ಬಿಎಸ್ ವೈಗೆ ಒಳ್ಳೆದು ಮಾಡು ದೇವ್ರೆ ಎಂದ ಈಶ್ವರಪ್ಪ

KS Eshwarappa Prays for BSY
ಶಿವಮೊಗ್ಗ, ಏ.5: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ದೊರಕುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಒಬ್ಬ ಜನಪ್ರಿಯ ನಾಯಕ. ಅವರು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಕೆಲಸಗಳು ನಡೆದಿದೆ. ಜನ ಮೆಚ್ಚುಗೆ ಮುಖಂಡನ ಕಾರ್ಯ ವೈಖರಿ ನೋಡಲಾಗದೆ ಕೆಲ ವಿರೋಧಿಗಳು ಷಡ್ಯಂತ್ರದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು.

ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ಹಿರಿಯ ನಾಯಕರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ.

ಪ್ರವಾಸಕ್ಕೆ ಅನುಮತಿ ಬೇಡ: ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ ಅವರಿಗೆ ವಿಪತ್ತು ನಿರ್ವಹಣೆ ಮಾಡಿದ ಅನುಭವವಿದೆ. ಉತ್ತರ ಕರ್ನಾಟಕ ಜನರ ಸಮಸ್ಯೆಯ ಅರಿವಿದೆ.

ಪ್ರವಾಸಕ್ಕೆ ನನ್ನ ಅನುಮತಿ ಏಕೆ? ಒಳ್ಳೆ ಕೆಲಸ ಮಾಡಲು ಬಿಜೆಪಿ ಎಲ್ಲಾ ಕಾರ್ಯಕರ್ತರು ಪಣ ತೊಟ್ಟಿರುತ್ತಾರೆ. ಸಮಾಜ ಸೇವೆ ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಒಳಚರಂಡಿ, ನೀರಿನ ಸಮಸ್ಯೆ ಪರಿಹರಿಸಲು ಬಂದಿದ್ದ ಈಶ್ವರಪ್ಪ ಅವರು ನಗರದಲ್ಲಿ ಹರಿಯುವ ತುಂಗಾ ನದಿಗೆ 100 ಕೋಟಿ ರು ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+