ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್: ಇಂಕ್ರಿಮೆಂಟೂ ಇಲ್ಲ; ಭಡ್ತಿಗೂ ಕೊಕ್

By Srinath
|
Google Oneindia Kannada News

infosys-2012-q4-profit-down-freezes-salary-hike
ಬೆಂಗಳೂರು, ಏ. 18: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಕಳಪೆಯಾಗಿರುವುದು ಕಂಪನಿಯ ಉದ್ಯೋಗಿಗಳನ್ನು ನಿರಾಶೆಯ ಮಡುವಿಗೆ ತಳ್ಳಿದೆ. ಮುಖ್ಯವಾಗಿ, ಈ ಬಾರಿ ಯಾವುದೇ ನೌಕರರಿಗೂ ಸಂಬಳ ಹೆಚ್ಚಳ ಮಾಡುವುದಿಲ್ಲ ಎಂದು ಕಂಪನಿ ಘೋಷಿಸಿದೆ. ಕಳೆದ ವರ್ಷ ಕಂಪನಿ ತನ್ನ ಉದ್ಯೋಗಿಗಳಿಗೆ ಶೇ. 10-12ರಷ್ಟು hike ನೀಡಿತ್ತು.

ಎತ್ತಿಗೆ ಜ್ವರ ಎಮ್ಮೆಗೆ ಬರ: ಕಂಪನಿಯಲ್ಲಿ 1,49,000 ಉದ್ಯೋಗಿಗಳು ಇದ್ದಾರೆ. ಅವರ್ಯಾರಿಗೂ ಸಂಬಳ ಹೆಚ್ಚಿಗೆ ಮಾಡುವುದಿಲ್ಲ ಎಂದು ಕಂಪನಿಯು ತನ್ನ ಷೇರುದಾರರಿಗೆ ಭರವಸೆ ನೀಡಿದೆ. ಗಮನಾರ್ಹವೆಂದರೆ ಇನ್ಫೋಸಿಸ್ ಗಿಂತ ಕಡಿಮೆ ಫಲಿತಾಂಶ ಘೋಷಿಸಿರುವ ಇತರೆ ಐಟಿ ಕಂಪನಿಗಳು ಎಂದಿನಂತೆ ವಾರ್ಷಿಕ increment ಘೋಷಿಸಲು ನಿರ್ಧರಿಸಿವೆ.

ಇದರಿಂದ ವಾರ್ಷಿಕ increment ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳು ಭಾರಿ ಆಘಾತಕ್ಕೊಳಗಾಗಿದ್ದಾರೆ. ಕಂಪನಿಗೆ ಉದ್ಯೋಗಿಗಳಿಗಿಂತ ಷೇರುದಾರರೇ ಮುಖ್ಯವಾದರೆ ಎಂದು ಕಿಡಿಕಾರಿದ್ದಾರೆ.

ಆಗಾಗ ಕೆಲಸದ ಅವಧಿಯನ್ನು ಹೆಚ್ಚು ಮಾಡುತ್ತಾ ಕಂಪನಿ ತಮ್ಮನ್ನು ಹೆಚ್ಚು ದುಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿರುವ ಕಂಪನಿಯ ಉದ್ಯೋಗಿಗಳು hike-promotion ಗಳಿಲ್ಲದೆ ನೀರಿನಿಂದ ಹೊರಹಾಕಿದ ಮೀನಿನಂತಾಗಿದ್ದಾರೆ.

'2012ರ ಕೊನೆಯ ತ್ರೈಮಾಸಿಕದ ಸಾಧನೆ ಕಳಪೆಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲೂ ಫಲಿತಾಂಶ ನಿರಾಶಾದಾಯಕವಾಗುವ ಅಂದಾಜಿದೆ. ಕೇವಲ ಶೇ. 8-10 ರಷ್ಟು ಮಾತ್ರ ಬೆಳವಣಿಗೆ ಅಂದಾಜಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಷೇರುದಾರರ ಆಪೇಕ್ಷೆಗೆ ತಕ್ಕಂತೆ ಕೇವಲ ವಹಿವಾಟು ವೃದ್ಧಿಯತ್ತ ಮಾತ್ರ ಗಮನ ಕೇಂದ್ರೀಕರಿಸುವುದು ತನ್ನ ಆದ್ಯ ಕರ್ತವ್ಯವಾಗಿದೆ' ಎಂದು ಕಂಪನಿ ತಿಳಿಸಿದೆ.

'ಸುಮಾರು ಒಂದೂವರೆ ಲಕ್ಷ ಉದ್ಯೋಗಿಗಳು ಕಂಪನಿಯ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿದ್ದಾರೆ' ಎಂದು ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನಂದಿತಾ ಗುರ್ಜಾರ್ ಆಶಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ 2008ರಲ್ಲಿಯೂ ಕಂಪನಿ zero increment ಪ್ರಕಟಿಸಿತ್ತು. ಆದರೆ ವರ್ಷದ ಮಧ್ಯದಲ್ಲಿ ಶೇ. 10ರಷ್ಟು ಏರಿಕೆ ನೀಡಿ ನೌಕರರನ್ನು ಸಂತುಷ್ಟಗೊಳಿಸಿತ್ತು.

ಭಡ್ತಿಗೂ ಕೊಕ್: ಇದೇ ವೇಳೆ ಕಂಪನಿಯು 16,000 ಮಂದಿಗಷ್ಟೇ promotionಗಳನ್ನು ನೀಡಲು ಮುಂದಾಗಿದೆ. ಕಳೆದ ವರ್ಷ 18 ಸಾವಿರ ಮಂದಿಗೆ ಭಡ್ತಿ ಭಾಗ್ಯ ಲಭಿಸಿತ್ತು. ಇನ್ನು, ಈ ಬಾರಿ 35 ಸಾವಿರ ಮಂದಿಯನ್ನಷ್ಟೇ ನೇಮಕ ಮಾಡಿಕೊಳ್ಳಲು ಇನ್ಫಿ ನಿರ್ಧರಿಸಿದೆ.

English summary
For the quarter ended March 31, 2012, the Infosys company’s consolidated profit after tax (PAT) is down over 2%. As a result Infosys has diecided to cut salary hike and promotions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X