ತಿಮ್ಮಪ್ಪನ ದರ್ಶನ ವಿಐಪಿ ಟಿಕೆಟ್ ಕ್ಯಾನ್ಸಲ್: ಟಿಟಿಡಿ

ವಿವಿಐಪಿ, ವಿಐಪಿ ವಿಭಾಗದ ಟಿಕೇಟುಗಳು ಇನ್ಮುಂದೆ ಲಭ್ಯವಿರುವುದಿಲ್ಲ. ವಿಐಪಿಗಳ ದರ್ಶನ ವ್ಯವಸ್ಥೆ ಬಗ್ಗೆ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿಟಿಡಿ ಹೇಳಿದೆ.
ಬುಧವಾರ(ಏ.4) ಅನ್ನಮಯ್ಯ ಭವನದಲ್ಲಿ ಕನುಮುರಿ ಬಪಿರಾಜು ಹಾಗೂ ಕಾರ್ಯಕಾರಿ ಅಧಿಕಾರಿ ಎಲ್ ವಿ ಸುಬ್ರಮಣ್ಯಂ ಸೇರಿದಂತೆ ಟಿಟಿಡಿ ಅಧಿಕಾರಿಗಳು ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಚಿನ್ನದ ಲೇಪನ ವಿವಾದ: ಅನಂತ ಸ್ವರ್ಣಮಯಂ ಯೋಜನೆಗೆ ತೀವ್ರವಾಗಿ ಆಡ್ಡಿ ಎದುರಾಗಿರುವುದರಿಂದ ಸದ್ಯಕ್ಕೆ ಚಿನ್ನದ ಲೇಪನ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ವಿವಾದ ಕೋರ್ಟಿನಲ್ಲಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಟಿಟಿಡಿ ಅಧಿಕಾರಿಗಳು ಹೇಳಿದರು.
ಸಾಮೂಹಿಕ ವಿವಾಹ ಮಹೋತ್ಸವ ಯೋಜನೆ 'ಕಲ್ಯಾಣಮಸ್ತು' ಹೆಸರು ಬದಲಾಯಿಸಲಾಗಿದ್ದು, ನಿತ್ಯ ಕಲ್ಯಾಣಮಸ್ತು ಎಂದು ಕರೆಯಲಾಗುತ್ತದೆ ಎಂದು ಟಿಟಿಡಿ ಹೇಳಿದೆ.
ಶ್ರೀವಾರಿ ಕಲ್ಯಾಣಂ ಯುಎಸ್ ನ ಹತ್ತು ನಗರಗಳಲ್ಲಿ ಏ.28 ರಿಂದ ಮೇ 26 ರ ಅವಧಿಯಲ್ಲಿ ಸಾಂಗವಾಗಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.












Click it and Unblock the Notifications