18 ವಿಧಾನಸಭಾ ಸ್ಥಾನಗಳು) ಮುಂದೂಡುವ ಎಣಿಕೆ ಇದರಲ್ಲಡಗಿದೆ ಎಂದು ಪತ್ರದಲ್ಲಿ ಜಗನ್ ಹೇಳಿದ್ದಾರೆ. ಇದನ್ನೇ ವಿವರಿಸಿ ಜಗನ್, ಮುಖ್ಯ ಚುನಾವಣೆ ಆಯುಕ್ತ ಖುರೇಶಿಗೂ ಪತ್ರ ಬರೆದಿದ್ದಾರೆ.












Click it and Unblock the Notifications