'ಅರ್ಥ್ ಅವರ್' ಆಚರಿಸಿ, ಶಕ್ತಿ ಉಳಿಸಿ: ಸಚಿವೆ ಶೋಭಾ

Shobha Karandlaje
ಬೆಂಗಳೂರು, ಮಾ.30: ಅರ್ಥ್ ಅವರ್ ಎಂಬ ಅರ್ಥಪೂರ್ಣ ಚಳವಳಿ ಮತ್ತೆ ಬಂದಿದೆ. ಜಾಗತಿಕ ತಾಪಮಾನ ಹಾಗೂ ವಿಪರೀತವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಈ ಅಭಿಯಾನಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಕೈ ಜೋಡಿಸಿದ್ದಾರೆ.

ಭಾರತದಲ್ಲಿ ಈ ಬಾರಿ ಮಾ.31ರಂದು ಶನಿವಾರ ರಾತ್ರಿ 8.30 ನಿಮಿಷಕ್ಕೆ ಅರ್ಥ್ ಅವರ್ ಆರಂಭವಾಗಲಿದ್ದು 9.30 ಗಂಟೆವರೆಗೆ ಆಚರಣೆ ಇರುತ್ತದೆ. ಪರಿಸರ ಸಂರಕ್ಷಣೆಗಾಗಿ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ಎಂದು ಸಚಿವೆ ಶೋಭಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಶ್ವದಾದ್ಯಂತ ನಡೆಯುವ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ. ಸಿಡ್ನಿಯಲ್ಲಿ 2007ರಲ್ಲಿ ಆರಂಭವಾದ ಈ ಚಳವಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅರ್ಥ್ ಅವರ್ ಕೇವಲ ಒಂದು ಗಂಟೆ ವಿದ್ಯುತ್ ದೀಪ ಆರಿಸುವ ಕ್ರಿಯೆಯಾಗದೆ, ಜಾಗತಿಕ ತಾಪಮಾನ ಹೆಚ್ಚಳವನ್ನು ತಗ್ಗಿಸಲು ಪ್ರತಿ ದಿನ ಪ್ರಯತ್ನ ಪಡೆಬೇಕಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ನ ಸಿಇಒ ರವಿ ಸಿಂಗ್ ಹೇಳುತ್ತಾರೆ. [ಹೆಚ್ಚಿನ ಮಾಹಿತಿಗೆ: ಆರ್ಥ್ ಅವರ್ ವೆಬ್ ತಾಣ ನೋಡಿ]

ನಟ ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮೋಹನದಾಸ್ ಪೈ ಮುಂತಾದವರು ಈ ಚಳವಳಿಗೆ ಪ್ರತಿವರ್ಷದಂತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಎಸ್ಟೀಮ್ ಮಾಲ್, ಬ್ರಿಗೇಡ್ ರಸ್ತೆಯ ಮಳಿಗೆಗಳು, ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಅರ್ಥ್ ಅವರ್ ಅನ್ನು ಆಚರಿಸಿಕೊಂಡು ಬರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+