ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗೂ ಲಂಚದ ಆಫರ್ ಬಂದಿತ್ತು

By Mahesh
|
Google Oneindia Kannada News

Bribe offered to then PM Deve Gowda
ಬೆಂಗಳೂರು, ಮಾ.29: ಭಾರತೀಯ ಸೇನೆ ಲಂಚ ಪ್ರಕರಣಕ್ಕೆ ಸಂಸದ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ(ಮಾ.29) ಹೊಸ ತಿರುವು ನೀಡಿದ್ದಾರೆ. ನನ್ನ ತಂದೆ ದೇವೇಗೌಡ ಅವರು ಪ್ರಧಾನಿಯಾಗಿದ್ದ ಕಾಲದಲ್ಲೂ ಅವರಿಗೂ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಹೊಸ ಬಾಂಬ್ ಹಾಕಿದ್ದಾರೆ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಪ್ಪಂದವನ್ನು ಕುದುರಿಸಲು ಮಧ್ಯವರ್ತಿಗಳು ಆಗಿನ(ಜೂನ್ 1996 ಹಾಗೂ ಆಗಸ್ಟ್ 1997 ಅವಧಿಯೊಳಗೆ) ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದರು ಎಂದು ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, ಮಧ್ಯವರ್ತಿಯ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.

ಭೂಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರ ಲಂಚ ಆರೋಪದ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ರೀತಿ ಲಂಚ ಆಮಿಷ ಹಿಂದಿನಿಂದ ನಡೆದುಬಂದಿದೆ ಎಂದರು. ಲೆ.ಜ ತೇಜಿಂದರ್ ಸಿಂಗ್ ಅವರು 14 ಕೋಟಿ ಲಂಚ ನೀಡಲು ಮುಂದಾಗಿದ್ದರು ಎಂದು ಭೂ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Former Karnataka Chief Minister HD Kumaraswamy on Thursday, Mar 29 dropped another bomb over the Army chief bribery scam saying that even his father - Deve Gowda was offered bribe when he (Deve Gowda) was the Prime Minister of India between June 1996 and April 1997.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X